twitter
    For Quick Alerts
    ALLOW NOTIFICATIONS  
    For Daily Alerts

    ಮೈಸೂರಿನಲ್ಲಿ ನಿರ್ಮಾಣವಾಗಲಿದೆ ಕೋಟ್ಯಂತರ ವೆಚ್ಚದ ಬೃಹತ್ ಫಿಲಂ ಸಿಟಿ

    |

    ಕನ್ನಡ ಸಿನಿಮಾರಂಗದವರ ಬಹುವರ್ಷಗಳ ಕನಸು, ರಾಜ್ಯದಲ್ಲಿ ಒಂದು ಸಕಲ ಸೌಲಭ್ಯವುಳ್ಳ ಫಿಲಂ ಸಿಟಿ ನಿರ್ಮಾಣಗೊಳ್ಳಬೇಕು ಎಂಬುದು. ಅದೀಗ ನನಸಾಗುವ ಹಾದಿಯಲ್ಲಿದೆ.

    ರಾಜ್ಯದ ಫಿಲಂ ಸಿಟಿ ಮೈಸೂರಿನ ಬಳಿ ನಿರ್ಮಾಣವಾಗಲಿದ್ದು, ಬೃಹತ್ ಫಿಲಂ ಸಿಟಿ ನಿರ್ಮಾಣಕ್ಕೆ ಸರ್ಕಾರವು 110.8 ಎಕರೆ ಜಾಗವನ್ನು ಸಹ ಮಂಜೂರು ಮಾಡಿದೆ.

    ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದ ಬಳಿ ಸರ್ಕಾರವು 110.8 ಎಕರೆ ಜಾಗವನ್ನು ಫಿಲಂ ಸಿಟಿಗಾಗಿ ನೀಡಿದೆ. ಇದೇ ಜಾಗದಲ್ಲಿ 500 ಕೋಟಿ ರು ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲಿದೆ ಸರ್ಕಾರ.

    Film City to Be Constructed In Mysuru, Estimated Budget Rs 500 crore

    ಜೆಡಿಎಸ್‌ನ ಸಂದೇಶ್ ನಾಗರಾಜ್ ಅವರು ಪರಿಷತ್‌ನಲ್ಲಿ 'ಫಿಲಂ ಸಿಟಿ' ಬಗ್ಗೆ ಸರ್ಕಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಸಿಸಿ.ಪಾಟೀಲ್, 'ಕಳೆದ ಬಜೆಟ್‌ನಲ್ಲಿಯೇ ಸಿಎಂ ಅವರು ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ಹಣವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಸೂಕ್ತ ಜಾಗ ದೊರಕಿರಲಿಲ್ಲ' ಎಂದರು.

    'ಅಂತರಾಷ್ಟ್ರೀಯ ಮಟ್ಟದ ಫಿಲಂ ಸಿಟಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಮೊದಲು ಫಿಲಂ ಸಿಟಿ ನಿರ್ಮಾಣ ಕಾರ್ಯವನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿತ್ತು. ಆ ಇಲಾಖೆಯಿಂದ ಜವಾಬ್ದಾರಿಯನ್ನು ವಾರ್ತಾ ಮತ್ತು ಪ್ರಸಾರ ಇಲಾಖೆಗೆ ವರ್ಗಾಯಿಸಲಾಗಿದೆ ಎಂದರು ಸಚಿವರು.

    ಕನ್ನಡ ಸಿನಿಮಾದವರು ಸಿನಿಮಾದ ಪೋಸ್ಟ್ ಪ್ರಡೊಕ್ಷನ್ ಮಾತ್ರವೇ ಅಲ್ಲದೆ ಬೃಹತ್ ಸೆಟ್, ಒಳಾಂಗಣ ಚಿತ್ರೀಕರಣಕ್ಕೆಲ್ಲಾ ರಾಮೋಜಿ ರಾವ್ ಫಿಲಂ ಸಿಟಿ ಗೆ ಹೋಗಬೇಕಾದ ಪರಿಸ್ಥಿತಿ ಇದೆ ಹಾಗಾಗಿ ನಮ್ಮದೇ ಆದ ಫಿಲಂ ಸಿಟಿ ನಿರ್ಮಾಣವಾಗಬೇಕು ಎಂಬುದು ಬಹುವರ್ಷಗಳ ಆಗ್ರಹ.

    Recommended Video

    ಸಿಎಂ ಬಿ.ಎಸ್ ಯಡಿಯೂರಪ್ಪರನ್ನು ಭೇಟಿಯಾದ ನಟ ಕಿಚ್ಚ ಸುದೀಪ್ | Filmibeat Kannada

    ಈ ಹಿಂದೆ ಬೆಂಗಳೂರಿನ ಸಮೀಪವೇ ಫಿಲಂ ಸಿಟಿ ನಿರ್ಮಾಣವಾಗಲಿದೆ ಎನ್ನಲಾಗಿತ್ತು. ಆದರೆ ಇದೀಗ ಮೈಸೂರಿನಲ್ಲಿ ಸ್ಥಳ ಸಹ ಮಂಜೂರು ಆಗಿರುವ ಕಾರಣ ಮೈಸೂರಿನಲ್ಲಿಯೇ ಫಿಲಂ ಸಿಟಿ ನಿರ್ಮಾಣವಾಗಲಿದೆ ಎಂಬುದು ಪಕ್ಕಾ ಆಗಿದೆ.

    English summary
    International standard Film city will be constructed in Mysuru said minister CC Patil. He also said budget will be 500 cr.
    Thursday, March 18, 2021, 9:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X