»   » ಜಗ್ಗೇಶ್ ಗೆಲುವಿಗಾಗಿ ಕಾಯುತ್ತಿದ್ದಾರೆ ಕನ್ನಡದ ಸ್ಟಾರ್ ಡೈರೆಕ್ಟರ್ಸ್

ಜಗ್ಗೇಶ್ ಗೆಲುವಿಗಾಗಿ ಕಾಯುತ್ತಿದ್ದಾರೆ ಕನ್ನಡದ ಸ್ಟಾರ್ ಡೈರೆಕ್ಟರ್ಸ್

Posted By:
Subscribe to Filmibeat Kannada
ನಾಯಕನಾಗ್ತಾರಾ ನವರಸ ನಾಯಕ ? | Filmibeat Kannada

ಕನ್ನಡ ಸಿನಿಮಾರಂಗದಲ್ಲಿ ನವರಸ ನಾಯಕ ಅಂತಾನೇ ಫೇಮಸ್ ಆಗಿ ಪ್ರೇಕ್ಷಕರನ್ನ ಸದಾ ನಗಿಸುತ್ತಾ, ರಂಜಿಸುತ್ತಾ ಇರುವ ನಟ ಜಗ್ಗೇಶ್ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದೆ ಇನ್ನ ಕೆಲವೇ ಕೆಲವು ದಿನಗಳಲ್ಲಿ ಜಗ್ಗೇಶ್ ಇಡೀ ಕ್ಷೇತ್ರ ಸಂಚಾರ ಮಾಡಿ ಮತಯಾಚನೆ ಮಾಡಲಾಗಿದೆ.

ಸಿನಿಮಾರಂಗದಲ್ಲಿ ಸಾಕಷ್ಟು ವರ್ಷಗಳಿಂದ ಗುರುತಿಸಿಕೊಂಡಿರುವ ಜಗ್ಗೇಶ್ ರಾಜಕೀಯದಲ್ಲೂ ಸೇವೆ ಸಲ್ಲಿಸಲು ಆರಂಭ ಮಾಡಿ ಸಾಕಷ್ಟು ವರ್ಷಗಳು ಕಳೆದಿವೆ. ಚಿತ್ರರಂಗ ಹಾಗೂ ರಾಜಕೀಯಕ್ಕೆ ಎಲ್ಲಿಲ್ಲದ ನಂಟು. ಜಗ್ಗೇಶ್ ಅವರಿಗೆ ಟಿಕೆಟ್ ಸಿಕ್ಕಿರುವ ವಿಚಾರ ತಿಳಿಯುತ್ತಿದ್ದಂತೆ ಸಿನಿಮಾರಂಗದ ಅನೇಕರು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಯಶವಂತಪುರದಿಂದ ಚುನಾವಣಾ ಕಣಕ್ಕೆ ಬಿಜೆಪಿ ಅಭ್ಯರ್ಥಿ ನಟ ಜಗ್ಗೇಶ್!

ಜಗ್ಗೇಶ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಚಿತ್ರರಂಗದ ಮಂದಿಗೆ ಹೇಗನ್ನಿಸಿದೆ. ಏನು ಹೇಳುತ್ತಾರೆ. ಸಿನಿಮಾ ಕಲಾವಿದರ ಪ್ರತಿಕ್ರಿಯೆ ನವರಸ ನಾಯಕ ಏನಂದ್ರು? ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಜಗ್ಗೇಶ್ ಜೊತೆಯಲ್ಲಿ ಕನ್ನಡ ಡೈರೆಕ್ಟರ್ಸ್

ನಟ ಜಗ್ಗೇಶ್ ಯಶವಂತ ಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದನ್ನ ತಿಳಿದ ತಕ್ಷಣ ಕನ್ನಡ ಸಿನಿಮಾ ನಿರ್ದೇಶಕರು ಜಗ್ಗೇಶ್ ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ ಮೂಲಕ ಶುಭಕೋರಿದ್ದಾರೆ.

ಯೋಗರಾಜ್ ಭಟ್ಟರ ಹಾರೈಕೆ

"ನನ್ನ ಪ್ರೀತಿಯ ಶ್ರೀ ಜಗಣ್ಣ, ನೀವು ಒಳ್ಲೇ ಮನಸ್ಸು ಇರುವ ವ್ಯಕ್ತಿ. ಹಾಸ್ಯಗಾರ ಈ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ದಯವಿಟ್ಟು ಸಹಕರಿಸಿ ಮತ್ತು ನಿಮ್ಮ ಮತ ನೀಡಿ" ಎಂದು ಯೋಗರಾಜ್ ಭಟ್ ಟ್ವಿಟ್ ಮಾಡಿದ್ದಾರೆ.

ರಾಜಕೀಯಕ್ಕೆ ನಿರ್ಮಾಪಕರ ಸಹಕಾರ

ನಿರ್ಮಾಪಕ ಕಾರ್ತಿಕ್ ಗೌಡ ಟ್ವೀಟ್ ಮಾಡಿ "ಇಷ್ಟು ವರ್ಷಗಳು ಅಭಿನಯದ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದಾರೆ ಮುಂದಕ್ಕೂ ರಂಜಿಸುತ್ತಾರೆ. ಯಶವಂತಪುರ ಕ್ಷೇತ್ರದ ಜನತೆ ಎಂ ಎಲ್ ಎ ಹೇಗಿರಬೇಕು ಎನ್ನುವುದನ್ನ ನಿರೀಕ್ಷೆ ಮಾಡುತ್ತಾರೋ ಅದೇ ರೀತಿಯಲ್ಲಿ ಜಗ್ಗಣ್ಣ ಇದ್ದಾರೆ. ಖಂಡಿತವಾಗಿಯೂ ಅಲ್ಲಿಯ ಜನರು ನಿಮ್ಮನ್ನೂ ಗೆಲ್ಲಿಸುತ್ತಾರೆ" ಎಂದಿದ್ದಾರೆ.

ಟ್ವಿಟ್ ಮಾಡಿದ ಪವನ್ ಒಡೆಯರ್

ನಿರ್ದೇಶಕ ಪವನ್ ಒಡೆಯರ್ ಕೂಡ ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. "ಒಳ್ಳೆಯ ಹೃದಯ ಹೊಂದಿರುವ ರಾಜಕಾರಣಿ ತುಂಬಾ ಅಪರೂಪ. ಜಗ್ಗೇಶ್ ಅಣ್ಣ ಯಾವಾಗಲೂ ಎಲ್ಲರಿಗೂ ಸಹಾಯ ಹಸ್ತ ಚಾಚುವ ವ್ಯಕ್ತಿ ಅವರಿಗೆ ಮತ ನೀಡಿ" ಎಂದಿದ್ದಾರೆ.

ರಾಜ್ ಕುಮಾರ್ ಆಶೀರ್ವಾದ ಪಡೆದ ಜಗ್ಗೇಶ್

ನಾಮಪತ್ರ ಸಲ್ಲಿಸಿದ ನಂತರ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದರು ಜಗ್ಗೇಶ್ ಅಷ್ಟೇ ಅಲ್ಲದೆ ಅವರ ಮೊದಲ ಪ್ರಚಾರದ ವಿಡಿಯೋದಲ್ಲಿ ಬಳಕೆ ಆಗಿರುವ ಹಾಡು ಕೂಡ ಡಾ ರಾಜ್ ಕುಮಾರ್ ಅವರ ಚಿತ್ರದ್ದೇ ಎನ್ನುವುದು ವಿಶೇಷ.

ಅಣ್ಣಾವ್ರ ಅಭಿಮಾನಿ ಜಗ್ಗೇಶ್ ಗೆ ಅದೃಷ್ಟ ಅಂದ್ರೆ ಇದೇ ನೋಡಿ

English summary
Kannada actor Jaggesh is contesting Karnataka assembly election from Yashwantpur constituency. The Kannada film directors has tweets his opinion on Twitter about Jaggesh

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X