»   » 'ರಿಯೋ ಒಲಿಂಪಿಕ್'ನಲ್ಲಿ ಕಂಚು ಗೆದ್ದ ಸಾಕ್ಷಿ: ತಾರೆಯರ ಶುಭಾಶಯ

'ರಿಯೋ ಒಲಿಂಪಿಕ್'ನಲ್ಲಿ ಕಂಚು ಗೆದ್ದ ಸಾಕ್ಷಿ: ತಾರೆಯರ ಶುಭಾಶಯ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ರಿಯೋ ಒಲಿಂಪಿಕ್ಸ್ ನಲ್ಲಿ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಭಾರತಕ್ಕೆ ಚೊಚ್ಚಲ, ಕಂಚಿನ ಪದಕ ಗೆದ್ದುಕೊಟ್ಟ ಸಾಕ್ಷಿ ಮಲಿಕ್ ಅವರಿಗೆ ಅಭಿನಂದನೆಗಳು ಸಾಗರದಂತೆ ಹರಿದು ಬರುತ್ತಿದೆ. ಭಾರತದ ಕೀರ್ತಿ ಪತಾಕೆಯನ್ನು ಅಲ್ಲಿ ಹಾರಿಸಿದ ದೇಶದ ಹೆಮ್ಮೆಯ ಮಗಳು ಸಾಕ್ಷಿ ಅವರಿಗೆ ಇಡೀ ಚಿತ್ರರಂಗದ ಸ್ಟಾರ್ ಗಳು ಶುಭಾಶಯಗಳ ಮಹಾಪೂರವನ್ನು ಸುರಿಸುತ್ತಿದ್ದಾರೆ.

  ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗದ ಸ್ಟಾರ್ ನಟ-ನಟಿಯರು ಸಾಕ್ಷಿ ಮಾಡಿದ ಸಾಧನೆಯನ್ನು ಮನಸಾರೆ ಹಾಡಿ ಹೊಗಳುತ್ತಿದ್ದಾರೆ. 12 ದಿನ ಕಳೆದರೂ ಭಾರತಕ್ಕೆ ಯಾವುದೇ ಪದಕ ಬರಲಿಲ್ಲ ಅಂತ ಕೊರಗುತ್ತಿದ್ದ ಕ್ರೀಡಾಭಿಮಾನಿಗಳಿಗೆ ಸಾಕ್ಷಿ ಅವರು ಕಂಚು ಗೆಲ್ಲುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.[ಸಾಕ್ಷಿ ಸಾಧನೆಗೆ ಬಹುಪರಾಕ್ ಎಂದ ಪ್ರಧಾನಿ ಮೋದಿ]

  ಹೇಳಿ-ಕೇಳಿ ಇಂದು ಅಣ್ಣ-ತಂಗಿಯರ ಪವಿತ್ರ ಬಂಧವಾದ ರಕ್ಷಾಬಂಧನದ ದಿನದಂದೇ ಸಾಕ್ಷಿ ಅವರು ಮಾಡಿದ ಅಭೂತಪೂರ್ವ ಸಾಧನೆಗೆ ಇಡೀ ದೇಶವೇ ಆಕೆಯನ್ನು ಕೊಂಡಾಡುತ್ತಿದೆ.

  ಇನ್ನು ಆಕೆಗೆ ಸಹೋದರ ಏನಾದ್ರೂ ಇದ್ದರೆ, ಅವರಿಗೆ ಹೆಮ್ಮೆಯ ದಿನ ಕೂಡ. ಜೊತೆಗೆ ಜೀವನದಲ್ಲಿ ಮರೆಯಲಾಗದ ಉಡುಗೊರೆಯನ್ನು ಸಾಕ್ಷಿ ತಮ್ಮ ಸಹೋದರರಿಗೆ ನೀಡಿದ್ದಾರೆ.[ಭಾರತದ ಹೆಮ್ಮೆಯ ಪುತ್ರಿ ಸಾಕ್ಷಿಗೆ ಹರ್ಯಾಣದಿಂದ ಬಹುಮಾನ!]

  ಇಡೀ ಚಿತ್ರರಂಗ ಕ್ಷೇತ್ರದ ಸ್ಟಾರ್ ನಟ-ನಟಿಯರು ಸಾಕ್ಷಿ ಮಾಡಿದ ಸಾಧನೆಗೆ ಟ್ವಿಟ್ಟರ್ ಮೂಲಕ ಸಲ್ಲಿಸಿದ ಅಭಿಮಾನಿಗಳ ಮಹಾಪೂರವನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

  ಸ್ಟಾರ್ ಗಳ ಟ್ವೀಟ್ ಸರಮಾಲೆ

  ಕನ್ನಡ ಚಿತ್ರರಂಗ ಸೇರಿದಂತೆ, ತಮಿಳು, ಹಿಂದಿ ಚಿತ್ರರಂಗದ ಹಲವಾರು ಸ್ಟಾರ್ ನಟ-ನಟಿಯರು, ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಹೆಮ್ಮೆಯ ಕುವರಿ ಸಾಕ್ಷಿ ಮಲಿಕ್ ಅವರಿಗೆ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಶುಭಾಶಯದ ಸುರಿಮಳೆ ಸುರಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಕೂಡ ಸಾಕ್ಷಿ ಅವರನ್ನು ಅಭಿನಂದಿಸಿದ್ದಾರೆ.

  ನಟಿ ಶ್ವೇತಾ ಪಂಡಿತ್

  "ಹೆಚ್ಚಿನ ಎಫರ್ಟ್ ಹಾಕಿ, ಎಲ್ಲರ ವಿರುದ್ಧ ನಿಂತು ಸಾಧಿಸಿದ್ದೀರಿ ಸಾಕ್ಷಿ ಮಲಿಕ್ ಅವರೇ. ನೀವು ನಮ್ಮ ಹೃದಯವನ್ನು ಕೂಡ ಗೆದ್ದಿದ್ದೀರಿ. ಭಾರತ ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತದೆ". ಎಂದು ಕನ್ನಡ ನಟಿ ಶ್ವೇತಾ ಪಂಡಿತ್ ಅವರು ಟ್ವೀಟ್ ಮಾಡಿದ್ದಾರೆ.

  ನಟಿ ಐಂದ್ರಿತಾ ರೇ

  "ಸಾಕ್ಷಿ ಮಲಿಕ್ ಭಾರತಕ್ಕಿದ್ದ ಅಪಶಕುನವನ್ನು ಪದಕ ಗೆಲ್ಲುವ ಮೂಲಕ ಮುರಿದಿದ್ದಾರೆ. ನಮಗೂ ಹೆಮ್ಮೆಯಾಗುವಂತೆ ಮಾಡಿದ್ದಾರೆ". ಎಂದು ನಟಿ ಐಂದ್ರಿತಾ ರೇ ಅವರು ಟ್ವೀಟ್ ಮಾಡಿದ್ದಾರೆ.

  ಬಾಲಿವುಡ್ ನಟಿ ಮಾಧುರಿ ದೀಕ್ಷಿತ್

  'ಶುಭಾಶಯ ಸಾಕ್ಷಿ ಮಲಿಕ್, ನಾವು ಹೆಮ್ಮೆ ಪಡುವಂತೆ ನೀವು ಮಾಡಿದ್ದೀರಿ'. ಎಂದು ನಾಟ್ಯ ಮಯೂರಿ ಮಾಧುರಿ ದೀಕ್ಷಿತ್ ಅವರು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

  ಬಾಲಿವುಡ್ ನಟ ಶಾಹೀದ್ ಕಪೂರ್

  'ಧನ್ಯವಾದ ಸಾಕ್ಷಿ ಮಲಿಕ್ ಅವರೇ. ಎಲ್ಲಾ ಅಥ್ಲಿಟ್ ಗಳಿಗೂ ಇದು ಹೆಮ್ಮೆಯ ವಿಷಯ. ಜೊತೆಗೆ ಎಲ್ಲಾ ಅಥ್ಲಿಟ್ ಗಳು ನಾವು ಶೈನ್ ಆಗಲು ಅತ್ಯುತ್ತಮ ಫೈಟ್ ಕೊಟ್ಟಿದ್ದಾರೆ'. ಎಂದು ಶಾಹೀದ್ ಕಪೂರ್ ಟ್ವೀಟ್ ಮಾಡಿದ್ದಾರೆ.

  ಬಾಲಿವುಡ್ ನಟ ಅಜಯ್ ದೇವಗನ್

  'ಸಾಕ್ಷಿ ಮಲಿಕ್ ನೀವು ನಮಗೆ ಬೇಕು. ನಿಮ್ಮನ್ನು ಭಾರತ ಎಷ್ಟು ಪ್ರೀತಿಸುತ್ತೆ ಗೊತ್ತಾ?. ನಾವು ಕೂಡ ನಿಮ್ಮ ಗೆಲುವನ್ನು ಹೆಮ್ಮೆಯಿಂದ ಹಬ್ಬ ಆಚರಿಸಿದಂತೆ ಆಚರಿಸುತ್ತಿದ್ದೇವೆ'. ಎಂದು ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.

  ಬಾಲಿವುಡ್ ನಟ ಅಕ್ಷಯ್ ಕುಮಾರ್

  "ಮೊದಲ ಪದಕ ಬಂದಿದೆ! ಧನ್ಯವಾದ ಮತ್ತು ಶುಭಾಶಯ ಸಾಕ್ಷಿ ಮಲಿಕ್. ಇಂದಿನ ಬಿಲಿಯನ್ ನಗುವಿಗೆ ನೀವು ಕಾರಣ" ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

  ಅಭಿಷೇಕ್ ಬಚ್ಚನ್

  "ತುಂಬಾ ಶುಭಾಶಯಗಳು ಸಾಕ್ಷಿ ಮಲಿಕ್. ನಾವಿಂದು ತುಂಬಾ-ತುಂಬಾ ಹೆಮ್ಮೆ ಪಡುತ್ತೇವೆ" ಎಂದು ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.

  ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್

  "ಎಂತಹ ಅದ್ಭುತ ಸನ್ನಿವೇಶ, ಇಡೀ ದೇಶವೇ ಹೆಮ್ಮೆ ಪಡುವ ಸಂದರ್ಭ. ಶುಭಾಶಯ ಸಾಕ್ಷಿ ಮಲಿಕ್. ನಿಮಗೊಂದಯ ಸಲಾಂ" ಎಂದು ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಟ್ವೀಟ್ ಮಾಡಿದ್ದಾರೆ.

  ಬಾಲಿವುಡ್ ನಟ ರಿತೇಶ್ ದೇಶ್ ಮುಖ್

  "ಭಾರತದ ಧ್ವಜ ಬಹಳ ಎತ್ತರದಲ್ಲಿ ಹಾರುತ್ತಿದೆ. ನೀವು ಇಡೀ ಭಾರತವೇ ಹೆಮ್ಮೆ ಪಡುವ ಕೆಲಸ ಮಾಡಿದ್ದೀರಿ. ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ತಂದಿದ್ದಕ್ಕಾಗಿ ನಿಮಗೆ ಶುಭಾಶಯ ಸಾಕ್ಷಿ ಮಲಿಕ್" ಎಂದು ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಟ್ವೀಟ್ ಮಾಡಿದ್ದಾರೆ.

  ನಟ ಕಮ್ ನಿರ್ದೇಶಕ ಕರಣ್ ಜೋಹರ್

  "ಸಾಧನೆ ಮಾಡಿದವರ ತುಂಬಾ ಮುಗ್ದವಾದ ನಗು ಮತ್ತು ನಮ್ಮ ನಗು ಹೆಮ್ಮೆ ಪಡುವಂತದ್ದು'. ಸಾಕ್ಷಿ ಮಲಿಕ್ ಶುಭಾಶಯ ಎಂದು ಕರಣ್ ಜೋಹರ್ ಟ್ವೀಟ್ ಮಾಡಿದ್ದಾರೆ.

  ಆಯುಷ್ಮಾನ್ ಖುರಾನ್

  "ಭಾರತ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದೆ. ಇದು ಮಹಿಳಾ ಶಕ್ತಿ" ಎಂದು ನಟ ಕಮ್ ಸಂಗೀತಗಾರ ಆಯುಷ್ಮಾನ್ ಖುರಾನ್ ಟ್ವೀಟ್ ಮಾಡಿದ್ದಾರೆ.

  ನಟಿ ನಯನತಾರಾ

  "ಶುಭಾಶಯ ಸಾಕ್ಷಿ ಮಲಿಕ್, ಭಾರತದ ಮೊದಲ ಕಂಚಿನ ಪದಕ ಗೆದ್ದಿದ್ದಕ್ಕೆ. ಹೆಮ್ಮೆಯ ಸಂಗತಿ" ಎಂದು ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಟ್ವೀಟ್ ಮಾಡಿದ್ದಾರೆ.

  English summary
  Woman wrestler Sakshi Malik ended India's long and painful wait for a medal at the Olympic Games by clinching the bronze in the 58kg category. after her win, congratulatory messages, praises and good cheer began flooding the young Olympian's timeline across all social media platforms. Film Industry Celebrities Congratulates Sakshi Malik for win at Rio Olympics.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more