For Quick Alerts
  ALLOW NOTIFICATIONS  
  For Daily Alerts

  ಸೆಲೆಬ್ರಿಟಿಗಳಿಂದ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳ ಮಹಾಪೂರ

  By Suneetha
  |

  ಇಂದು (ಆಗಸ್ಟ್ 15) ಎಲ್ಲೆಲ್ಲಿ ನೋಡಿದರೂ ಭಾರತದ ತ್ರಿವರ್ಣ ಧ್ವಜ ಹಾರಾಡುತ್ತಿದೆ, ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮ ತುಳುಕಾಡುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು, ದೊಡ್ಡವರು ಕೂಡ ಸ್ವಾತಂತ್ರ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.

  ಅದ್ರಲ್ಲೂ ಚಿಕ್ಕ-ಚಿಕ್ಕ ಮಕ್ಕಳಂತೂ ಈ ದಿನ ಹುರ್ರೇ...ಅಂತ ಕುಣಿದು ಕುಪ್ಪಳಿಸುತ್ತಿದ್ದಾರೆ. ಕೇಸರಿ-ಬಿಳಿ-ಹಸಿರು ಬಣ್ಣದ ಬಟ್ಟೆ ಧರಿಸಿ, ಬಿಳಿ ಬಣ್ಣದ ಶೂ ಧರಿಸಿ ಸಾಲಾಗಿ ಸಾಗುವ ಪುಟ್ಟ-ಪುಟ್ಟ ಮಕ್ಕಳನ್ನು ನೋಡೋದೇ ಕಣ್ಣಿಗೆ ಹಬ್ಬ.[ಚಿತ್ರಗಳಲ್ಲಿ: ಭಾರತದೆಲ್ಲೆಡೆ ಕಂಡು ಬಂದ ಸ್ವತಂತ್ರ ದಿನ ಸಂಭ್ರಮ]

  ಅದೇನೇ ಇರಲಿ, ಇದೀಗ ಚಿತ್ರರಂಗದ ಸ್ಟಾರ್ ಸೆಲೆಬ್ರಿಟಿಗಳು ಕೂಡ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಜೊತೆಗೆ ಎಲ್ಲರಿಗೂ ಸ್ವಾತಂತ್ರ ದಿನಾಚರಣೆಯ ಶುಭಾಶಯ ಕೋರಿದ್ದಾರೆ.[ರಮೇಶ್-ಗಣೇಶ್ ರಿಂದ ಧೀರ ಯೋಧರಿಗೊಂದು ಬಹಿರಂಗ ಪತ್ರ]

  ಎಲ್ಲಾ ಚಿತ್ರರಂಗದ ಸ್ಟಾರ್ ಸೆಲೆಬ್ರಿಟಿಗಳು ಟ್ವಿಟ್ಟರ್ ಮೂಲಕ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿದ್ದು, ಸ್ಟಾರ್ಸ್ ಗಳ ಟ್ವೀಟ್ ಕಲೆಕ್ಷನ್ಸ್ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ......

  ಎಲ್ಲಾ ಚಿತ್ರರಂಗದ ಸ್ಟಾರ್ಸ್ ಟ್ವೀಟ್

  ಎಲ್ಲಾ ಚಿತ್ರರಂಗದ ಸ್ಟಾರ್ಸ್ ಟ್ವೀಟ್

  ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ಎಲ್ಲಾ ಚಿತ್ರರಂಗದ ಸ್ಟಾರ್ ಗಳು ಸ್ವಾತಂತ್ರ ದಿನಾಚರಣೆಯ ಶುಭಾಶಯವನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.[ಸ್ವಾತಂತ್ರ್ಯೋತ್ಸವದ ದಿನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೆಲೆಬ್ರಿಟಿಗಳು]

  ನಟಿ ಪಾರುಲ್ ಯಾದವ್

  ನಟಿ ಪಾರುಲ್ ಯಾದವ್

  "ಭಾರತದಲ್ಲಿ ಯಾವುದೇ ಕಂಡೀಷನ್ ಇರಲಿ, ಇವತ್ತಿಗೂ ನನಗೆ ಭರವಸೆ ಇದೆ. ಒಬ್ಬರಿಂದ ನಾವು ಯಾವಾಗಲೂ ಚಾಂಪಿಯನ್ ಆಗಿ ಎದ್ದು ನಿಲ್ಲುತ್ತೇವೆ. ಇಂಡಿಯನ್ ಆಗಿರೋದಕ್ಕೆ ಹೆಮ್ಮೆ ಇದೆ" ಎಂದು ನಟಿ ಪಾರುಲ್ ಯಾದವ್ ಅವರು ಟ್ವೀಟ್ ಮಾಡಿದ್ದಾರೆ.

  ತೆಲುಗು ನಟ ಅಲ್ಲು ಅರ್ಜುನ್

  ತೆಲುಗು ನಟ ಅಲ್ಲು ಅರ್ಜುನ್

  ಎಲ್ಲರಿಗೂ 70ನೇ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು ಎಂದು ತೆಲುಗು ನಟ ಅಲ್ಲು ಅರ್ಜುನ್ ಅವರು ಟ್ವೀಟ್ ಮಾಡಿದ್ದಾರೆ.

  ನಟಿ ಪ್ರಾಚಿ ದೇಸಾಯಿ

  ನಟಿ ಪ್ರಾಚಿ ದೇಸಾಯಿ

  ಮುದ್ದಾದ ಅಳಿಲು..ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು. ಎಂದು ನಟಿ ಪ್ರಾಚಿ ದೇಸಾಯಿ ಅವರು ಟ್ವೀಟ್ ಮಾಡಿದ್ದಾರೆ.

  ನಟಿ ಪ್ರಿಯಾಮಣಿ

  "ಭಾರತೀಯಳಾಗಿರೋದಕ್ಕೆ ಹೆಮ್ಮೆ ಆಗುತ್ತಿದೆ. ಎಲ್ಲರಿಗೂ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು" ಎಂದು ನಟಿ ಪ್ರಿಯಾಮಣಿ ಟ್ವೀಟ್ ಮಾಡಿದ್ದಾರೆ.

  ದರ್ಶನ್

  'ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು. ನಮ್ಮ ಕೈಲಾದಷ್ಟು ದೇಶಸೇವೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳೋಣ. ಭಾರತೀಯನಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸೋಣ. ನಿಮ್ಮ ದಾಸ ದರ್ಶನ್' ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

  ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ

  ಸ್ವಾತಂತ್ರ ದಿನವನ್ನು ಎಂಜಾಯ್ ಮಾಡುತ್ತಾ ಗೌರವಿಸೋಣ, ಗೌರವಿಸೋದು ಎಲ್ಲಾ ಪೌರರ ಹಕ್ಕು ಕೂಡ. ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು ಎಂದು ಸಿದ್ಧಾರ್ಥ ಮಲ್ಹೋತ್ರಾ ಅವರು ಟ್ವೀಟ್ ಮಾಡಿದ್ದಾರೆ.

  ಶಿಲ್ಪಾ ಶೆಟ್ಟಿ

  "ಸ್ವಾತಂತ್ರ ದಿನಾಚರಣೆಯನ್ನು ಗೌರವಿಸೋಣ, ಭಾರತೀಯಳಾಗಿದ್ದಕ್ಕೆ ಹೆಮ್ಮೆ ಇದೆ. ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು' ಎಂದು ಬಾಲಿವುಡ್ ಬೆಡಗಿ, ಕರಾವಳಿ ಹುಡುಗಿ ಶಿಲ್ಪಾ ಶೆಟ್ಟಿ ಅವರು ಟ್ವೀಟ್ ಮಾಡಿದ್ದಾರೆ.

  ನಟ ಪ್ರಭಾಸ್

  'ನನ್ನೆಲ್ಲಾ ಭಾರತೀಯರಿಗೆ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು, ಜೈ ಹಿಂದ್, ಭಾರತ್ ಮಾತಾಕೀ ಜೈ'. ಎಂದು ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಟ್ವೀಟ್ ಮಾಡಿದ್ದಾರೆ.

  ನಟಿ ಶ್ರುತಿ ಹಾಸನ್

  'ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು' ಅಂತ ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್ ಅವರು ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.

  ಇಳೆಯದಳಪತಿ ವಿಜಯ್

  'ಎಲ್ಲರಿಗೂ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು' ಎಂದು ತಮಿಳಿನ ಖ್ಯಾತ ನಟ ಇಳೆಯದಳಪತಿ ವಿಜಯ್ ಟ್ವೀಟ್ ಮಾಡಿದ್ದಾರೆ.

  English summary
  Sandalwood, Bollywood, Kollywood, Tollywood Film Industry Celebrities tweet Independence day wishes is here check it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X