For Quick Alerts
  ALLOW NOTIFICATIONS  
  For Daily Alerts

  ಪೋಲಿಸರಿಗೆ ಅಭಿನಂದನೆ ಸಲ್ಲಿಸಿದ ಕಲಾ ಸಾಮ್ರಾಟ್

  By Suneetha
  |

  ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರ ಕಾರಿನಿಂದ ನಿನ್ನೆ (ಜುಲೈ 29) ಕಳುವಾಗಿದ್ದ ಸ್ಕ್ರಿಪ್ಟ್, ಹಣ, ಹಾಗೂ ಮತ್ತಿತ್ತರ ದಾಖಲೆಗಳಿದ್ದ ಸೂಟ್ ಕೇಸ್ ಧಿಡೀರ್ ಅಂತ ಪ್ರತ್ಯಕ್ಷವಾಗಿದೆ.

  ಜುಲೈ 29ರಂದು ನಟ ಕಮ್ ನಿರ್ದೇಶಕ ವಿಜಯನಗರದಲ್ಲಿರುವ ಫೆಡರಲ್ ಬ್ಯಾಂಕ್ ಗೆ ತೆರಳಿ ಮಾರುತಿ ಮಂದಿರದ ಬಳಿ ಇರುವ ಸರ್ವೀಸ್ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದ ಸಂದರ್ಭದಲ್ಲಿ ಕಳ್ಳರು ಕೈ ಚಳಕ ತೋರಿಸಿ ಸೂಟ್ ಕೇಸ್ ಕಳವು ಮಾಡಿದ್ದರು.

  ಈ ಕುರಿತಂತೆ ನಿರ್ದೇಶಕ ಎಸ್.ನಾರಾಯಣ್ ಅವರು ವಿಜಯನಗರ ಪೋಲಿಸರಿಗೆ ದೂರು ನೀಡಿದ್ದರು. ಇದೀಗ ಕಳುವಾಗಿದ್ದ ಸೂಟ್ ಕೇಸ್ ಪತ್ತೆಯಾಗಿದ್ದು, ಅದರಲ್ಲಿದ್ದ ಮೂರು ಲಕ್ಷ ರೂಪಾಯಿ ಹಣ, ಹಾಗೂ ಹನ್ನೆರಡು ಸ್ಕ್ರಿಪ್ಟ್ ಜೊತೆಗೆ ಮಹತ್ವದ ದಾಖಲೆಗಳು ಹಾಗೆ ವಾಪಸ್ ಸಿಕ್ಕಿರುವುದಕ್ಕೆ ಎಸ್.ನಾರಾಯಣ್ ಫುಲ್ ಖುಷ್ ಆಗಿಬಿಟ್ಟಿದ್ದಾರೆ.

  ನಿನ್ನೆ ಎಸ್.ನಾರಾಯಣ್ ಕಾರಿನಿಂದ ಕಳುವು ಮಾಡಿದ್ದ ಸೂಟ್ ಕೇಸ್ ಅನ್ನು ಕಳ್ಳರು ಬ್ಯಾಟರಾಯನಪುರ ಪೋಲಿಸ್ ಠಾಣೆ ಹಿಂಭಾಗದಲ್ಲಿರುವ ನರ್ಸಿಂಗ್ ಹೋಮ್ ಸಮೀಪದ ಪಾದಚಾರಿ ಮಾರ್ಗದಲ್ಲಿ ಎಸೆದು ಪರಾರಿಯಾಗಿದ್ದರು.

  ರಸ್ತೆ ಬದಿಯಲ್ಲಿ ಬಿದ್ದಿದ್ದ ಸೂಟ್ ಕೇಸ್ ಅನ್ನು ಕಂಡು ದಾರಿಹೋಕರು ಬ್ಯಾಟರಾಯನಪುರ ಪೋಲಿಸರಿಗೆ ಸುದ್ದಿ ಮುಟ್ಟಿಸಿದ್ದರು. ಸ್ಥಳಕ್ಕೆ ಧಾವಿಸಿದ ಪೋಲಿಸರು ಅಪರಿಚಿತವಾಗಿ ಬಿದ್ದಿದ್ದ ಸೂಟ್ ಕೇಸ್ ಬಗ್ಗೆ ಅನುಮಾನಗೊಂಡು ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಕರೆಸಿ ಪರಿಶೀಲನೆ ನಡೆಸಲಾಯಿತು.

  ನಂತರ ಯಾವುದೇ ತೊಂದರೆ ಕಾಣದಿದ್ದಾಗ ಪೋಲಿಸ್ ಠಾಣೆಗೆ ತಂದು ನಂಬರ್ ಲಾಕ್ ಹೊಂದಿರುವ ಸೂಟ್ ಕೇಸ್ ತೆರೆದಾಗ ಅದು ಎಸ್.ನಾರಾಯಣ್ ಅವರ ಕಾರಿನಿಂದ ಕಳುವು ಮಾಡಲಾಗಿದ್ದ ಸೂಟ್ ಕೇಸ್ ಎಂದು ಖಾತ್ರಿಯಾಗಿದೆ.

  ಇದೀಗ ಕಳುವಾಗಿದ್ದ ಎಲ್ಲಾ ದಾಖಲೆಗಳು ಹಾಗೆಯೇ ಇರುವುದನ್ನು ಖಚಿತಪಡಿಸಿಕೊಂಡು ಬ್ಯಾಟರಾಯನಪುರ ಪೋಲಿಸರು ಎಸ್.ನಾರಾಯಣ್ ಅವರ ಸೂಟ್ ಕೇಸ್ ಅನ್ನು ತಕ್ಷಣ ವಿಜಯನಗರ ಪೋಲಿಸರಿಗೆ ಹಸ್ತಾಂತರಿಸಿದ್ದಾರೆ.

  English summary
  Sandalwood popular director, actor S.Narayan gets his stolen scripts back, thanks Vijayanagar Police. S.Narayan's car robbed by miscreants on Wednesday, July 29 at Maruti Mandir, Vijayanagar, Bengaluru. Case registered in Vijayanagar police station. Valuable documents and 3 lakh cash stolen.
  Thursday, July 30, 2015, 18:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X