Don't Miss!
- News
ವಿಮಾನದಲ್ಲಿ ವೃದ್ಧ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಆರೋಪಿಗೆ ಜಾಮೀನು!
- Sports
WPL Auction 2023: ದುಬಾರಿ ಮೊತ್ತಕ್ಕೆ ಹರಾಜಾಗಬಹುದಾದ ಐವರು ಆಟಗಾರರು
- Technology
ನೀವು ಎಸ್ಬಿಐ ಗ್ರಾಹಕರೇ?... ಯುಪಿಐ ಪೇಮೆಂಟ್ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ!
- Finance
Economic Survey: ನವೆಂಬರ್ವರೆಗೆ 135.2 ಕೋಟಿ ಆಧಾರ್ ಸಂಖ್ಯೆ ಜನರೇಟ್, 12-ಡಿಜಿಟ್ ಪ್ರಾಮುಖ್ಯತೆ ತಿಳಿಯಿರಿ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿತ್ರರಂಗದ ಗಣ್ಯರಿಂದ ಕಾರ್ಮಿಕ ಸಚಿವರ ಭೇಟಿ, ಸಹಾಯಕ್ಕೆ ಮನವಿ
ಕೊರೊನಾ ದಿಂದ ರಾಜ್ಯ ತತ್ತರಿಸಿದ್ದು, ಬಡವರು, ದಿನಗೂಲಿ ನೌಕರರು ಹೊತ್ತಿನ ಊಟಕ್ಕೆ ಕಷ್ಟಪಡುವಂತಹಾ ಸ್ಥಿತಿ ನಿರ್ಮಾಣವಾಗಿದೆ.
ಸಿನಿಮಾ ಉದ್ಯಮ ಸಹ ಕೊರೊನಾ ಹೊಡೆತಕ್ಕೆ ಜರ್ಜರಿತವಾಗಿದ್ದು, ಸಾಲ ಪಡೆದ ನಿರ್ಮಾಪಕರು ಬಡ್ಡಿ ತಲೆ ಮೇಲೆ ಹೊತ್ತುಕೊಂಡಿದ್ದರೆ. ಸಿನಿಮಾ ಚಿತ್ರೀಕರಣವನ್ನೇ ನಂಬಿಕೊಂಡಿದ್ದ ದಿನಗೂಲಿ ನೌಕರರ ಪಾಡು ಹೇಳ ತೀರದು.
ಇಂಥಹಾ ಸಂದಿಗ್ಧ ಸಮಯದಲ್ಲಿ ಸಿನಿಮಾ ಉದ್ಯಮದ ಪ್ರಮುಖರು ಸರ್ಕಾರದ ನೆರವನ್ನು ಬೇಡಿದ್ದು, ಇಂದು ಸಿನಿಮಾದ ಕೆಲವು ಸಂಘ-ಸಂಸ್ಥೆಗಳ ಮುಖಂಡರು, ಕಾರ್ಮಿಕ ಸಚಿವರನ್ನು ಭೇಟಿಯಾಗಿ ಮನವಿಗಳನ್ನು ಸಲ್ಲಿಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಒಕ್ಕೂಟದ ಕಾರ್ಯದರ್ಶಿ ರವೀಂದ್ರ ಇನ್ನೂ ಹಲವು ಪ್ರಮುಖರು ಇಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ದಿನಸಿ, ತರಕಾರಿಗಳು ಇನ್ನಿತರ ಅಗತ್ಯ ಸಾಮಗ್ರಿಗಳ ನೆರವನ್ನು ಸಿನಿಮಾದ ದಿನಗೂಲಿ ನೌಕರರಿಗೆ ವಿಸ್ತರಿಸಿರೆಂದು ಗಣ್ಯರು ಕಾರ್ಮಿಕ ಸಚಿವರನ್ನು ಮನವಿ ಮಾಡಿದರು.

ಇಷ್ಟೆ ಅಲ್ಲದೆ, ಸಿನಿಮಾ ಉದ್ಯಮದ ಪ್ರಸ್ತುತ ಸ್ಥಿತಿ, ಅನುಭವಿಸಿರುವ ನಷ್ಟ, ಮುಂದೆ ಆಗಬೇಕಾಗಿರುವ ಕಾರ್ಯಗಳು ಇನ್ನೂ ಹಲವಾರು ವಿಷಯಗಳ ಬಗ್ಗೆ ಈ ಪ್ರಮುಖರು ಸಚಿವರ ಬಳಿ ಚರ್ಚೆ ನಡೆಸಿದ್ದಾರೆ.