For Quick Alerts
  ALLOW NOTIFICATIONS  
  For Daily Alerts

  ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಸಿನಿ ತಾರೆಯರು

  |

  ವೈವಿಧ್ಯಮಯ ಸಂಸ್ಕೃತಿಗಳ ಸಮ್ಮಿಲನ ಹಾಗೂ ಸಂಬಂಧಗಳ ಬೆಸೆಯುವ ಹೋಳಿ ಹಬ್ಬ ಅಂದ್ರೆ ಯುವಕ, ಯುವತಿಯರಿಗೆ ಎಲ್ಲಿಲ್ಲದ ಸಂಭ್ರಮ. ಶಾಲೆ, ಕಾಲೇಜು, ಕಚೇರಿ ಹೀಗೆ ಎಲ್ಲೇ ಇದ್ದರೂ ಹೋಳಿ ಆಡಿ ಖುಷಿ ಪಡ್ತಾರೆ. ಇಂತಹ ಹೋಳಿ ಹಬ್ಬವನ್ನ ದೇಶದಾದ್ಯಂತ ಸಂತಸದಿಂದ ಬಹಳ ಅದ್ಧೂರಿಯಾಗಿ ಆಚರಿಸಲಾಗ್ತಿದೆ.

  ಇತ್ತೀಚಿನ ವರ್ಷಗಳಂತೂ ಹೋಳಿ ಆಟದ ಸ್ವರೂಪವೇ ಬೇರೆ ಆಗಿದೆ. ವರ್ಷದಿಂದ ವರ್ಷಕ್ಕೆ ಬಣ್ಣದ ಆಟದ ರಂಗು ರಂಗೇರುತ್ತಲೆ ಇದೆ. ಅದರಲ್ಲೂ ಸಿನಿಮಾ ತಾರೆಯರು ಈ ಬಣ್ಣದ ಹಬ್ಬವನ್ನ ತುಂಬಾ ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡ್ತಾರೆ.

  ಕನ್ನಡದ ಸ್ಟಾರ್ ನಟಿಯರಾದ ಶಾನ್ವಿ ಶ್ರೀವಾಸ್ತವ್, ಶ್ರೀಮುರಳಿ ಪತ್ನಿ, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಹಲವು ಸ್ಯಾಂಡಲ್ ವುಡ್ ಸ್ಟಾರ್ ಗಳು ಹೋಳಿ ಹಬ್ಬವನ್ನ ಸಂಭ್ರಮಿಸಿದ್ದಾರೆ. ಆ ಕಡೆ ಬಾಲಿವುಡ್ ನಲ್ಲಿ ಕಾಜೋಲ್, ಐಶ್ವರ್ಯ ರೈ, ಕತ್ರಿನಾ ಕೈಫ್ ಸೇರಿದಂತೆ ಹಲವು ಸಂಭ್ರಮಿಸಿದ್ದಾರೆ. ಸಿನಿಮಾ ಸ್ಟಾರ್ಸ್ ಹೋಳಿಯಲ್ಲಿ ಮಿಂದೆದ್ದಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೇಗಿತ್ತು ಸಿನಿತಾರೆಯರ ಬಣ್ಣದ ಆಟ? ಮುಂದೆ ಓದಿ....

  ಹೋಳಿ ಸಂಭ್ರಮದಲ್ಲಿ ಶ್ರೀಮುರಳಿ ಕುಟುಂಬ

  ಹೋಳಿ ಸಂಭ್ರಮದಲ್ಲಿ ಶ್ರೀಮುರಳಿ ಕುಟುಂಬ

  ರೋರಿಂಗ್ ಸ್ಟಾರ್ ಶ್ರೀಮುರಳಿ ಕುಟುಂಬ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದೆ. ವಿದ್ಯಾ ಶ್ರೀಮುರಳಿ ತಮ್ಮ ಇಬ್ಬರು ಮಕ್ಕಳು ಮತ್ತು ಸ್ನೇಹಿತರೆಲ್ಲ ಸೇರಿ ಬಣ್ಣದಾಟ ಆಡಿರುವ ಒಂದಿಷ್ಟು ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ನಟ ಶ್ರೀಮುರಳಿ ಭರಾಟೆ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ, ಅವರ ಪತ್ನಿ ವಿದ್ಯಾ ಮತ್ತು ಮಕ್ಕಳು ಮಾತ್ರ ಹೋಳಿ ಸೆಲೆಬ್ರೆಟ್ ಮಾಡಿದ್ದಾರೆ.

  ಬಣ್ಣಗಳ ರಂಗೀನ್ ಆಟದಲ್ಲಿ ಶಾನ್ವಿ ಶ್ರೀವಾಸ್ತವ್

  ಬಣ್ಣಗಳ ರಂಗೀನ್ ಆಟದಲ್ಲಿ ಶಾನ್ವಿ ಶ್ರೀವಾಸ್ತವ್

  ನಟಿ ಶಾನ್ವಿ ಶ್ರೀವಾಸ್ತವ್ ಹೋಳಿ ಹಬ್ಬವನ್ನ ಸಖತ್ ಕಲರ್ ಫುಲ್ ಆಗಿ ಆಚರಿಸಿದ್ದಾರೆ. ಹೋಳಿ ಹಬ್ಬದ ಪ್ರಯುಕ್ತ ತಾವು ಹೋಳಿ ಸಂಭ್ರಮಿಸಿರುವ ಫೋಟೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗಳನ್ನ ನೋಡಿದ ಅಭಿಮಾನಿಗಳು ಕೂಡ ಶಾನ್ವಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ.

  ದರ್ಶನ್ ಕ್ಲಿಕ್ ಮಾಡಿದ ಫೋಟೋ ಶ್ರೀಮುರಳಿಗೆ ಗಿಫ್ಟ್

  ಪತ್ನಿ ಜೊತೆ ಹೋಳಿ ಸಂಭ್ರಮಿಸಿದ ಪವನ್ ಒಡೆಯರ್

  ಪತ್ನಿ ಜೊತೆ ಹೋಳಿ ಸಂಭ್ರಮಿಸಿದ ಪವನ್ ಒಡೆಯರ್

  ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಜೊತೆ ಹೋಳಿ ಸಂಭ್ರಮಿಸಿದ್ದಾರೆ. ಮದುವೆ ನಂತರ ಮೊದಲ ಹೋಳಿ ಆಚರಿಕೊಳ್ಳುತ್ತಿರುವ ಪವನ್ ಒಡೆಯರ್ ದಂಪತಿ, ಈ ಬಾರಿಯ ಹೋಳಿಯನ್ನ ಮತ್ತಷ್ಟು ವಿಷೇಶವಾಗಿಸಿಕೊಂಡಿದೆ.

  ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್

  ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್

  ಕಣ್ಣು ಮಿಟುಕಿಸಿ ಇಡೀ ದೇಶದ ಗಮನ ಸೆಳೆದಿದ್ದ ಪ್ರಿಯಾ ವಾರಿಯರ್ ಕೂಡ ಹೋಳಿ ಹಬ್ಬವನ್ನ ಸೆಲೆಬ್ರೆಟ್ ಮಾಡಿದ್ದಾರೆ. 'ಒರು ಆದಾರ್ ಲವ್' ಚಿತ್ರದ ಒಂದು ಒಂದೇ ಒಂದು ವಿಡಿಯೋ ಸಾಂಗ್ ಮೂಲಕ ನ್ಯಾಷನಲ್ ಕ್ರಶ್ ಆಗಿದ್ದ ಪ್ರಿಯಾ, ಅದೇ ಜೋಶ್ ನಲ್ಲಿ ಬಣ್ಣದ ಹಬ್ಬವನ್ನ ಆಚರಿಸಿದ್ದಾರೆ.

  ಬಾಲಿವುಡ್ ಸ್ಟಾರ್ ಗಳ ನೆಚ್ಚಿನ ಹಬ್ಬ

  ಬಾಲಿವುಡ್ ಸ್ಟಾರ್ ಗಳ ನೆಚ್ಚಿನ ಹಬ್ಬ

  ಇನ್ನು ಬಾಲಿವುಡ್ ನಲ್ಲಿ ಪ್ರತಿವರ್ಷವೂ ಹೋಳಿ ಹಬ್ಬ ಗ್ರ್ಯಾಂಡ್ ಆಗಿ ಆಚರಿಸಲಾಗುತ್ತೆ. ಈ ವರ್ಷವೂ ನಟಿ ಕಾಜೋಲ್, ಐಶ್ವರ್ಯ ರೈ, ಕತ್ರೀನಾ ಕೈಫ್, ರಣ್ ದೀಪ್ ಹೂಡ, ಶಬಾನ ಅಜ್ಮಿ, ಏಕ್ತಾ ಕಪೂರ್ ಸೇರಿದಂತೆ ಸಾಕಷ್ಟು ಮಂದಿ ಬಣ್ಣದ ಹಬ್ಬವನ್ನ ಸಂಭ್ರಮಿಸಿದ್ದಾರೆ.

  English summary
  Kannada actor sri murali, shanvi srivastav, and many bollywood stars are celebrates holi festival today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X