»   » ಇಂದಿನಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್ ದುಬಾರಿ

ಇಂದಿನಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್ ದುಬಾರಿ

Posted By:
Subscribe to Filmibeat Kannada

ಜುಲೈ 1 ರಂದು ಮಧ್ಯರಾತ್ರಿಯಿಂದಲೇ ದೇಶದಲ್ಲಿ GST (ಸರಕು ಮತ್ತು ಸೇವಾ ತೆರಿಗೆ) ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರ-ವಹಿವಾಟುಗಳಲ್ಲಿ ಹಲವು ವ್ಯತ್ಯಾಸಗಳು ಆಗಿದ್ದು, ಸಿನಿಮಾ ಟಿಕೆಟ್ ಮೇಲೂ ಪ್ರಭಾವ ಬೀರಿದೆ. ಜೂನ್ 30ನೇ ತಾರೀಖಿನವರೆಗೂ ಇದ್ದ ಟಿಕೆಟ್ ದರ ಜುಲೈ 1 ರಿಂದ ಬದಲಾಗಿದ್ದು, ಪ್ರಸ್ತುತ ಟಿಕೆಟ್ ಬೆಲೆ GST ಅನ್ವಯ ಹೆಚ್ಚಾಗಿದೆ.

ಟಿಕೆಟ್ ಬೆಲೆ ಎಷ್ಟಿರಬೇಕು ಎಂಬ ನಿಖರವಾದ ಮಾಹಿತಿ ಲಭ್ಯವಾಗದ ಹಿನ್ನಲೆಯಲ್ಲಿ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರು ಪರಿಷ್ಕೃತ ದರದ ಟಿಕೆಟ್ ನೀಡಲು ಸಿದ್ದತೆ ಮಾಡಿಕೊಂಡಿದ್ದಾರೆ. 'GST' ನಿಯಮದ ಪ್ರಕಾರ ಎಂಟರ್​ಟೈನ್​ಮೆಂಟ್ ಟ್ಯಾಕ್ಸ್ (ಮನರಂಜನಾ ತೆರಿಗೆ), ಟಿಕೆಟ್ ದರ 100 ರೂಪಾಯಿಗಿಂತ ಕಡಿಮೆ ಇರುವ ಚಿತ್ರಮಂದಿರಗಳಲ್ಲಿ 18% ತೆರಿಗೆ ಮತ್ತು 100 ರೂಪಾಯಿಗಿಂತ ಹೆಚ್ಚು ಟಿಕೆಟ್ ದರ ಇರುವ ಚಿತ್ರಮಂದಿರಗಳಲ್ಲಿ 28% ತೆರಿಗೆ ಹೆಚ್ಚಿಸಿದ್ದಾರೆ.

ಕನ್ನಡ ಚಿತ್ರ ಪ್ರಿಯರಿಗೆ 'GST' ಬರೆ : ಸಿನಿಮಾ ಟಿಕೆಟ್ ಇನ್ನಷ್ಟು ಹೊರೆ

Film Tickets are Expensive in Theaters From July 1st

ಈ ಮೂಲಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 80 ರೂಪಾಯಿ ಇದ್ದ ಟಿಕೆಟ್ ಬೆಲೆ ಈಗ 94 ರೂಪಾಯಿ ಆಗಿದೆ. 100 ರೂಪಾಯಿ ಇದ್ದ ಟಿಕೆಟ್ ಬೆಲೆ 118 ರೂಪಾಯಿ ಆಗಿದೆ. ಇನ್ನು ವಿರೇಶ್ ಚಿತ್ರಮಂದಿರದಲ್ಲಿ 10 ರೂಪಾಯಿ ಮಾತ್ರ ಹೆಚ್ಚಿಸಲಾಗಿದೆ.

'GST' ಬಳಿಕ ಕನ್ನಡ ಚಿತ್ರರಂಗದ ಲಾಭ ನಷ್ಟದ ಲೆಕ್ಕಾಚಾರ

Film Tickets are Expensive in Theaters From July 1st

ಮತ್ತೊಂದೆಡೆ ಮಲ್ಟಿಪ್ಲೆಕ್ಸ್ ಗಳು GSTಯಿಂದ ಗೊಂದಲಕ್ಕೀಡಾಗಿ ಶುಕ್ರವಾರ, ಜುಲೈ 1ರ ಮುಂಗಡ ಟಿಕೆಟ್ ಬುಕ್ಕಿಂಗ್ ನಿಲ್ಲಿಸಲಾಗಿತ್ತು. ಈಗ ಜುಲೈ 1, 2 ನೇ ತಾರೀಖಿನವರೆಗೂ ಬುಕ್ಕಿಂಗ್ ಅವಕಾಶ ಮಾಡಿಕೊಟ್ಟಿದ್ದು, ಪ್ರಸ್ತುತ ಟಿಕೆಟ್ ಬೆಲೆ (Silver) 300 ರೂಪಾಯಿ ಮತ್ತು (Platinam) 320 ರೂಪಾಯಿ ನಿಗದಿಯಾಗಿದೆ. ಇದು ಸೋಮವಾರದ ನಂತರ ಮತ್ತೆ ಬದಲಾಗಲಿದೆಯಂತೆ.

ಮಲ್ಟಿಪ್ಲೆಕ್ಸ್ ಗೆ ತಟ್ಟಿತು GST ಬಿಸಿ: ಆನ್ ಲೈನ್ ಬುಕ್ಕಿಂಗ್ ಗೆ ಅವಕಾಶವಿಲ್ಲ

ಇಲ್ಲಿಯವರೆಗೂ ಕನ್ನಡ ಚಿತ್ರಗಳಿಗೆ ತೆರಿಗೆ ಇರಲಿಲ್ಲ. ಇಷ್ಟು ದಿನ ಪರಭಾಷೆ ಚಿತ್ರಗಳಿಗೆ ಮಾತ್ರ ಶೇಕಡಾ 30 ರಷ್ಟು ತೆರಿಗೆ ಇತ್ತು. ಇದೀಗ, ಶೇಕಡಾ 28 ಕ್ಕೆ ಇಳಿಕೆಯಾಗಿರುವುದರಿಂದ ಬೇರೆ ಭಾಷೆ ಸಿನಿಮಾಗಳ ಟಿಕೆಟ್ ಕಡಿಮೆಗೆ ಸಿಗಲಿದೆ. ಹೀಗಾಗಿ, ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳ ಹಾವಳಿ ಹೆಚ್ಚಾಗುವ ಆತಂಕ ಉಂಟಾಗಿದೆ.

English summary
Film Tickets are Expensive in Theaters From July 1st Because of GST

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada