»   » ಓದುಗರ ಆಯ್ಕೆಯಂತೆ ಪ್ರಥಮ್ ಕೈ ಸೇರಿದ 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ

ಓದುಗರ ಆಯ್ಕೆಯಂತೆ ಪ್ರಥಮ್ ಕೈ ಸೇರಿದ 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ

Posted By:
Subscribe to Filmibeat Kannada

'ಬಿಗ್ ಬಾಸ್ ಸೀಸನ್ 4' ಪಟ್ಟವನ್ನು ಯಾರು ಗೆಲ್ಲಬೇಕು ಎಂದು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಪೋಲ್ ಏರ್ಪಡಿಸಿತ್ತು. ಈ ಪ್ರಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿ ಪ್ರಥಮ್ ಬಿಗ್ ಬಾಸ್ ವಿನ್ನರ್ ಆಗಬೇಕು ಎಂದು ತಮ್ಮ ಮತ ಹಾಕಿದ್ದರು. ಅದರಂತೆ ಈಗ 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಪ್ರಥಮ್ ಅವರ ಕೈ ಸೇರಿದೆ.

'MLA' ಆಗುವುದಕ್ಕೆ ಹೊರಟಿದ್ದಾರೆ ಒಳ್ಳೆ ಹುಡುಗ ಪ್ರಥಮ್

ಈ ಹಿಂದೆಯೆ ಈ ಪ್ರಶಸ್ತಿಯನ್ನು ಪ್ರಥಮ್ ಪಡೆಯಬೇಕಿತ್ತು. ಆದರೆ ಅವರ ಸಿನಿಮಾ ಸೇರಿದಂತೆ ಕೆಲ ಕೆಲಸಗಳಲ್ಲಿ ಬಿಜಿಯಾಗಿದ್ದ ಪ್ರಥಮ್ ಕಳೆದ ಭಾನುವಾರ (ಜುಲೈ9) 'ಒನ್ ಇಂಡಿಯಾ' ಕಛೇರಿಗೆ ಆಗಮಿಸಿ ಪ್ರೀತಿಯಿಂದ ಪ್ರಶಸ್ತಿಯನ್ನು ಪಡೆದರು.

'ಬಿಗ್ ಬಾಸ್ ಸೀಸನ್ 4 ವಿಜೇತ' ಪ್ರಶಸ್ತಿ

ಬಿಗ್ ಬಾಸ್ ಪ್ರಶಸ್ತಿ ಗೆದ್ದ ರೀತಿ 'ಫಿಲ್ಮಿ ಬೀಟ್ ಕನ್ನಡ' ಓದುಗರು ಆಯ್ಕೆಯಲ್ಲಿ ಪ್ರಥಮ್ ಮೊದಲ ಸ್ಥಾನಗಳಿಸಿದ್ದರು. ಓದುಗರ ಆಸೆಯಂತೆ 'ಒನ್ ಇಂಡಿಯಾ' ಮತ್ತು 'ಫಿಲ್ಮಿಬೀಟ್ ಕನ್ನಡ' ವತಿಯಿಂದ ಪ್ರಥಮ್ ಅವರಿಗೆ 'ಬಿಗ್ ಬಾಸ್ ಸೀಸನ್ 4 ವಿಜೇತ' ಪ್ರಶಸ್ತಿ ನೀಡಲಾಯಿತು.

'ಫಿಲ್ಮಿಬೀಟ್' ತಂಡದಿಂದ ಪ್ರಶಸ್ತಿ ಪ್ರದಾನ

'ಬಿಗ್ ಬಾಸ್ ಸೀಸನ್ 4 ವಿಜೇತ' ಪ್ರಶಸ್ತಿಯನ್ನು 'ಫಿಲ್ಮಿ ಬೀಟ್ ಕನ್ನಡ' ತಂಡ ಪ್ರಥಮ್ ಅವರಿಗೆ ಪ್ರದಾನ ಮಾಡಿತು.

'ಬಿಗ್ ಬಾಸ್' ಸಂಜನಾ ಬಗ್ಗೆ ಸತ್ಯ ಬಾಯ್ಬಿಟ್ಟ 'ಒಳ್ಳೆ ಹುಡುಗ' ಪ್ರಥಮ್.!

ಉಪಸ್ಥಿತಿ

ಇದೇ ವೇಳೆ 'ಒನ್ ಇಂಡಿಯ ಕನ್ನಡ' ಮತ್ತು 'ಫಿಲ್ಮಿಬೀಟ್ ಕನ್ನಡ' ತಂಡ ಹಾಜರಿತ್ತು.

ಪ್ರಥಮ್ ಮಾತು

''ನಾನು ತುಂಬ ಮೊದಲೇ ಬರಬೇಕಿತ್ತು.. ಅದಕ್ಕೆ ಕ್ಷಮೆ ಇರಲಿ. ಈ ಪ್ರಶಸ್ತಿ ಓದುಗರೆ ಕೊಟ್ಟಿರುವುದರಿಂದ ಇದು ಬಿಗ್ ಬಾಸ್ ಟ್ರೋಫಿಯ ತಮ್ಮ'' ಅಂತ ಅವರ ಸ್ಟೈಲ್ ನಲ್ಲಿ ಹೇಳಿ ಪ್ರಥಮ್ ಸಂತಸ ವ್ಯಕ್ತ ಪಡಿಸಿದರು.

ಪ್ರಥಮ್ ಮತ್ತು ಹುಚ್ಚ ವೆಂಕಟ್ ಜಂಟಿ ಫೇಸ್‌ಬುಕ್ ಲೈವ್: ಹೇಳಿದ್ದೇನು?

ವಿಡಿಯೋ ನೋಡಿ

ಪ್ರಥಮ್ ಪ್ರಶಸ್ತಿ ಪ್ರಧಾನ ಮತ್ತು ಅವರ ಸಂಪೂರ್ಣ ಸಂದರ್ಶನದ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

English summary
Filmibeat Kannada/Oneindia Kannada Team Felicitated Big Boss Kannada 4 Winner Pratham.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada