»   » 2017ರ ಅತ್ಯುತ್ತಮ ಉದಯೋನ್ಮುಖ ನಟಿ ದಿವ್ಯ ಉರುಡುಗ

2017ರ ಅತ್ಯುತ್ತಮ ಉದಯೋನ್ಮುಖ ನಟಿ ದಿವ್ಯ ಉರುಡುಗ

Posted By:
Subscribe to Filmibeat Kannada

ಫಿಲ್ಮಿಬೀಟ್ ಆಯೋಜಿಸಿದ್ದ 'ಬೆಸ್ಟ್ ಅಫ್ ಸ್ಯಾಂಡಲ್ ವುಡ್-2017' ಪೋಲ್ ನ ಅಂತಿಮ ಫಲಿತಾಂಶ ಹೊರಬಿದ್ದಿದೆ. ಅತ್ಯುತ್ತುಮ ಉದಯೋನ್ಮುಖ ನಟ ವಿಭಾಗದಲ್ಲಿ ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಅದೇ ರೀತಿ ಅತ್ಯುತ್ತುಮ ಉದಯೋನ್ಮುಖ ನಟಿ ವಿಭಾಗದಲ್ಲಿ ಹೆಚ್ಚು ಪೈಪೋಟಿ ಕಂಡು ಬಂದಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ಹುಲಿರಾಯ ಚಿತ್ರದ ನಾಯಕಿ ದಿವ್ಯ ಉರುಡುಗ ಅವರು ಹೆಚ್ಚು ಮತಗಳನ್ನ ಪಡೆಯುವುದರ ಮೂಲಕ ವಿನ್ನರ್ ಆಗಿದ್ದಾರೆ.

ಕ್ರೇಜಿಸ್ಟಾರ್ ಪುತ್ರ ಮನೋರಂಜನ್ 2017ರ ಅತ್ಯುತ್ತಮ ಉದಯೋನ್ಮಖ ನಟ

ಹಾಗಿದ್ರೆ, ದಿವ್ಯ ಉರುಡುಗ ಗಳಿಸಿದ ಮತಗಳೆಷ್ಟು? ಯಾರೆಲ್ಲ ಯುವ ನಟರು ಈ ರೇಸ್ ನಲ್ಲಿದ್ದರು ಎಂಬುದನ್ನ ತಿಳಿಯಲು ಮುಂದೆ ಓದಿ.....

ಅತ್ಯುತ್ತಮ ಉದಯೋನ್ಮುಖ ನಟಿ ದಿವ್ಯ

'ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2017ರ 'ಅತ್ಯುತ್ತಮ ಉದಯೋನ್ಮುಖ ನಟಿ'ಯಾಗಿ ದಿವ್ಯ ಉರುಡುಗ ಹೊರಹೊಮ್ಮಿದ್ದಾರೆ.

ಓದುಗರ ಮಹಾತೀರ್ಪು: 2017ರ 'ಅತ್ಯುತ್ತಮ ನಟ' ದರ್ಶನ್

ಅತಿ ಹೆಚ್ಚು ಮತ ಪಡೆದ ದಿವ್ಯ

ಆರು ಜನ ಯುವ ನಟಿಯರ ಪೈಕಿ 'ಹುಲಿರಾಯ' ಚಿತ್ರದ ಅಭಿನಯಕ್ಕಾಗಿ ದಿವ್ಯ ಉರುಡಗ ಅವರು 60% ರಷ್ಟು ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.

ಎರಡನೇ ಸ್ಥಾನದಲ್ಲಿ ಹಿತಾ

'1/4 ಕೆಜಿ ಪ್ರೀತಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ಹಿತಾ ಚಂದ್ರಶೇಖರ್ ಅತ್ಯುತ್ತಮ ನವನಟಿ ರೇಸ್ ನಲ್ಲಿ ತೀವ್ರ ಪೈಪೋಟಿ ನೀಡಿದ್ದರು. ಅಂತಿಮವಾಗಿ 13% ಮತಗಳನ್ನ ಪಡೆದು ಎರಡನೇ ಸ್ಥಾನ ಗಳಿಸಿಕೊಂಡರು.

2017ರ ಅತ್ಯುತ್ತಮ ಕಮರ್ಷಿಯಲ್ ಸಿನಿಮಾ 'ತಾರಕ್'

ಇನ್ನುಳಿದಂತೆ ಯಾರಿದ್ದರು

ದಿವ್ಯ ಉರುಡುಗ, ಹಿತಾ ಚಂದ್ರಶೇಖರ್ ಅವರ ಜೊತೆ 'ರಾಜಹಂಸ' ಚಿತ್ರದ ನಾಯಕಿ ರಂಜನಿ ರಾಘವನ್, 'ಧೈರ್ಯಂ' ಚಿತ್ರದ ನಾಯಕಿ ಅಧಿತಿ ಪ್ರಭುದೇವ್, 'ಹ್ಯಾಪಿ ನ್ಯೂ ಇಯರ್' ಚಿತ್ರದ ನಟಿ ಸೃಷ್ಟಿ ಪಾಟೀಲ್ ಹಾಗೂ ಅತಿರಥ ಚಿತ್ರದ ನಾಯಕಿ ಲತಾ ಹೆಗ್ಡೆ ರೇಸ್ ನಲ್ಲಿದ್ದರು.

ಓದುಗರ ಅಭಿಮತ: 2017ರ 'ಅತ್ಯುತ್ತಮ ನಟಿ' ಶಾನ್ವಿ ಶ್ರೀವಾಸ್ತವ್

English summary
'Best of Sandalwood-2017' Poll Results are out. divya uruduga is selected as 'Best debutant actress-2017'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada