»   » ಓದುಗರ ಆಯ್ಕೆ: 2017ರ ಅತ್ಯುತ್ತಮ ನಿರ್ದೇಶಕ ಸಂತೋಷ್ ಆನಂದ್ ರಾಮ್

ಓದುಗರ ಆಯ್ಕೆ: 2017ರ ಅತ್ಯುತ್ತಮ ನಿರ್ದೇಶಕ ಸಂತೋಷ್ ಆನಂದ್ ರಾಮ್

Posted By:
Subscribe to Filmibeat Kannada

ಫಿಲ್ಮಿಬೀಟ್ ಕನ್ನಡ ಆಯೋಜಿಸಿದ್ದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' ಫಲಿತಾಂಶ ಪ್ರಕಟವಾಗಿದ್ದು, ಈಗಾಗಲೇ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಸಿನಿಮಾ ಯಾವುದು ಎಂದು ಬಹಿರಂಗಪಡಿಸಲಾಗಿದೆ.

ಇದೀಗ, ನಿರ್ದೇಶಕರ ವಿಭಾಗದಲ್ಲಿ ಸಂತೋಷ್ ಆನಂದ್ ರಾಮ್ ಆಯ್ಕೆಯಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ 'ರಾಜಕುಮಾರ' ಚಿತ್ರದ ನಿರ್ದೇಶನಕ್ಕಾಗಿ ಸಂತೋಷ್ ಅವರಿಗೆ ಜನರು ಹೆಚ್ಚು ಮತ ಹಾಕಿದ್ದಾರೆ.

ಓದುಗರ ಮಹಾತೀರ್ಪು: 2017ರ 'ಅತ್ಯುತ್ತಮ ನಟ' ದರ್ಶನ್

ಸಂತೋಷ್ ಆನಂದ್ ರಾಮ್ ಅವರ ಜೊತೆಯಲ್ಲಿ ಮಿಲನ ಪ್ರಕಾಶ್, ಹೆಬ್ಬುಲಿ ಕೃಷ್ಣ, ಸಿಂಪಲ್ ಸುನಿ, ಯೋಗರಾಜ್ ಭಟ್, ಜಯತೀರ್ಥ, ಚೇತನ್ ಕುಮಾರ್, ಹರ್ಷ, ಸೇರಿದಂತೆ ಹಲವು ನಿರ್ದೇಶಕರು ನಾಮಿನೇಟ್ ಆಗಿದ್ದರು.

Filmibeat Kannada Readers Choice Best Director santhosh anandram

ಅತಿ ಹೆಚ್ಚು ಮತಗಳನ್ನ ಪಡೆದ 'ರಾಜಕುಮಾರ' ನಿರ್ದೇಶಕ '2017ರ ಬೆಸ್ಟ್ ಡೈರೆಕ್ಟರ್' ಆಗಿದ್ರೆ, 'ತಾರಕ್' ಸಿನಿಮಾ ನಿರ್ದೇಶನ ಮಾಡಿದ್ದ ಪ್ರಕಾಶ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. 'ಹೆಬ್ಬುಲಿ' ನಿರ್ದೇಶಕ ಕೃಷ್ಣ ಮೂರನೇ ಸ್ಥಾನ, 'ಆಪರೇಷನ್ ಅಲಮೇಲಮ್ಮ' ಚಿತ್ರಕ್ಕೆ ಸಿಂಪಲ್ ಸುನಿ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಓದುಗರ ಅಭಿಮತ: 2017ರ 'ಅತ್ಯುತ್ತಮ ನಟಿ' ಶಾನ್ವಿ ಶ್ರೀವಾಸ್ತವ್

Filmibeat Kannada Readers Choice Best Director santhosh anandram

ಇನ್ನುಳಿದಂತೆ ಯೋಗರಾಜ್ ಭಟ್ (ದನಕಾಯೋನು) ಐದನೇ ಸ್ಥಾನ, ಜಯತೀರ್ಥ (ಬ್ಯೂಟಿಫುಲ್ ಮನಸುಗಳು) ಆರನೇ ಸ್ಥಾನ, ಚೇತನ್ ಕುಮಾರ್ (ಭರ್ಜರಿ) ಏಳನೇ ಸ್ಥಾನ, ಹರ್ಷ (ಅಂಜನಿಪುತ್ರ) ಏಂಟನೇ ಸ್ಥಾನ, ಪಿ.ಸಿ ಶೇಖರ್ (ರಾಗ) ಒಂಭತ್ತನೇ ಸ್ಥಾನ, ಗುರುಪ್ರಸಾದ್ (ಎರಡನೇ ಸಲ) ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ.

English summary
'Best of Sandalwood-2017' Poll Results are out. Director santhosh ananddram is selected as 'Best Director-2017'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada