»   » ಜನ ಮೆಚ್ಚಿದ ಅರ್ಜುನ ಜನ್ಯ 2017ರ ಅತ್ಯುತ್ತಮ ಸಂಗೀತ ನಿರ್ದೇಶಕ

ಜನ ಮೆಚ್ಚಿದ ಅರ್ಜುನ ಜನ್ಯ 2017ರ ಅತ್ಯುತ್ತಮ ಸಂಗೀತ ನಿರ್ದೇಶಕ

Posted By:
Subscribe to Filmibeat Kannada

ಫಿಲ್ಮಿಬೀಟ್ ಕನ್ನಡ ಆಯೋಜಿಸಿದ್ದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' ಫಲಿತಾಂಶ ಪ್ರಕಟವಾಗಿದ್ದು, ಅತ್ಯುತ್ತಮ ನಟ ದರ್ಶನ್, ಅತ್ಯುತ್ತಮ ನಟಿ ಶಾನ್ವಿ ಶ್ರೀವಾಸ್ತವ್, ಅತ್ಯುತ್ತಮ ಸಿನಿಮಾ 'ತಾರಕ್', ಅತ್ಯುತ್ತಮ ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಯ್ಕೆಯಾಗಿದ್ದಾರೆ.

ಈಗ ಸಂಗೀತ ನಿರ್ದೇಶಕರ ವಿಭಾಗದ ಫಲಿತಾಂಶ ಹೊರಬಿದ್ದಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ 2017ರ ಅತ್ಯುತ್ತಮ ಸಂಗೀತ ನಿರ್ದೇಶಕ ಪಟ್ಟವನ್ನ ಮುಡಿಗೇರಿಸಿಕೊಂಡಿದ್ದಾರೆ.

ಓದುಗರ ಆಯ್ಕೆ: 2017ರ ಅತ್ಯುತ್ತಮ ನಿರ್ದೇಶಕ ಸಂತೋಷ್ ಆನಂದ್ ರಾಮ್

ಸುಮಾರು ಒಂದು ತಿಂಗಳು ನಡೆದ ಫಿಲ್ಮಿಬೀಟ್ ಕನ್ನಡ ಪೋಲ್ ನಲ್ಲಿ ಒನ್ ಇಂಡಿಯಾ ಮತ್ತು ಫಿಲ್ಮಿಬೀಟ್ ಓದುಗರು ಆನ್ ಲೈನ್ ನಲ್ಲಿ ಮತ ಚಲಾಯಿಸಿದ್ದರು. ನಮ್ಮ ಓದುಗರ ಪ್ರಕಾರ ಅರ್ಜುನ್ ಜನ್ಯ ಆಯ್ಕೆಯಾಗಿದ್ದಾರೆ. ಮುಂದೆ ಓದಿ.....

ಓದುಗರ ಆಯ್ಕೆ ಅರ್ಜುನ್ ಜನ್ಯ

'ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2017ರ 'ಅತ್ಯುತ್ತಮ ಸಂಗೀತ ನಿರ್ದೇಶಕ' ಅರ್ಜುನ್ ಜನ್ಯ. 'ಹೆಬ್ಬುಲಿ' ಚಿತ್ರಕ್ಕೆ ಅರ್ಜುನ್ ಜನ್ಯ ಅವರನ್ನ ನಾಮಿನೇಟ್ ಮಾಡಲಾಗಿತ್ತು.

ಓದುಗರ ಅಭಿಮತ: 2017ರ 'ಅತ್ಯುತ್ತಮ ನಟಿ' ಶಾನ್ವಿ ಶ್ರೀವಾಸ್ತವ್

ಅತಿ ಹೆಚ್ಚು ಮತ ಪಡೆದ ಅರ್ಜುನ್ ಜನ್ಯ

ಅರ್ಜುನ್ ಜನ್ಯ ಜೊತೆಯಲ್ಲಿ ಕನ್ನಡದ ಖ್ಯಾತ ಸಂಗೀತ ನಿರ್ದೇಶಕರು ನಾಮಿನೇಟ್ ಆಗಿದ್ದರು. ಆದ್ರೆ, ಎಲ್ಲರನ್ನ ಹಿಂದಿಕ್ಕಿದ ಅರ್ಜುನ್ ಜನ್ಯ 45% ರಷ್ಟು ಮತಗಳನ್ನ ಪಡೆದು ವಿಜಯಶಾಲಿ ಆಗಿದ್ದಾರೆ.

ತೀವ್ರ ಪೈಪೋಟಿ ನೀಡಿದ ರವಿ ಬಸ್ರೂರು

ತೀವ್ರ ಪೈಪೋಟಿ ನೀಡಿದ ಸಂಗೀತ ನಿರ್ದೇಶಕ ರವಿ ಬಸ್ರೂರು 33% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡು ಎರಡನೇ ಸ್ಥಾನ ಪಡೆದಿದ್ದಾರೆ.

ಎರಡನೇ ಬಾರಿ ಜನ್ಯ ಆಯ್ಕೆ

2016ರಲ್ಲಿಯೂ ಅತ್ಯುತ್ತಮ ಸಂಗೀತ ವಿಭಾಗದಲ್ಲಿ ಅರ್ಜುನ್ ಜನ್ಯ ಅತಿ ಹೆಚ್ಚು ಮತಗಳನ್ನ ಪಡೆದು ಮೊದಲ ಸ್ಥಾನ ಪಡೆದುಕೊಂಡಿದ್ದರು. ಈ ವರ್ಷವೂ ಮೊದಲ ಸ್ಥಾನವನ್ನ ಕಾಯ್ದುಕೊಂಡಿದ್ದಾರೆ.

ಓದುಗರ ಮಹಾತೀರ್ಪು: 2017ರ 'ಅತ್ಯುತ್ತಮ ನಟ' ದರ್ಶನ್

ನಂತರದ ಸ್ಥಾನದಲ್ಲಿ ಯಾರಿದ್ದಾರೆ....

ಅರ್ಜುನ್ ಜನ್ಯ ಮತ್ತು ರವಿ ಬಸ್ರೂರು ನಂತರದ ಸ್ಥಾನದಲ್ಲಿ ವಿ.ಹರಿಕೃಷ್ಣ (ಮುಗುಳುನಗೆ), ವೀರ್ ಸಮರ್ಥ್ (ಮಾಸ್ ಲೀಡರ್), ಚರಣ್ ರಾಜ್ (ಪುಷ್ಪಕ ವಿಮಾನ), ಸಾಧು ಕೋಕಿಲಾ (ಮಾಸ್ತಿಗುಡಿ) ಸ್ಥಾನಪಡೆದುಕೊಂಡಿದ್ದಾರೆ.

English summary
'Best of Sandalwood-2017' Poll Results are out. Magical composer Arjun Janya is selected as 'Best Music Director-2017'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada