For Quick Alerts
ALLOW NOTIFICATIONS  
For Daily Alerts

  ನಟಿ ಮಾಳವಿಕಾ ಆಕ್ರೋಶಕ್ಕೆ ದನಿ ಗೂಡಿಸಿದ ನಮ್ಮ ಓದುಗರು.!

  By Harshitha
  |

  ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿ ಕನ್ನಡ ಚಿತ್ರಗಳಿಂತ ಹೆಚ್ಚಾಗಿ ಪರಭಾಷೆಯ ಚಿತ್ರಗಳು ಹಾಗೂ ಪರಭಾಷಾ ನಟರದ್ದೇ ಆರ್ಭಟವಾಗಿರುವ ಬಗ್ಗೆ ನಟಿ ಹಾಗೂ ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬೇಸರ ವ್ಯಕ್ತಪಡಿಸಿದ್ದರು.

  ಈ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಕೂಡ ವರದಿ ಮಾಡಿತ್ತು. ನಟಿ ಮಾಳವಿಕಾ ಅವಿನಾಶ್ ರವರ ಮಾತಿಗೆ 'ಒನ್ ಇಂಡಿಯಾ ಕನ್ನಡ' ಹಾಗೂ 'ಫಿಲ್ಮಿಬೀಟ್ ಕನ್ನಡ' ಓದುಗರು ಕೂಡ ದನಿ ಸೇರಿಸಿರುವುದು ವಿಶೇಷ. [ಕನ್ನಡ ನ್ಯೂಸ್ ಚಾನೆಲ್ ಗಳ ಮೇಲೆ ಮಾಳವಿಕಾ ಅವಿನಾಶ್ ಗುಡುಗಿದ್ಯಾಕೆ?]

  ಕನ್ನಡ ಸುದ್ದಿ ವಾಹಿನಿಗಳ ಬಗ್ಗೆ ನಮ್ಮ ಓದುಗರು ಏನೆಲ್ಲಾ ಹೇಳಿದ್ದಾರೆ ಅಂತ ಅವರ ನಾಮಧೇಯ ಸಮೇತ ನಿಮ್ಮ ಮುಂದೆ ಇಡ್ತಿದ್ದೀವಿ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ...

  ಚಾನೆಲ್ ನವರಿಗೆ ಬುದ್ಧಿ ಕಲಿಸಬೇಕು.!

  ''ಹೌದು, ಮಾಳವಿಕಾ ಸರಿಯಾಗಿ ಹೇಳಿದ್ದಾರೆ. ಕನ್ನಡ ಚಾನೆಲ್ ನಲ್ಲಿ ತೆಲುಗು ಯಾಕೆ ಬರ್ಬೇಕು? ಚಿತ್ರರಂಗದ ಎಲ್ಲರೂ ಈ ಬಗ್ಗೆ ಹೋರಾಟ ಮಾಡ್ಬೇಕು. ಚಾನೆಲ್ ನವರಿಗೆ ಬುದ್ಧಿ ಕಲಿಸಬೇಕು'' - ಕೃಷ್ಣ

  ಎಂತಹ ವಿಪರ್ಯಾಸ.!

  ''ಹೌದು ಮೇಡಂ, ನೀವು ಕೇಳ್ತಾ ಇರೋದು ಸರಿಯಾಗಿದೆ. ಕರ್ನಾಟಕದಲ್ಲೇ ಕನ್ನಡಕ್ಕಾಗಿ ಹೋರಾಟ. ಎಂತಹ ವಿಪರ್ಯಾಸ.! ಜೈ ಕರ್ನಾಟಕ ಮಾತೆ'' - ಚಿರಂತ್.ಎಂ.ಆರ್

  ಕನ್ನಡ ಚಿತ್ರ ಯಾವುದಕ್ಕೂ ಕಮ್ಮಿ ಇಲ್ಲ!

  ''ನಾನಂತೂ ಪರಭಾಷಾ ಸುದ್ದಿ ನೋಡೋದಿಲ್ಲ'' - ರವೀಶ್ ಚಂದ್ರ.ಎಸ್
  ''ಬೆಳಗ್ಗೆ ಎದ್ದು ತೆಲುಗು ಚಿತ್ರಗಳದ್ದೇ ನ್ಯೂಸ್ ಕೊಡ್ತಾರೆ. ನಮ್ ಚಾನೆಲ್ ಗೆ ಬೇರೆಯವರ ಬಗ್ಗೆ ಚಿಂತೆ. ನಮ್ಮ ಕನ್ನಡ ಚಿತ್ರ ಯಾವುದಕ್ಕೂ ಕಮ್ಮಿ ಇಲ್ಲ'' - ಉಮೇಶ್

  100% ಕರೆಕ್ಟ್.!

  ''100% ಕರೆಕ್ಟ್. ನಾನೂ ಕೂಡ ದಿನ ನೋಡಿ ಬೇಜಾರಾಗಿ ಹೋಗಿದೆ. ನಮ್ಮ ಕನ್ನಡ ನ್ಯೂಸ್ ಚಾನೆಲ್ ಗಳಿಗೆ ಯಾಕೆ ಬೇರೆ ಸಿನಿಮಾ ಇಂಡಸ್ಟ್ರಿ ಬಗ್ಗೆ ಇಂಟ್ರೆಸ್ಟ್ ಅಂತ ಗೊತ್ತಿಲ್ಲ. ಮೊದಲು ಒಳ್ಳೆ ಕನ್ನಡ ಚಿತ್ರಗಳ ರಿಪೋರ್ಟ್ ಕೊಡಿ'' - ರವೀಶ.ಎಚ್.ಕೆ

  ಒಡೆತನ ಪರಭಾಷಿಕರ ಕೈಯಲ್ಲಿ!

  ''ಮಾಳವಿಕಾ ಸರಿಯಾಗಿ ಹೇಳಿದ್ದಾರೆ. ಆದರೆ ನ್ಯೂಸ್ ಚಾನೆಲ್ ಗಳ ಒಡೆತನ ಇರುವುದು ಪರಭಾಷಿಕರ ಕೈಯಲ್ಲಿ. ಅವರ ಭಾಷೆಯ ಚಿತ್ರಗಳನ್ನು ಅವರು ಕರ್ನಾಟಕದಲ್ಲಿ ಮಾರ್ಕೆಟ್ ಮಾಡುತ್ತಾರೆ ಅಷ್ಟೆ. ಅದನ್ನು ನೋಡುವ ನಮಗೆ ಬುದ್ಧಿ ಇರಬೇಕು. ಅಲ್ಲವೇ'' - ಶಾನೋ

  ಐಡಿಯಾ ಕೊಡುವವರು ಯಾರು?

  ''ಈ ದರಿದ್ರ ಚಾನೆಲ್ ಗಳಿಗೆ ಯಾರು ಇಂಥಾ ಐಡಿಯಾ ಕೊಡ್ತಾರೆ? ಜನ ಎಲ್ಲಾ ಅವರಿಗೆ ಉಗೀತಾ ಇರೋದು ಅವರಿಗೆ ಗೊತ್ತಾಗೋಲ್ವ? ಅವರಿಗೆ ಎಲ್ಲಾ ಗೊತ್ತು, ಜನಕ್ಕೆ ಇಂಥಾ ವೇಸ್ಟ್ ನ್ಯೂಸ್ ಬೇಡ ಅಂತ. ಅನ್ಯ ಭಾಷೆಯ ಚಿತ್ರ ವಿತರಣೆ ಮಾಡುವವರನ್ನು ನಮ್ಮ ಚಿತ್ರರಂಗದ ಎಲ್ಲಾ ಚಟುವಟಿಕೆಗಳಿಂದ ಬಹಿಷ್ಕಾರ ಹಾಕಬೇಕು, ಅವರಿಗೆ ಯಾವುದೇ ಗುರುತರ ಪದವಿ, ಪ್ರಾಮುಖ್ಯತೆ ಸಿಗದ ಹಾಗೆ ಮಾಡಬೇಕು. ಇದಕ್ಕಾಗಿ ನಮ್ಮ ಚಿತ್ರರಂಗದ ಬಗ್ಗೆ ನಿಜವಾದ ಕಾಳಜಿ ಇರುವ ಎಲ್ಲಾ ಚಿತ್ರೋದ್ಯಮದ ಮಂದಿ ಒಟ್ಟಾಗಬೇಕು'' - ರಾಜನ್

  ಆತ್ಮವಿಮರ್ಶೆ ಮಾಡಿಕೊಳ್ಳಲಿ

  ''ಮಾಳವಿಕಾ ಅವರು ಹೇಳಿದ್ದು ತಪ್ಪು ಅಂತ ನ್ಯೂಸ್ ಚಾನೆಲ್ ಗಳೇ ಹೇಳಲಿ. ಈ ವಿಚಾರವಾಗಿ ನ್ಯೂಸ್ ಚಾನೆಲ್ ನವರು ಆತ್ಮವಿಮರ್ಶೆ ಮಾಡಿಕೊಳ್ಳಲಿ'' - ಶ್ರೀಪಾದ

  ಪರಿಹಾರ ಸಿಗುತ್ತಾ?

  ''ಕನ್ನಡ ಚಿತ್ರಗಳದ್ದು ಮರೆಯದ ಹೋರಾಟ. ಕನ್ನಡ ಚಿತ್ರಗಳು ಸರಿಯಿಲ್ಲ ಅನ್ನೋರಲ್ಲಿ 90% ಮಂದಿ ಆ ಚಿತ್ರವನ್ನ ನೋಡೇ ಇರಲ್ಲ. ಇನ್ಮುಂದೆನಾದರೂ, ಪರಿಹಾರ ಸಿಗುತ್ತಾ.?'' - ಮೇಘ

  ಅವರ ಮನೆ ಸಮಸ್ಯೆ ನಮಗೆ ಯಾಕೆ?

  ''ನಾವು ದುಡ್ಡು ಕೊಟ್ಟು ಕನ್ನಡ ಚಾನೆಲ್ ಗಳನ್ನ ನೋಡುವುದು ತೆಲುಗು ಸಿನಿಮಾಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಲು ಅಲ್ಲ. ಅವರು ಯಾರೋ ನಮಗೆ ಗೊತ್ತೇ ಇಲ್ಲ. ಇನ್ನು ಅವರ ಮನೆ ಸಮಸ್ಯೆ ನಮಗೆ ಯಾಕೆ'' - ಹೈದರಾಬಾದ್ ಕನ್ನಡಿಗರು

  ಇವೆಲ್ಲಾ ಸ್ಯಾಂಪಲ್ ಅಷ್ಟೆ.!

  ಇವೆಲ್ಲಾ ಸ್ಯಾಂಪಲ್ ಅಷ್ಟೆ. ಇದೇ ವಿಷಯವಾಗಿ ಬಂದಿರುವ ಕಾಮೆಂಟ್ ಗಳ ಸಂಖ್ಯೆ ಸಾಕಷ್ಟು.

  English summary
  Kannada Actress Malavika Avinash had expressed her displeasure over Kannada News Channels doing stories on Telugu movies and Actors. Similarly, Filmibeat Kannada readers have also expressed their views. Read the article to know Reader's pulse.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more