»   » ನಿರ್ದೇಶಕಿ ರೂಪಾ-ಸಂಗೀತಗಾರ ಗೌತಮ್ ಜತೆ ನಿಶ್ಚಿತಾರ್ಥ

ನಿರ್ದೇಶಕಿ ರೂಪಾ-ಸಂಗೀತಗಾರ ಗೌತಮ್ ಜತೆ ನಿಶ್ಚಿತಾರ್ಥ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮುಖಪುಟ, ಚಂದ್ರ ಚಿತ್ರ ಖ್ಯಾತಿಯ ನಿರ್ದೇಶಕಿ ಅವರ ವಿವಾಹ ನಿಶ್ಚಯವಾಗಿದೆ. ಚಂದ್ರ ಚಿತ್ರದ ಸಂಗೀತ ನಿರ್ದೇಶ ಗೌತಮ್ ಶ್ರೀವತ್ಸ ಅವರನ್ನು ರೂಪಾ ವರಿಸಲಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಸರಳವಾಗಿ ಗುರುವಾರ ನೆರವೇರಿದೆ.

ರೂಪಾ ಅಯ್ಯರ್ ಮತ್ತು ಗೌತಮ್ ಶ್ರೀವತ್ಸ ಅವರ ಮದುವೆಗೆ ಉಭಯ ಕುಟುಂಬದ ಹಿರಿಯರು ಒಪ್ಪಿಗೆ ನೀಡಿದ್ದು, ವಿವಾಹ ನಿಶ್ಚಯ ಕಾರ್ಯಕ್ರಮ ನೇರವೇರಿತು.

Filmmaker Roopa Iyer got engaged to Chandra movie Musician Gautam Srivatsa

ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಬೃಂದಾವನ ಅಪಾರ್ಟ್‌ಮೆಂಟಿನಲ್ಲಿರುವ ರೂಪ ಅವರ ನಿವಾಸದಲ್ಲಿ ಸರಳವಾಗಿ ನಿಶ್ಚಯ ಕಾರ್ಯಕ್ರಮ ನಡೆದಿದೆ. ರೂಪಾ ಮತ್ತು ಗೌತಮ್ ಅವರ ವಿವಾಹ ನಿಶ್ಚಯ ಕಾರ್ಯಕ್ರಮಕ್ಕೆ ಆಪ್ತ ಬಂಧು ಮಿತ್ರರು ಹಾಗೂ ಗೆಳೆಯರ ವರ್ಗ ಮಾತ್ರ ಹಾಜರಿದ್ದರು ಎಂದು ತಿಳಿದು ಬಂದಿದೆ.

ಗೌತಮ್ ಶ್ರೀವತ್ಸ ಮತ್ತು ರೂಪಾ ಅವರು ಸಂಬಂಧಿಕರಾಗಿದ್ದು, ಇತ್ತೀಚೆಗೆ ರೂಪ ಅಯ್ಯರ್ ಅವರು ನಿರ್ದೇಶಿಸಿ, ನಿರ್ಮಾಣ ಮಾಡಿದ್ದ ಚಂದ್ರ ಚಿತ್ರಕ್ಕೆ ಗೌತಮ್ ಸಂಗೀತ ನಿರ್ದೇಶನ ಮಾಡಿದ್ದರು. ಚಂದ್ರ ಚಿತ್ರ ನಿರ್ಮಾಣ ವೇಳೆಯಲ್ಲಿಯೇ ಇಬ್ಬರ ನಡುವೆ ಪ್ರೀತಿ ಅಂಕುರವಾಯ್ತು ಎನ್ನಲಾಗಿದೆ. ಇದೀಗ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ವಿವಾಹವನ್ನು ನಿಶ್ಚಯಿಸಲಾಗಿದೆ. ಮದುವೆ ದಿನಾಂಕ ಇನ್ನೂ ತಿಳಿದು ಬಂದಿಲ್ಲ.

ನಟಿ, ರೂಪದರ್ಶಿ, ನೃತ್ಯ ಸಂಯೋಜಕಿ, ದಾನಿ, ಅಂಕಣಗಾರ್ತಿ, ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ರೂಪಾ ಅಯ್ಯರ್ ಅವರ ಹೊಸ ಇನ್ನಿಂಗ್ಸ್ ಶುಭವಾಗಿರಲಿ ಎಂದು ಒನ್ ಇಂಡಿಯಾ ಕನ್ನಡ ತಂಡ ಹಾರೈಸುತ್ತದೆ.

English summary
Filmmaker Roopa Iyer got engaged to Chandra movie Musician Gautam Srivatsa today(Jun.19) at her Brindavan apartment, Banashankari.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada