twitter
    For Quick Alerts
    ALLOW NOTIFICATIONS  
    For Daily Alerts

    ಇನ್ಮೇಲೆ ಸಿನಿಮಾಗಳಲ್ಲಿ 'ರೈಲು' ಬಿಡೋದು ಸ್ವಲ್ಪ ಕಷ್ಟ

    By Suneetha
    |

    ಎಲ್ಲಾ ಭಾಷೆಗಳ ಸಿನಿಮಾಗಳಲ್ಲೂ ಈ 'ರೈಲು' ಅನ್ನೋದು ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಸಿನಿಮಾಗಳಲ್ಲಿ ಕಥೆ ರೈಲಿನಿಂದಲೇ ಆರಂಭ ಆದ್ರೆ, ಇನ್ನು ಕೆಲವು ಸಿನಿಮಾಗಳಲ್ಲಿ ಕ್ಲೈಮ್ಯಾಕ್ಸ್ 'ರೈಲಿ'ನಲ್ಲಿರುತ್ತದೆ.

    ಶಾರುಖ್ ಖಾನ್ ಮತ್ತು ಕಾಜೋಲ್ ಜೋಡಿಯ 'ಡಿಡಿಎಲ್ ಜೆ' ಸಿನಿಮಾ ಕ್ಲೈಮ್ಯಾಕ್ಸ್ ಸೀನ್ ಇಡೀ ವಿಶ್ವ ವಿಖ್ಯಾತಿ ಗಳಿಸಿದ್ದು ಹಳೇ ವಿಷಯ. ತದನಂತರ ಅದೇ ಶಾರುಖ್ ಖಾನ್ ಅವರು 'ದಿಲ್ ಸೇ' ಚಿತ್ರದಲ್ಲಿ 'ಚಲ್ ಚಯ್ಯಂ ಚಯ್ಯಂ' ಅಂತ ಚಲಿಸುತ್ತಿರುವ ಗೂಡ್ಸ್ ರೈಲಿನ ಮೇಲೆ ಡ್ಯಾನ್ಸ್ ಮಾಡಿ ಫೇಮಸ್ ಆದರು.[ಉಗಿಬಂಡಿಯ ಹಿಂದೆ ಹಾಡುಗಳ ನೆನಪಿನ ಬಂಡಿ]

    ಅಂದಹಾಗೆ ರೈಲು ಬಿಡೋದು ಕನ್ನಡದಲ್ಲಿ ಕೂಡ ಕಡಿಮೆ ಏನೂ ಇಲ್ಲ. 'ಮೈನಾ' ಚಿತ್ರದಲ್ಲಿ 'ರೈಲಿ'ನ ಮೂಲಕಾನೇ ನಾಯಕನಿಗೆ, ನಾಯಕಿ ಮೇಲೆ ಪ್ರೀತಿ ಹುಟ್ಟುತ್ತದೆ. ಇನ್ನುಳಿದಂತೆ 'ಮುಸ್ಸಂಜೆ ಮಾತು' ಚಿತ್ರದಲ್ಲಿ ಸುದೀಪ್ ಅವರು ಏನಾಗಲಿ ಮುಂದೆ ಸಾಗು ನೀ ಅಂತ ರೈಲಿನಲ್ಲೇ ಪಯಣ ಶುರು ಮಾಡುತ್ತಾರೆ.

    ಅಲ್ಲದೇ 'ತಿರುಪತಿ ಎಕ್ಸ್ ಪ್ರೆಸ್', 'ಭಜರಂಗಿ', 'ಚೆನ್ನೈ ಎಕ್ಸ್ ಪ್ರೆಸ್' ಹೀಗೆ ಹತ್ತು-ಹಲವಾರು ಸಿನಿಮಾಗಳು ರೈಲಿನಲ್ಲಿ ಶೂಟಿಂಗ್ ಆಗಿ, ಉಗಿಬಂಡಿಯ ಜೊತೆ-ಜೊತೆಗೆ ಸಿನಿಮಾಗಳು ಕೂಡ ಸಾಗಿವೆ. ಮುಂದೆ ಓದಿ...

    ಇನ್ಮುಂದೆ ಅಪರೂಪ ಆದ್ರೂ ಆಗಬಹುದು

    ಇನ್ಮುಂದೆ ಅಪರೂಪ ಆದ್ರೂ ಆಗಬಹುದು

    ಆದರೆ ಇನ್ನುಮುಂದೆ ರೈಲಿನಲ್ಲಿ ಸಿನಿಮಾ ಶೂಟಿಂಗ್ ಮಾಡೋದು ಕೊಂಚ ಮಟ್ಟಿಗೆ ಕಡಿಮೆ ಆಗಬಹುದು. ಅಲ್ಲದೇ ರೈಲಿನ ದೃಶ್ಯಗಳನ್ನು ನೀವಿನ್ನು ಸಿನಿಮಾದಲ್ಲಿ ನೋಡೋದು ಅಪರೂಪ ಆಗಲೂಬಹುದು.[ಐವರನ್ನು ಬಲಿಪಡೆದ ರೈಲು ದುರಂತದ ಚಿತ್ರಗಳು]

    ಚಿತ್ರೀಕರಣ ದರ ಏರಿಕೆ

    ಚಿತ್ರೀಕರಣ ದರ ಏರಿಕೆ

    ಅಂದಹಾಗೆ ಇನ್ನುಮುಂದೆ ಸಿನಿಮಾಗಳಲ್ಲಿ ರೈಲಿನ ದೃಶ್ಯಗಳು ಕಡಿಮೆ ಆಗಲು ಕಾರಣ ರೈಲಿನಲ್ಲಿ ಚಿತ್ರೀಕರಣದ ದರ ಏರಿಕೆ. ರೈಲಿನಲ್ಲಿ ಚಿತ್ರೀಕರಣದ ದರವನ್ನು ರೈಲ್ವೆ ಇಲಾಖೆ ಕಳೆದ ವರ್ಷವೇ ಎರಡು ದುಪ್ಪಟ್ಟು ಏರಿಸಿತ್ತು.['ಸರ್ಕಸ್ 'ಗಾಗಿ ಗಣೇಶ್ ರ ಮೈನವಿರೇಳಿಸುವ ಸಾಹಸ]

    ಗೂಡ್ಸ್ ರೈಲಿಗೂ ಏರಿಕೆ

    ಗೂಡ್ಸ್ ರೈಲಿಗೂ ಏರಿಕೆ

    ಈ ಬಾರಿ ದ್ವಿಗುಣಗೊಳಿಸಲು ಆದೇಶ ನೀಡಿರುವ ರೈಲ್ವೆ ಇಲಾಖೆ ಗೂಡ್ಸ್ ರೈಲಿನಲ್ಲಿನ ಚಿತ್ರೀಕರಣರದ ವೆಚ್ಚವನ್ನು ಜಾಸ್ತಿ ಮಾಡಿದೆ. ಇದೀಗ ಗೂಡ್ಸ್ ರೈಲಿನಲ್ಲಿ ಒಂದು ದಿನದ ಚಿತ್ರೀಕರಣಕ್ಕೆ ಇನ್ನುಮುಂದೆ ಸಿನಿಮಾ ನಿರ್ಮಾಪಕರು 2.5 ಲಕ್ಷದ ಬದ್ಲಾಗಿ 4.26 ಲಕ್ಷ ವ್ಯಯಿಸಬೇಕಾಗಿದೆ.

    ರೈಲು ತಡೆ ಹಿಡಿಯಲು ದುಪ್ಪಟ್ಟು ವೆಚ್ಚ

    ರೈಲು ತಡೆ ಹಿಡಿಯಲು ದುಪ್ಪಟ್ಟು ವೆಚ್ಚ

    ಬರೀ 4.26 ಲಕ್ಷ ರೂಪಾಯಿ ವ್ಯಯಿಸುವುದು ಮಾತ್ರವಲ್ಲದೇ ರೈಲನ್ನು ತಡೆ ಹಿಡಿಯಲು ಘಂಟೆಗೆ ಸುಮಾರು 900 ರೂಪಾಯಿ ಹೆಚ್ಚುವರಿ ಹಣವನ್ನು ನೀಡಬೇಕಾಗುತ್ತದೆ. 2009 ರಲ್ಲಿ ಈ ದರ ಗಂಟೆಗೆ 600 ರೂಪಾಯಿ ಇತ್ತು.

    ಜನನಿಬಿಡ ಪ್ರದೇಶದ ವೆಚ್ಚ ಕೂಡ ಜಾಸ್ತಿ

    ಜನನಿಬಿಡ ಪ್ರದೇಶದ ವೆಚ್ಚ ಕೂಡ ಜಾಸ್ತಿ

    ಇನ್ನು ಜನನಿಬಿಡ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್ ಮಾಡಬೇಕಾದರೆ ಸಬ್ ಜಾರ್ಜ್ ನ್ನು ಸದ್ಯಕಿದ್ದ 7% ನಿಂದ 17% ಗೆ ರೈಲ್ವೆ ಇಲಾಖೆ ಹೆಚ್ಚಿಸಿದೆ.

    ಭದ್ರತಾ ಮುಂಗಡ

    ಭದ್ರತಾ ಮುಂಗಡ

    ಭೋಗಿಯೊಂದಕ್ಕೆ ಭದ್ರತಾ ಮುಂಗಡವಾಗಿ ಸುಮಾರು 50,000 ರೂ ಮತ್ತು 2.5 ಲಕ್ಷ ಭದ್ರತಾ ಠೇವಣಿ ಇರಿಸಬೇಕು. 2015 ರಲ್ಲಿ ವಿಶೇಷ ರೈಲುಗಳಲ್ಲಿ ಚಿತ್ರೀಕರಣಕ್ಕಾಗಿ ಒಂದು ದಿನದ ಬಾಡಿಗೆಯನ್ನು 2.31 ಲಕ್ಷದಿಂದ 4.74 ಲಕ್ಷಕ್ಕೆ ಹೆಚ್ಚಿಸಲು ಆದೇಶಿಸಲಾಗಿತ್ತು.

    ಇನ್ಮುಂದೆ ರೈಲು ಬಿಡೋದು ಕಷ್ಟ-ಕಷ್ಟ

    ಇನ್ಮುಂದೆ ರೈಲು ಬಿಡೋದು ಕಷ್ಟ-ಕಷ್ಟ

    ಒಟ್ನಲ್ಲಿ ರೈಲ್ವೆ ಇಲಾಖೆಯ ದರ ಪಟ್ಟಿ ನೋಡಿ ಅಬ್ಬಬ್ಬಾ ಎಂದಿರುವ ಸಿನಿಮಾ ನಿರ್ಮಾಪಕರು ಇನ್ನುಮುಂದೆ ನಿಜ ರೈಲಿನ ಬದಲು, ರೈಲಿನ ಸೆಟ್ ಹಾಕಿ ಶೂಟ್ ಮಾಡಿದರೂ ಅಚ್ಚರಿ ಇಲ್ಲ.

    English summary
    After doubling the charges of shooting films on trains last year, the Indian Railways has now nearly doubled charges on goods stock used in shooting films from a minimum of Rs 2.5 lakh a day to Rs 4.26 lakh a day.
    Wednesday, August 3, 2016, 10:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X