For Quick Alerts
  ALLOW NOTIFICATIONS  
  For Daily Alerts

  ಫಿಲ್ಮ್‌ಫೇರ್‌ ಅವಾರ್ಡ್ಸ್ 2022: ಕಾರ್ಯಕ್ರಮದ ಟಿಕೆಟ್‌ಗಳು ಬುಕ್‌ಮೈಶೋನಲ್ಲಿ ಲಭ್ಯ; ಟಿಕೆಟ್ ದರವೆಷ್ಟು?

  |

  67ನೇ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅಕ್ಟೋಬರ್ 9ರ ಭಾನುವಾರದಂದು ಬೆಂಗಳೂರಿನ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ. ಇತ್ತೀಚೆಗಷ್ಟೆ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಕೂಡ ಬೆಂಗಳೂರಿನಲ್ಲಿ ನಡೆಯುವುದರ ಮೂಲಕ ಸದ್ದು ಮಾಡಿತ್ತು. ಇದೀಗ ಫಿಲ್ಮ್‌ಫೇರ್ ಅವಾರ್ಡ್ಸ್ ಕೂಡ ಬೆಂಗಳೂರಿನಲ್ಲಿಯೇ ನಡೆಯಲಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಫಿಲ್ಮ್‌ ಫೇರ್ ನಡೆಯಲಿರುವ ಮೈಲಿಗಲ್ಲು ಸೃಷ್ಟಿಯಾಗಲಿದೆ.

  ಇನ್ನು ಈ ಕಾರ್ಯಕ್ರಮದಲ್ಲಿ 2020 ಹಾಗೂ 2021ರಲ್ಲಿ ಬಿಡುಗಡೆಗೊಂಡ ಆಯ್ದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳು ಹಾಗೂ ಕಲಾವಿದರಿಗೆ ವಿವಿಧ ವಿಭಾಗಗಳಡಿಯಲ್ಲಿ ಪ್ರಶಸ್ತಿಯನ್ನು ನೀಡಲಿದ್ದು, ಸೆಲೆಬ್ರಿಟಿಗಳು ಮಾತ್ರವಲ್ಲದೇ ಸಾಮಾನ್ಯ ಸಿನಿ ಪ್ರೇಕ್ಷಕರೂ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದಾಗಿದೆ.

  ಹೌದು, ಈ ಬಾರಿಯ ಫಿಲ್ಮ್‌ಫೇರ್ ಕಾರ್ಯಕ್ರಮ ನಡೆಯಲಿರುವ ಸ್ಥಳದಲ್ಲಿ ಮೂರು ವಿಭಿನ್ನವಾದ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದ್ದು, ವೇದಿಕೆ ಸಮೀಪದ ಸೀಟ್‌ಗಳ ಟಿಕೆಟ್ ದರ 5000 ರೂಪಾಯಿ, ನಂತರದ ಕೆಲ ಸೀಟ್‌ಗಳ ಟಿಕೆಟ್ ದರ 2500 ಹಾಗೂ ಉಳಿದ ಟಿಕೆಟ್ ದರ 1500 ರೂಪಾಯಿಗಳಿದೆ. ಈ ಟಿಕೆಟ್‌ಗಳನ್ನು ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ಖರೀದಿಸಬಹುದಾಗಿದೆ.

  ನಾಮಿನೇಟ್ ಆದ ಕನ್ನಡ ಚಿತ್ರ ಮತ್ತು ಕಲಾವಿದರ ಪಟ್ಟಿ:

  ಚಿತ್ರ: ಆಕ್ಟ್ 1978, ದಿಯಾ, ಗರುಡ ಗಮನ ವೃಷಭ ವಾಹನ, ಶಿವಾಜಿ ಸುರತ್ಕಲ್, ಬಡವ ರಾಸ್ಕಲ್ ಮತ್ತು ಸಲಗ

  ನಟ: ಧನಂಜಯ್ (ಬಡವ ರಾಸ್ಕಲ್), ರಮೇಶ್ ಅರವಿಂದ್ (ಶಿವಾಜಿ ಸುರತ್ಕಲ್), ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ), ರಿಷಭ್ ಶೆಟ್ಟಿ (ಗರುಡ ಗಮನ ವೃಷಭ ವಾಹನ), ಕೃಷ್ಣ (ಲವ್ ಮಾಕ್ಟೇಲ್), ಪ್ರಜ್ವಲ್ ದೇವರಾಜ್ (ಜಂಟಲ್ ಮನ್) ಮತ್ತು ದರ್ಶನ್ (ರಾಬರ್ಟ್)

  ನಟಿ: ಯಜ್ಞ ಶೆಟ್ಟಿ (ಆಕ್ಟ್ 1978), ಮಿಲನಾ ನಾಗರಾಜ್ (ಲವ್ ಮಾಕ್ಟೇಲ್), ಖುಷಿ ರವಿ (ದಿಯಾ), ಅಮೃತ ಅಯ್ಯಂಗಾರ್ (ಬಡವ ರಾಸ್ಕಲ್), ಆಶಾ ಭಟ್ (ರಾಬರ್ಟ್), ರೆಬಾ ಮೋನಿಕಾ ಜಾನ್ (ರತ್ನನ್ ಪ್ರಪಂಚ) ಮತ್ತು ಆರೋಹಿ ನಾರಾಯಣ (ಭೀಮಸೇನ ನಳಮಹಾರಾಜ)

  ನಿರ್ದೇಶಕ: ಮನ್ಸೋರೆ (ಆಕ್ಟ್ 1978), ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್), ದುನಿಯಾ ವಿಜಯ್ (ಸಲಗ), ಕೃಷ್ಣ (ಲವ್ ಮಾಕ್ಟೇಲ್) ಶಂಕ್ ಗುರು (ಬಡವ ರಾಸ್ಕಲ್), ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ), ಜಡೇಶ್ ಕುಮಾರ್ ಹಂಪಿ (ಜಂಟಲ್ ಮ್ಯಾನ್)

  ಸಂಗೀತ ನಿರ್ದೇಶಕ: ಚರಣ್ ರಾಜ್ (ಸಲಗ), ಬಿ ಅಜನೀಶ್ ಲೋಕನಾಥ್ (ಜಂಟಲ್ ಮ್ಯಾನ್) ಶ್ರೀಧರ್ ವಿ ಸಂಭ್ರಮ್ (ಮುಗಿಲ್ಪೇಟೆ), ಅರ್ಜುನ್ ಜನ್ಯ ಮತ್ತು ವಿ ಹರಿಕೃಷ್ಣ (ರಾಬರ್ಟ್), ವಾಸುಕಿ ವೈಭವ್ (ಬಡವ ರಾಸ್ಕಲ್), ರಘು ದೀಕ್ಷಿತ್ (ಲವ್ ಮಾಕ್ಟೇಲ್)

  ಅತ್ಯುತ್ತಮ ಪೋಷಕ ನಟ: ನಾಗಭೂಷಣ (ಬಡವ ರಾಸ್ಕಲ್), ಪ್ರಮೋದ್ ಪಂಜು (ರತ್ನನ್ ಪ್ರಪಂಚ), ಸಂಚಾರಿ ವಿಜಯ್ (ಜಂಟಲ್ ಮ್ಯಾನ್), ಬಿ.ಸುರೇಶ (ಆಕ್ಟ್ 1978) ಧನಂಜಯ (ಸಲಗ), ಬಾಲಾಜಿ ಮನೋಹರ್ (ಅಮೃತ್ ಅಪಾರ್ಟ್‌ಮೆಂಟ್ಸ್), ಅಚ್ಯುತ್ ಕುಮಾರ್ (ಭೀಮಸೇನ ನಳಮಹಾರಾಜ)

  ಅತ್ಯುತ್ತಮ ಪೋಷಕ ನಟಿ: ಅಮೃತ ಅಯ್ಯಂಗಾರ್ (ಲವ್ ಮಾಕ್ಟೇಲ್), ಆರೋಹಿ ನಾರಾಯಣ (ಶಿವಾಜಿ ಸುರತ್ಕಲ್), ಉಮಾಶ್ರೀ (ರತ್ನನ್ ಪ್ರಪಂಚ), ಮೇಘಶ್ರೀ (ಮುಗಿಲಪೇಟೆ), ಉಷಾ ರವಿಶಂಕರ್ (ಸಲಗ), ಸ್ಪರ್ಶ ರೇಖಾ (ಪಾಪ್‌ಕಾರ್ನ್ ಮಂಕಿ ಟೈಗರ್)

  ಅತ್ಯುತ್ತಮ ಸಾಹಿತ್ಯ: ಕವಿರಾಜ್- ಮೆಲ್ಲನೆ (ರೈಡರ್), ವಿ ನಾಗೇಂದ್ರ ಪ್ರಸಾದ್- ಧೀರ ಸಮ್ಮೋಹಗಾರ (ಬಿಚ್ಚುಗತ್ತಿ), ಜಯಂತ್ ಕಾಯ್ಕಿಣಿ- ತೇಲಾಡು ಮುಗಿಲೆ (ಆಕ್ಟ್ 1978), ನಾಗಾರ್ಜುನ್ ಶರ್ಮಾ- ಮಳೆಯೇ ಮಳೆಯೇ (ಸಲಗ), ಧನಂಜಯ- ಉಡುಪಿ ಹೊಟೇಲು (ಬಡವ ರಾಸ್ಕಲ್), ಪ್ರಮೋದ್ ಮರವಂತೆ- ದೂರ ಹೋಗೋ ಮುನ್ನಾ (ಮುಗಿಲ್ಪೇಟೆ)

  ಅತ್ಯುತ್ತಮ ಗಾಯಕ: ರಘು ದೀಕ್ಷಿತ್- ಮಳೆ ಮಳೆ (ನಿನ್ನ ಸನಿಹಕೆ) ನಕುಲ್ ಅಭ್ಯಂಕರ್- ತರೀಫು ಮಾಡಲು (ಮುಗಿಲ್ಪೇಟೆ), ಕಡಬಗೆರೆ ಮುನಿರಾಜು- ತೇಲಾಡೊ ಮುಗಿಲೇ (ಆಕ್ಟ್ 1978), ಸಂಜಿತ್ ಹೆಗ್ಡೆ- ಮೆಲ್ಲನೆ (ರೈಡರ್), ವಿಜಯ್ ಪ್ರಕಾಶ್- ಉಡುಪಿ ಹೊಟೇಲು (ಬಡವ ರಾಸ್ಕಲ್), ಸಿದ್ ಶ್ರೀರಾಮ್-ಹಾಯಾಗಿದೆ (ಟಾಮ್ ಅಂಡ್ ಜೆರ್ರಿ)

  ಅತ್ಯುತ್ತಮ ಗಾಯಕಿ: ಶ್ವೇತಾ ದೇವನಹಳ್ಳಿ- ತರೀಫು ಮಾಡಲು (ಮುಗಿಲಪೇಟೆ), ಅನುರಾಧಾ ಭಟ್- ಧೀರ ಸಮ್ಮೋಹಗಾರ (ಬಿಚ್ಚುಗತ್ತಿ), ಚಿನ್ಮಯಿ ಶ್ರೀಪಾದ- ಹಾಯಾದ ಹಾಯಾದ (ದಿಯಾ), ಶ್ರುತಿ ವಿ ಎಸ್- ಲವ್ ಯೂ ಚಿನ್ನಾ (ಲವ್ ಮಾಕ್ಟೇಲ್), ಐಶ್ವರ್ಯ ರಂಗರಾಜನ್- ಮಳೆಯೇ ಮಳೆಯೇ (ಸಲಗ), ಶ್ರೇಯಾ ಘೋಷಾಲ್- ಕಣ್ಣು ಹೊಡಿಯಾಕ (ರಾಬರ್ಟ್)

  English summary
  ಫಿಲ್ಮ್‌ಫೇರ್‌ ಅವಾರ್ಡ್ಸ್ 2022: ಕಾರ್ಯಕ್ರಮದ ಟಿಕೆಟ್‌ಗಳು ಬುಕ್‌ಮೈಶೋನಲ್ಲಿ ಲಭ್ಯ; ಟಿಕೆಟ್ ದರವೆಷ್ಟು?
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X