For Quick Alerts
  ALLOW NOTIFICATIONS  
  For Daily Alerts

  ತಲ್ವಾರ್ ನಲ್ಲಿ ಕೇಕ್ ಕಟಿಂಗ್: ನಟ ದುನಿಯಾ ವಿಜಯ್ ವಿರುದ್ಧ ಎಫ್.ಐ.ಆರ್.!

  |

  ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ದುನಿಯಾ ವಿಜಯ್ ಮಾಡಿದ ಒಂದು ಎಡವಟ್ಟು ಇದೀಗ ಸಂಕಷ್ಟಕ್ಕೆ ಕಾರಣವಾಗಿದೆ. ಬರ್ತಡೇ ಸೆಲೆಬ್ರೇಷನ್ ವೇಳೆ ತಲ್ವಾರ್ ನಿಂದ ಕೇಕ್ ಕಟ್ ಮಾಡಿದ ನಟ ದುನಿಯಾ ವಿಜಯ್ ವಿರುದ್ಧ ಇದೀಗ ಎಫ್.ಐ.ಆರ್ ದಾಖಲಾಗಿದೆ.

  ಘಟನೆಯ ಹಿನ್ನಲೆ: ಜನವರಿ 20 ರಂದು ನಟ ದುನಿಯಾ ವಿಜಯ್ ಕುಟುಂಬ ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಈ ವೇಳೆ ತಲ್ವಾರ್ ನಿಂದ ದುನಿಯಾ ವಿಜಯ್ ಕೇಕ್ ಕಟ್ ಮಾಡಿದ್ದರು.

  ಹುಟ್ಟುಹಬ್ಬದಂದು ದುನಿಯಾ ವಿಜಿ ಮತ್ತೊಂದು ವಿವಾದ: ತಲ್ವಾರ್ ನಲ್ಲಿ ಕೇಕ್ ಕಟ್ ಮಾಡಿದ ನಟಹುಟ್ಟುಹಬ್ಬದಂದು ದುನಿಯಾ ವಿಜಿ ಮತ್ತೊಂದು ವಿವಾದ: ತಲ್ವಾರ್ ನಲ್ಲಿ ಕೇಕ್ ಕಟ್ ಮಾಡಿದ ನಟ

  ಇದನ್ನು ಗಮನಿಸಿದ ಡಿಸಿಪಿ ರೋಹಿಣಿ ತನಿಖೆ ನಡೆಸುವಂತೆ ಗಿರಿನಗರ ಪೊಲೀಸರಿಗೆ ಸೂಚನೆ ನೀಡಿದ್ದರು. ದುನಿಯಾ ವಿಜಯ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದ ಗಿರಿನಗರ ಪೊಲೀಸರು ಇದೀಗ ಸೆಕ್ಷನ್ 283 ಅಡಿಯಲ್ಲಿ ಎಫ್.ಐ.ಆರ್ ಹಾಕಿದ್ದಾರೆ.

  ಹುಟ್ಟುಹಬ್ಬದ ದಿನ ತಲ್ವಾರ್ ನಲ್ಲಿ ಕೇಕ್ ಕಟ್ ಮಾಡಿದ ವಿಜಯ್ ವಿರುದ್ಧ ಕೇಸ್ ದಾಖಲುಹುಟ್ಟುಹಬ್ಬದ ದಿನ ತಲ್ವಾರ್ ನಲ್ಲಿ ಕೇಕ್ ಕಟ್ ಮಾಡಿದ ವಿಜಯ್ ವಿರುದ್ಧ ಕೇಸ್ ದಾಖಲು

  ತಲ್ವಾರ್ ನಲ್ಲಿ ಕೇಕ್ ಕಟ್ ಮಾಡಿದ್ದು ತಪ್ಪು ಎಂದು ಗೊತ್ತಾಗುತ್ತಿದ್ದಂತೆಯೇ, ''ನನ್ನ ಗಮನಕ್ಕೆ ಬಾರದೆ ಎಡವಟ್ಟಾಗಿದೆ. ಕ್ಷಮೆ ಇರಲಿ'' ಎಂದು ದುನಿಯಾ ವಿಜಯ್ ಕ್ಷಮೆ ಕೇಳಿದ್ದರು. ಪೊಲೀಸ್ ಠಾಣೆಗೂ ತೆರಳಿ ತಪ್ಪೊಪ್ಪಿಕೊಂಡಿದ್ದರು.

  English summary
  FIR against Kannada Actor Duniya Vijay for cutting cake in Talwar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X