ರಾಗಿಣಿ, ಮಾಜಿ ಸಚಿವರ ಮಗ ಸೇರಿ 12 ಮಂದಿ ವಿರುದ್ಧ ಎಫ್‌ಐಆರ್: ಇಲ್ಲಿದೆ ಪಟ್ಟಿ

ಡ್ರಗ್ಸ್ ಜಾಲದೊಂದಿಗೆ ಸಂಪರ್ಕ ಪ್ರಕರಣದಲ್ಲಿ ನಟಿ ರಾಗಿಣಿ ಹಾಗೂ ಕೆಲವರು ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ. ಜೊತೆಗೆ ಇನ್ನಷ್ಟು ವ್ಯಕ್ತಿಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.

ನಟಿ ರಾಗಿಣಿ ಸೇರಿ ಒಟ್ಟು 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈ ಪಟ್ಟಿಯಲ್ಲಿ ನಟಿ ರಾಗಿಣಿ ಮಾತ್ರವಲ್ಲ ಮಾಜಿ ಸಚಿವರೊಬ್ಬರ ಪುತ್ರನ ಹೆಸರೂ ಇದೆ!

ಹೌದು, ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವಾ ಹೆಸರೂ ಸಹ ಎನ್‌ಸಿಬಿ ಹಾಕಿರುವ ಎಫ್‌ಐಆರ್‌ನಲ್ಲಿ ಇದೆ. ಹನ್ನೆರಡು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ಎಸಿಪಿ ಕೆ.ಸಿ.ಗೌತಮ್ ಮಾಹಿತಿ ನೀಡಿದ್ದಾರೆ.

12 ಮಂದಿ ಮೇಲೆ ಎಫ್‌ಐಆರ್ ದಾಖಲು

12 ಮಂದಿ ಮೇಲೆ ಎಫ್‌ಐಆರ್ ದಾಖಲು

ಶಿವಪ್ರಕಾಶ್ ಚಿಪ್ಪಿ, ರಾಗಿಣಿ ದ್ವಿವೇದಿ, ವೀರೇನ್ ಖನ್ನಾ, ಪ್ರಶಾಂತ್ ರಾಂಕಾ, ವೈಭವ್ ಜೈನ್, ಆದಿತ್ಯ ಆಳ್ವಾ, ಲೂಮ್ ಪೆಪ್ಪರ್ ಸೈಮನ್, ಪ್ರಶಾಂತ್ ರಾಜ್, ಅಶ್ವಿನಿ ಅಲಿಯಾಸ್ ಬೂಗಿ, ಅಭಿಸ್ವಾಮಿ, ರಾಹುಲ್ ತೊನ್ಸೆ, ವಿನಯ್ ಇವರುಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮಾಜಿ ಸಚಿವರ ಪುತ್ರನ ಮೇಲೆ ಎಫ್‌ಐಆರ್

ಮಾಜಿ ಸಚಿವರ ಪುತ್ರನ ಮೇಲೆ ಎಫ್‌ಐಆರ್

ಎಫ್‌ಐಆರ್ ದಾಖಲಾಗಿರುವ ಆದಿತ್ಯಾ ಆಳ್ವಾ, ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವಾ ಪುತ್ರ. ಈ ಬಾಲಿವುಡ್ ನಟ ವಿವೇಕ್ ಒಬೆರಾಯ್ ಗೆ ಭಾವಮೈದುನ (ಪತ್ನಿಯ ತಮ್ಮ) ಸಹ ಆಗಿದ್ದಾರೆ.

ಆಫ್ರಿಕಾದ ಪ್ರಜೆ ಲೂಮ್ ಪೆಪ್ಪರ್ ಸೈಮನ್ ಬಂಧನ

ಆಫ್ರಿಕಾದ ಪ್ರಜೆ ಲೂಮ್ ಪೆಪ್ಪರ್ ಸೈಮನ್ ಬಂಧನ

ನಟಿಯರಿಗೆ ಸಿಂಥೆಟಿಕ್ ಡ್ರಗ್ಸ್ ಅನ್ನು ಸರಬರಾಜು ಮಾಡುತ್ತಿದ್ದ ಆಫ್ರಿಕಾದ ಪ್ರಜೆ ಲೂಮ್ ಪೆಪ್ಪರ್ ಸೈಮನ್ ಅನ್ನು ನಿನ್ನೆ ಬಂಧಿಸಲಾಗಿದ್ದು, ಆತನಿಂದ ಇನ್ನಷ್ಟು ಮಹತ್ವದ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.

Recommended Video

25 ಸಲ ಹುಚ್ಚ ಸಿನಿಮಾನ ಥಿಯೇಟರ್ ನಲ್ಲಿ ನೋಡಿದ್ದೀನಿ | Kirik Keerthi | Filmibeat Kannada
ಇನ್ನಷ್ಟು ಮಂದಿ ಬಂಧನ ಸಾಧ್ಯತೆ

ಇನ್ನಷ್ಟು ಮಂದಿ ಬಂಧನ ಸಾಧ್ಯತೆ

ನಟಿ ರಾಗಿಣಿಯನ್ನು ಮೂರು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿದ್ದು, ರಾಗಿಣಿ ಅವರಿಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ನಿನ್ನೆ ವಿಚಾರಣೆ ನಡೆಸಿಲ್ಲ. ಇಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ನಡುವೆ ಇದೇ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಂದಿಯ ಬಂಧನ ಆಗುವ ಸಾಧ್ಯತೆ ಇದೆ.

More from Filmibeat

English summary
FIR lodged against 12 people including former minster's son in Drugs case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X