For Quick Alerts
  ALLOW NOTIFICATIONS  
  For Daily Alerts

  ನಟಿ ಲೀಲಾವತಿ ತೋಟಕ್ಕೆ ಬೆಂಕಿ: ಅಪಾರ ಪ್ರಮಾಣದಲ್ಲಿ ನಷ್ಟ.!

  |

  ಹಿರಿಯ ನಟಿ ಲೀಲಾವತಿ ಅವರ ತೋಟದಲ್ಲಿ ನಿನ್ನೆ ಬೆಂಕಿ ಕಾಣಿಸಿಕೊಂಡಿದೆ. ನೆಲಮಂಗಲ ತಾಲೂಕು ಮೈಲಹಳ್ಳಿ ಸಮೀಪದಲ್ಲಿ ಇರುವ ತೋಟದಲ್ಲಿ ನಿನ್ನೆ ಮಧ್ಯಾಹ್ನ ದಿಢೀರನೆ ಬೆಂಕಿ ಹೊತ್ತಿಕೊಂಡಿದೆ.

  ತೋಟಕ್ಕೆ ಬೆಂಕಿ ತಗುಲಿದ್ದು ಅರಿವಿಗೆ ಬರುತ್ತಿದ್ದಂತೆಯೇ, ವಿನೋದ್ ರಾಜ್ ಬೆಂಕಿ ನಂದಿಸಲು ಪ್ರಯತ್ನಿಸಿದರು. ಸಹಾಯಕ್ಕಾಗಿ ಕೆಲವರಿಗೆ ಫೋನ್ ಮಾಡಿದರು. ವಿನೋದ್ ರಾಜ್ ಮತ್ತು ಸ್ನೇಹಿತರು ತೋಟದಲ್ಲಿ ಬೆಂಕಿ ಆರಿಸಲು ಹರಸಾಹಸ ಪಟ್ಟರು.

  ಉತ್ತರ ಕರ್ನಾಟಕದ ಜಾನುವಾರುಗಳಿಗೆ ಮೇವು ನೀಡಿದ ನಟಿ ಲೀಲಾವತಿ

  ಇಡೀ ತೋಟದಲ್ಲಿ ವ್ಯಾಪಕವಾಗಿ ಬೆಂಕಿ ಆವರಿಸಿಕೊಂಡ ಪರಿಣಾಮ, 20ಕ್ಕೂ ಹೆಚ್ಚು ತೆಂಗಿನ ಮರ, ಮಾವು, ಸಪೋಟ ಮುಂತಾದ ಮರ-ಗಿಡಗಳು ಸುಟ್ಟು ಭಸ್ಮವಾಗಿವೆ. ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಪ್ರೀತಿಯಿಂದ ಬೆಳೆಸಿದ ತೋಟ ಬೆಂಕಿಗೆ ಆಹುತಿಯಾಗಿದ್ದರಿಂದ ಲೀಲಾವತಿ ಕಣ್ಣೀರಿಟ್ಟಿದ್ದಾರೆ.

  ವಿನೋದ್ ರಾಜ್ ಬಳಿ 1 ಲಕ್ಷ ಹಣ ಕದ್ದು ಪರಾರಿಯಾದ ಕಳ್ಳರು

  ಅಸಲಿಗೆ, ನಟಿ ಲೀಲಾವತಿ ಮತ್ತು ವಿನೋದ್ ರಾಜ್ ವಾಸವಾಗಿರುವುದು ಇದೇ ತೋಟದ ಮನೆಯಲ್ಲಿ. ಲೀಲಾವತಿ ತೋಟಕ್ಕೆ ಬೆಂಕಿ ಬಿದ್ದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ತೋಟಕ್ಕೆ ಬೆಂಕಿ ಬಿದ್ದಿದೆ. ಲೀಲಾವತಿ ಮತ್ತು ವಿನೋದ್ ರಾಜ್ ಗೆ ನಷ್ಟ ಉಂಟು ಮಾಡಲು ಕಾಣದ ಕೈಗಳು ಕೆಲಸ ಮಾಡುತ್ತಿವೆಯಾ.? ಎಂಬ ಪ್ರಶ್ನೆ ಹಲವರಿಗೆ ಕಾಡುತ್ತಿದೆ.

  English summary
  Fire catches at Leelavathi Vinod Raj farm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X