»   » ಸ್ಯಾಂಡಲ್ ವುಡ್ ನ್ನು ಬೆಚ್ಚಿ ಬೀಳಿಸಲು ಬರ್ತಾ ಇದೆ ಹೊಸಬರ '666'

ಸ್ಯಾಂಡಲ್ ವುಡ್ ನ್ನು ಬೆಚ್ಚಿ ಬೀಳಿಸಲು ಬರ್ತಾ ಇದೆ ಹೊಸಬರ '666'

Posted By:
Subscribe to Filmibeat Kannada

ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಹಾರರ್ ಚಿತ್ರಗಳ ಸಂಖ್ಯೆ ವೃದ್ಧಿಯಾಗಿದ್ದು, ದಿನದಿಂದ ದಿನಕ್ಕೆ ಹಾರರ್-ಥ್ರಿಲ್ಲರ್ ಸಿನಿಮಾ ಮಾಡುವವರು ಜಾಸ್ತಿಯಾಗಿದ್ದಾರೆ.

ಇದೀಗ ಕನ್ನಡ ಚಿತ್ರರಂಗದ ಹಾರರ್ ಸಿನಿಮಾಗಳ ಪಟ್ಟಿಗೆ ಹೊಸ ಸೇರ್ಪಡೆ ಎಲ್ಲಾ ಹೊಸಬರೇ ಸೇರಿಕೊಂಡು ಮಾಡಿರುವ '666' ಎಂಬ ವಿಭಿನ್ನ ಟೈಟಲ್ ಇರೋ ಸಿನಿಮಾ.

ಒಂದು ಮಗು ಮತ್ತು 9 ಜನ ನಾಯಕ-ನಾಯಕಿಯರ ನಡುವೆ ನಡೆಯುವ '666' ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನವನ್ನು ಕೂಡ ಧನು ಗೌಡ ಎಂಬ ನವ ಪ್ರತಿಭೆ ಮಾಡಿದ್ದಾರೆ. ಇವರ ಸಿನಿಮಾ ಮಾಡುವ ಹುಚ್ಚಿಗೆ ಅವರ ಇಡೀ ಕುಟುಂಬವೇ ಸಪೋರ್ಟ್ ಮಾಡುತ್ತಿದೆ ಅನ್ನೋದು ವಿಶೇಷ.

First half completed in Kannada Movie '666'

ಅಂದಹಾಗೆ ನೈಜ ಘಟನೆಯನ್ನಾಧರಿಸಿದ ಈ ಸಿನಿಮಾ ಸುಮಾರು 80 ವರ್ಷಗಳ ಹಿಂದೆ ರಾಮನಗರದಲ್ಲಿ ನಡೆದಂತಹ ನೈಜ ಘಟನೆಯನ್ನು ಇಟ್ಟುಕೊಂಡು ಸಿನಿಮಾಗೆ ಕಥೆ ಬರೆಯಲಾಗಿದೆ.

ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ '666' ಚಿತ್ರತಂಡ ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರಕ್ಕೆ ಚಿನ್ಮಯ್ ರಾವ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಇನ್ನುಳಿದಂತೆ ಚಿತ್ರದಲ್ಲಿ ಗೌತಮ್, ಬೀರೇಶ್, ಮಧು, ಅಕ್ಷಯ್, ಲಕ್ಷ್ಮಣ್, ಬಿಂದು, ಪ್ರಿಯಾಂಕ, ಅನುಷಾ ರಾಜ್ ಹಾಗೂ ಬೇಬಿ ಮಂದಾರ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಹಲವಾರು ಅಡೆ-ತಡೆಗಳು ಎದುರಾಗಿದ್ದು, ಅವುಗಳನ್ನೆಲ್ಲಾ ಮೆಟ್ಟಿ ನಿಂತು ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡದವರು ಪೂರ್ಣಗೊಳಿಸಿದ್ದಾರೆ.

ಸ್ಯಾಂಡಲ್ ವುಡ್ ನ್ನು ಬೆಚ್ಚಿ ಬೀಳಿಸಲು ಬರ್ತಾ ಇದೆ ಹೊಸಬರ '666'

ಸ್ಯಾಂಡಲ್ ವುಡ್ ನ್ನು ಬೆಚ್ಚಿ ಬೀಳಿಸಲು ಬರ್ತಾ ಇದೆ ಹೊಸಬರ '666'

-
-
-
-
-
-
-
English summary
Kannada Movie '666' First half shooting completed. Actor Gowtham, Actor Beeresh, Actor Akshay, Actress Priyanka in the lead role. The movie is directed by Dhanu Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada