Just In
Don't Miss!
- News
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Lifestyle
ಮಹಾಶಿವರಾತ್ರಿ 2021: ದಿನಾಂಕ, ಪೂಜಾಸಮಯ, ಮಹತ್ವ ಹಾಗೂ ವಿಧಿವಿಧಾನದ ಸಂಪೂರ್ಣ ಮಾಹಿತಿ ನಿಮಗಾಗಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಜ್ ಕುಮಾರ್ 'ಡಾಕ್ಟರೇಟ್' ಗೌರವಕ್ಕೆ 45 ವರ್ಷ: ಹೇಗಿತ್ತು ಅಂದಿನ ಸನ್ನಿವೇಶ?
ಕನ್ನಡ ಚಿತ್ರರಂಗದ ಧ್ರುವತಾರೆ, ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ವರನಟ ರಾಜ್ ಕುಮಾರ್ ಅವರಿಗೆ ನೀಡಲಾದ ಗೌರವ ಡಾಕ್ಟರೇಟ್‌ಗೆ 45 ವರ್ಷದ ಸಂಭ್ರಮ. ರಾಜ್ ಕುಮಾರ್ ಅವರು ಡಾ ರಾಜ್ ಕುಮಾರ್ ಆಗಿ 45 ವರ್ಷ ಆಗಿದೆ. ಈ ವಿಶೇಷವಾಗಿ ಅಂದಿನ ಸನ್ನಿವೇಶವನ್ನು ಒಮ್ಮೆ ಸ್ಮರಿಸೋಣ.
ಫೆಬ್ರವರಿ 8, 1976....ಕರ್ನಾಟಕ ಕಣ್ಮಣಿ ರಾಜ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಗೌರವ ನೀಡಿ ಗೌರವಿಸಿದ ದಿನ. ಈಗ ಈ ಸಂಭ್ರಮಕ್ಕೆ 45 ವರ್ಷ. ಭಾರತೀಯ ಸಿನಿಮಾ ಇತಿಹಾಸದಲ್ಲೇ ನಟನೊಬ್ಬ ಮೊದಲ ಸಲ ಡಾಕ್ಟರೇಟ್ ಪಡೆದ ಸಂದರ್ಭ ಇದು. ಆಮೇಲೆ ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣ ಪ್ರಶಸ್ತಿಗಳು ಅಣ್ಣಾವ್ರನ್ನು ಅರಿಸಿ ಬಂದಿತ್ತು. ಮುಂದೆ ಓದಿ...

ಕನ್ನಡಕ್ಕೆ ಅಣ್ಣಾವ್ರು ನೀಡಿದ ಕೊಡುಗೆಗೆ ಸಿಕ್ಕ ಗೌರವ
ಕನ್ನಡ ಭಾಷೆ, ನೆಲ, ಕಲೆ ಮತ್ತು ಸಂಸ್ಕೃತಿ ಮತ್ತು ಸಂಗೀತಕ್ಕೆ ರಾಜ್ ಕುಮಾರ್ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿತ್ತು. ಮೈಸೂರು ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಆಗಿನ ಕುಲಪತಿ ಡಾ.ಉಮಾಶಂಕರ್ ದೀಕ್ಷಿತ್ ಮತ್ತು ಉಪಕುಲಪತಿ ಡಾ.ಡಿ.ವಿ. ಅರಸ್ ಅವರು ರಾಜ್ ಕುಮಾರ್‌ಗೆ ಡಾಕ್ಟರೇಟ್ ನೀಡಿದ್ದರು.
ಅಣ್ಣಾವ್ರ ಬಿಡುಗಡೆಗೆ ಸರಕಾರ ಕೊಟ್ಟ ದುಡ್ಡಿನ ಬಗ್ಗೆ ಸ್ಪೋಟಕ ಮಾಹಿತಿ ಹೊರಹಾಕಿದ ತಮಿಳು ಪತ್ರಕರ್ತ

ಕಿಕ್ಕಿರಿದು ತುಂಬಿದ ಜನರು
ವಿಶ್ವವಿದ್ಯಾಲಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಜನ ಕಿಕ್ಕಿರಿದು ತುಂಬಿದ್ದರು. ಒಳಗೆ ಪ್ರವೇಶ ಮಾಡಲು ಸಹ ಕಷ್ಟಕರವಾಗಿತ್ತು. ಅದೇ ದಿನ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಡಾ. ಎಚ್.ಎನ್. ಸೆಟ್ನಾ, ಕನ್ನಡ ಕವಿ, ಬರಹಗಾರ, ಪ್ರಬಂಧಕಾರ ಮತ್ತು ವಿಮರ್ಶಕ ವಿ. ಸೀತಾರಾಮಯ್ಯ ಹಾಗೂ ಇತಿಹಾಸದ ಪ್ರಾಧ್ಯಾಪಕ ಎಂ.ಎಚ್ ಗೋಪಾಲ್ ಅವರಿಗೂ ಸಹ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಏನ್ ನೋಡಿ ನನಗೆ ಡಾಕ್ಟರೇಟ್ ಕೊಡ್ತಿದ್ದೀರಾ?
ವೇದಿಕೆವೊಂದರಲ್ಲಿ ಮಾತನಾಡುತ್ತಿದ್ದ ಡಾ.ರಾಜ್ ಕುಮಾರ್ ಅವರು, ತಮಗೆ ನೀಡಿರುವ ಡಾಕ್ಟರೇಟ್ ಬಗ್ಗೆ ಹೀಗೆ ಕೇಳಿದ್ದರಂತೆ. ''ಏನ್ ನೋಡಿ ನನಗೆ ಡಾಕ್ಟರೇಟ್ ಕೊಡ್ತಿದ್ದೀರಾ? ನಾನು ವಿದ್ಯಾವಂತನಲ್ಲ, ಓದಿದವನಲ್ಲ, ನಾನೇನೂ ಎಂ.ಎ ಆಗಲಿ ಪಿ.ಎಚ್.ಡಿ ಮಾಡಿದ್ದೀನಾ. ಬಾಲ್ಯದಲ್ಲಿ ನಾನು ಹಳ್ಳಿನಲ್ಲಿ ಎಮ್ಮೆ ಮೇಯಸ್ತಾ ಇದ್ದೆ ನಾನು'' ಅಂತಾ ಹೇಳಿದ್ದರು.
ಡಾ.ರಾಜ್ ಕುಮಾರ್ 'ಕಸ್ತೂರಿ ನಿವಾಸ' ಚಿತ್ರಕ್ಕೆ 50 ವರ್ಷದ ಸಂಭ್ರಮ

ಪಾರ್ವತಮ್ಮ ಅವರಿಗೂ ಸಿಕ್ಕಿದೆ ಡಾಕ್ಟರೇಟ್
2014 ರಲ್ಲಿ ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಸಾಧನೆಯನ್ನ ಗೌರವಿಸಿ ಡಾಕ್ಟರೇಟ್ ನೀಡಿತ್ತು. 2015ರ ಮೇ ತಿಂಗಳಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.