For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಬರುತ್ತಿದೆ ಮೊತ್ತ ಮೊದಲ ಜೋಂಬಿ ಸಿನಿಮಾ

  |

  'ಜೋಂಬಿ' ಸಿನಿಮಾಗಳು ಜನಪ್ರಿಯ ಸಿನಿಮಾ ಮಾದರಿಗಳಲ್ಲಿ ಒಂದು. ಈ ಮಾದರಿಯ ಸಿನಿಮಾಗಳಿಗೆ ಪ್ರತ್ಯೇಕ ಪ್ರೇಕ್ಷಕವರ್ಗವೇ ಇದೆ. 'ಜೋಂಬಿ' ಸಿನಿಮಾಗಳನ್ನು ಇಷ್ಟಪಡದವರೂ ಇದ್ದಾರೆ.

  ಸತ್ತವರೆಲ್ಲ ವಿಕಾರ ದೆವ್ವಗಳಾಗಿ ಬದುಕಿರುವವರನ್ನು ಕೊಂದು ಅವರನ್ನೂ ದೆವ್ವಗಳನ್ನಾಗಿಸು 'ಜೋಂಬಿ' ಸಿನಿಮಾ ಕನ್ನಡದಲ್ಲೂ ನಿರ್ಮಾಣ ಆಗಲಿಕ್ಕಿದೆ. ಕನ್ನಡದಲ್ಲಿ ಜೋಂಬಿ ಸಿನಿಮಾ ನಿರ್ಮಾಣ ಆಗುತ್ತಿರುವುದು ಇದೇ ಮೊದಲು. ಈ ಸಾಹಸಕ್ಕೆ ಕೈ ಹಾಕಿರುವವರು ನಿರ್ದೇಶಕ ಮನೋಜ್ ಪಿ ನಡಲುಮನೆ.

  ಕನ್ನಡದಲ್ಲಿ ಮೊದಲ ಬಾರಿಗೆ ಸೂಪರ್ ವುಮನ್ ಸಿನಿಮಾ 'ಆನ' ನಿರ್ದೇಶನ ಮಾಡಿರುವ ಮನೋಜ್ ಅವರೇ ಜೋಂಬಿ ಕುರಿತಾದ ಸಿನಿಮಾ ಮಾಡಲು ಹೊರಟಿದ್ದಾರೆ. 'ಆನ'ಗೆ ಕೆಲಸ ಮಾಡಿದ ತಂಡವೇ ಕನ್ನಡದ ಮೊದಲ ಜೋಂಬಿ ಸಿನಿಮಾಕ್ಕೂ ಕೆಲಸ ಮಾಡಲಿದೆ.

  ಕನ್ನಡದ ಜೋಂಬಿ ಸಿನಿಮಾವನ್ನು ಹಾಲಿವುಡ್‌ ಮಾದರಿಯಲ್ಲದೆ ಬೇರೆಯದ್ದೇ ರೀತಿ ನಿರ್ಮಿಸುವ ಆಲೋಚನೆ ಮನೋಜ್‌ಗೆ ಇದೆ. ಮಕ್ಕಳಿಗೆ, ಯುವಕರಿಗೆ ಇಷ್ಟವಾಗುವ ರೀತಿಯಲ್ಲಿ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ ಮನೋಜ್.

  'ಸಿನಿಮಾದ ಚಿತ್ರಕತೆ ತಯಾರಾಗಿದೆ. 'ಆನ'ಗೆ ಕೆಲಸ ಮಾಡಿದ್ದ ತಾಂತ್ರಿಕ ವರ್ಗವೇ ಜೋಂಬಿ ಕುರಿತಾದ ಸಿನಿಮಾಕ್ಕೂ ಕೆಲಸ ಮಾಡಲಿದೆ. ಸಿನಿಮಾದ ಚಿತ್ರೀಕರಣ ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ. ಹೊಸ ನಟ-ನಟಿಯರನ್ನು ಸಿನಿಮಾಕ್ಕೆ ಆಯ್ಕೆ ಮಾಡಲಾಗುತ್ತಿದೆ' ಎಂದಿದ್ದಾರೆ ಮನೋಜ್.

  ತೆಲುಗಿನಲ್ಲಿ ಕೆಲವು ತಿಂಗಳ ಹಿಂದೆ 'ಜೋಂಬಿ ರೆಡ್ಡಿ' ಎಂಬ ಸಿನಿಮಾ ಬಂದಿತ್ತು. ಅದನ್ನು ಹೊರತಾಗಿ ಜೋಂಬಿ ಕುರಿತಾದ ಸಿನಿಮಾಗಳು ದಕ್ಷಿಣ ಭಾರತದಲ್ಲಿ ನಿರ್ಮಾಣವಾದಂತಿಲ್ಲ.

  ಸೋಶಿಯಲ್ ಮೀಡಿಯಾದಲ್ಲಿ ತೋರಿಸಿ ಸಂಜನಾ ಗಲ್ರಾನಿ ಹೇಳಿದ್ದೇನು? | Filmibeat Kannada

  ಮನೋಜ್ ನಿರ್ದೇಶಿಸಿರುವ ಕನ್ನಡದ ಮೊದಲ ಸೂಪರ್ ವುಮನ್ ಸಿನಿಮಾ 'ಆನ'ದಲ್ಲಿ ಸೂಪರ್ ವುಮನ್ ಆಗಿ ನಟಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಸಿನಿಮಾದ ಟೀಸರ್ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿದ್ದು ಗಮನ ಸೆಳೆದಿದೆ. ಸಿನಿಮಾ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.

  English summary
  First ever Kannada zombie movie will start shooting from next month. Manoj Nadalumane is directing that movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X