For Quick Alerts
  ALLOW NOTIFICATIONS  
  For Daily Alerts

  'ಫ್ಯಾಂಟಮ್' ಪ್ರಿಯರಿಗೆ ಭರ್ಜರಿ ಸರ್ಪ್ರೈಸ್ ನೀಡಿದ ಅನೂಪ್ ಭಂಡಾರಿ

  |

  ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಫ್ಯಾಂಟಮ್ ಸಿನಿಮಾ ಭಾರಿ ಸದ್ದು ಮಾಡ್ತಿದೆ. ಅನ್‌ಲಾಕ್‌ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಶೂಟಿಂಗ್ ಮಾಡಿರುವ ಚಿತ್ರತಂಡ ಬ್ಯಾಕ್ ಟು ಬ್ಯಾಕ್ ಟೀಸರ್, ಪೋಸ್ಟರ್‌ಗಳನ್ನು ಬಿಡುಗಡೆ ಮಾಡುತ್ತಾ ಅಭಿಮಾನಿಗಳನ್ನು ಸೆಳೆಯುತ್ತಿದೆ.

  Unseen “Nightout” Behind the scene video | Filmibeat Kannada

  ಫ್ಯಾಂಟಮ್ ಚಿತ್ರದಲ್ಲಿ ಕಿಚ್ಚ ಸುದೀಪ್ ಪಾತ್ರ ಏನು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಆದರೂ, 'ಗುಮ್ಮ ಬಂದ ಗುಮ್ಮ ಗುಮ್ಮ' ಎಂದು ಹುಡುಕಾಟಕ್ಕೆ ಇಳಿದಿರುವ ಸುದೀಪ್ ಅವರನ್ನು ಗಮನಿಸಿದರೆ ಈ ಚಿತ್ರದಲ್ಲಿ ಥ್ರಿಲ್ಲಿಂಗ್ ಪಾತ್ರ ನಿಭಾಯಿಸುತ್ತಿದ್ದಾರೆ ಎನ್ನುವುದು ಪಕ್ಕಾ.

  'ಕತ್ತಲಲ್ಲಿ ಕಳ್ಳನಂತೆ ಬೇಟೆಯಾಡುವ ಬಿಲ್ಲನಂತೆ' ಬಂದ ವಿಕ್ರಾಂತ್ ರೋಣ ಕಿಚ್ಚ'ಕತ್ತಲಲ್ಲಿ ಕಳ್ಳನಂತೆ ಬೇಟೆಯಾಡುವ ಬಿಲ್ಲನಂತೆ' ಬಂದ ವಿಕ್ರಾಂತ್ ರೋಣ ಕಿಚ್ಚ

  ಈ ಕುತೂಹಲದ ನಡುವೆ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಂದು ಸುಳಿವು ನೀಡಿದ್ದಾರೆ. ಸೋಮವಾರ ಬೆಳಗ್ಗೆ ಫ್ಯಾಂಟಮ್ ಚಿತ್ರದ ಮತ್ತೊಂದು ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು, ವಿಕ್ರಾಂತ್ ರೋಣ ಯಾರು ಎಂದು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

  ಸಿಂಹಾಸನದಲ್ಲಿ 'ವಿಕ್ರಾಂತ್ ರೋಣ'

  ಸಿಂಹಾಸನದಲ್ಲಿ 'ವಿಕ್ರಾಂತ್ ರೋಣ'

  ಅನೂಪ್ ಭಂಡಾರಿ ಫ್ಯಾಂಟಮ್ ಚಿತ್ರದಲ್ಲಿ ಸುದೀಪ್ ಅವರ ಪಾತ್ರ ಹೇಗಿರಲಿದೆ ಎನ್ನುವುದಕ್ಕೆ ಒಂದು ವಿಡಿಯೋ ಮಾಡಿ, ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್ ನಲ್ಲಿ ಕಿಚ್ಚ ಸುದೀಪ್ ವಿಭಿನ್ನವಾದ ಸಿಂಹಾಸನದ ಮೇಲೆ ಸ್ಟೈಲ್ ಆಗಿ ಕುಳಿತುಕೊಂಡಿದ್ದು, ಕೈಯಲ್ಲಿ ಗನ್ ಎಕ್ಸ್ಟ್ರಾ ಪವರ್ ನೀಡಿದೆ. ಕಿಚ್ಚನ ಖಡಕ್ ಲುಕ್ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ.

  ಯಾರಿಗೂ ಅರ್ಥವಾಗದ 'ರೋಣ'

  ''ಫ್ಯಾಂಟಮ್ ಚಿತ್ರದ ಮುಖ್ಯ ಪಾತ್ರಧಾರಿ ವಿಕ್ರಾಂತ್ ರೋಣ. ಈ ಹೆಸರಿನಲ್ಲಿ ಎಷ್ಟು ಪವರ್ ಇದೆಯೋ ಆ ಪಾತ್ರವೂ ಅಷ್ಟೇ ಪವರ್ ಫುಲ್ ಆಗಿದೆ. ವಿಕ್ರಾಂತ್ ರೋಣ ಏನು ಮಾಡ್ತಾನೆ, ಹೇಗೆ ಮಾಡ್ತಾನೆ, ಯಾಕೆ ಮಾಡ್ತಾನೆ ಇದು ಯಾರಿಗೂ ಅರ್ಥವಾಗಲ್ಲ. ಆದರೆ, ಅವನು ಏನೇ ಮಾಡಿದ್ರೂ ಅದಕ್ಕೆ ಕಾರಣ ಇರುತ್ತೆ'' ಎಂದು ಹೀರೋ ಪಾತ್ರದ ಬಗ್ಗೆ ಅನೂಪ್ ಭಂಡಾರಿ ವಿವರಣೆ ನೀಡಿದ್ದಾರೆ.

  ಶೂಟಿಂಗ್‌ಗೆ ಹೋದ ಸುದೀಪ್‌ಗೆ ಎದುರಾಗಿ ಬಂದ ಗುಮ್ಮ ಗುಮ್ಮ...!ಶೂಟಿಂಗ್‌ಗೆ ಹೋದ ಸುದೀಪ್‌ಗೆ ಎದುರಾಗಿ ಬಂದ ಗುಮ್ಮ ಗುಮ್ಮ...!

  ಫ್ಯಾಂಟಮ್ ಪಾತ್ರಗಳು ಬರಲಿದೆ

  ಫ್ಯಾಂಟಮ್ ಪಾತ್ರಗಳು ಬರಲಿದೆ

  ಮೊದಲನೇಯದಾಗಿ ಚಿತ್ರದ ನಾಯಕ ವಿಕ್ರಾಂತ್ ರೋಣ ಅವರ ಪಾತ್ರದ ಲುಕ್ ಬಿಡುಗಡೆಯಾಗಿದೆ. ಸುದೀಪ್ ಅವರಂತೆ ಉಳಿದ ಪ್ರಮುಖ ಪಾತ್ರಗಳು ಸಹ ಒಂದೊಂದೆ ಅನಾವರಣವಾಗಲಿದೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಈಗಾಗಲೇ ಮಾಹಿತಿ ನೀಡಿದ್ದಾರೆ.

  ಹೈದರಾಬಾದ್‌ನಲ್ಲಿ ಕಿಚ್ಚ ಅಂಡ್ ಟೀಂ

  ಹೈದರಾಬಾದ್‌ನಲ್ಲಿ ಕಿಚ್ಚ ಅಂಡ್ ಟೀಂ

  ಲಾಕ್‌ಡೌನ್‌ ಕಾರಣದಿಂದ ಸುದೀರ್ಘವಾಗಿ ಎಲ್ಲ ಇಂಡಸ್ಟ್ರಿಗಳು ಶೂಟಿಂಗ್ ನಿಲ್ಲಿಸಿದ್ದವು. ಇದೀಗ, ಇಂಡೋರ್ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ್ದು, ಒಂದೊಂದು ಸಿನಿಮಾಗಳು ಆಕ್ಷನ್ ಗೆ ಮರಳಿದೆ. ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾ ತಂಡ ಹೈದರಾಬಾದ್‌ನಲ್ಲಿ ಭರ್ಜರಿ ಸೆಟ್‌ ನಿರ್ಮಿಸಿದ್ದು, ಈಗಾಗಲೇ ಚಿತ್ರೀಕರಣ ಸಹ ಮಾಡ್ತಿದೆ.

  English summary
  Phantom movie director Anup Bhandari Reveals introduction poster of Vikranth Rona character. kiccha sudeep playing Vikranth Rona role in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X