twitter
    For Quick Alerts
    ALLOW NOTIFICATIONS  
    For Daily Alerts

    ಒಂದು ಸಿನಿಮಾಗಾಗಿ ಒಂದಾಗುತ್ತಿರುವ ಕನ್ನಡದ ಐದು ನಿರ್ದೇಶಕರು

    |

    ಕನ್ನಡ ಸಿನಿಮಾರಂಗದಲ್ಲಿ ಒಂದು ವಿಭಿನ್ನ ಪ್ರಯತ್ನ ಮಾಡಲು ಮುಂದಾಗಿದ್ದಾರೆ ಐದು ಖ್ಯಾತ ನಿರ್ದೇಶಕರು. ಹೌದು, ಚಂದನವನದ ಐವರು ನಿರ್ದೇಶಕರು ಒಂದೇ ಸಿನಿಮಾಗಾಗಿ ಕೆಲಸ ಮಾಡುತ್ತಿರುವುದು ವಿಶೇಷ. ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಇಂಥ ಹೊಸ ಪ್ರಯತ್ನ ನಡೆಯುತ್ತಿದ್ದು ಚಿತ್ರಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

    ಅಂದ್ಹಾಗೆ ಒಂದು ಸಿನಿಮಾಗಾಗಿ ಒಟ್ಟಿಗೆ ಸೇರಿರುವ ಪ್ರಸಿದ್ಧ 5 ಜನ ನಿರ್ದೇಶಕರು ಜಯತೀರ್ಥ, ಯೋಗರಾಜ್ ಭಟ್, ಕೆ.ಎಂ ಚೈತನ್ಯ, ಶಶಾಂಕ್ ಮತ್ತು ಪವನ್ ಕುಮಾರ್. ಈ ಎಲ್ಲಾ ನಿರ್ದೇಶಕರು ಒಂದು ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಪಕ್ಕಾ ಕಮರ್ಶಿಯಲ್ ಚಿತ್ರಕ್ಕಾಗಿ ಎನ್ನುವುದು ವಿಶೇಷ.

    ಭಟ್ಟರ ನಿರ್ದೇಶನದಲ್ಲಿ ಶಿವರಾಜ್ ಕುಮಾರ್-ಪ್ರಭುದೇವಾ: ಏನು ನಿರೀಕ್ಷಿಸಬಹುದು?ಭಟ್ಟರ ನಿರ್ದೇಶನದಲ್ಲಿ ಶಿವರಾಜ್ ಕುಮಾರ್-ಪ್ರಭುದೇವಾ: ಏನು ನಿರೀಕ್ಷಿಸಬಹುದು?

    5 ಜನ ನಿರ್ದೇಶಕರು ಅಂದ್ಮೇಲೆ ಹಲವು ಕಿರುಕಥೆಗಳನ್ನು ಸೇರಿಸಿ ಒಂದು ಸಿನಿಮಾ ಮಾಡುತ್ತಾರೆ ಅಂತ ಅಂದ್ಕೋಬೇಡಿ. ಇಲ್ಲಿ ಬೇರೆ ಬೇರೆ ಕಥೆಗಳಿದ್ದರೂ ಒಂದೊಂದು ಲಿಂಕ್ ಇರುತ್ತೆ ಎಂದು ಹೇಳಲಾಗುತ್ತಿದೆ. ಲಾಕ್ ಡೌನ್ ನಲ್ಲಿ ಈ ಬಗ್ಗೆ ಮಾತುಕತೆ ಮಾಡಿರುವ ನಿರ್ದೇಶಕರು ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸವನ್ನು ಪ್ರಾರಂಭಿಸಿದ್ದಾರೆ.

    Five Famous Kannada Directors Come Together For A One Movie

    ಮೂಲಗಳ ಪ್ರಕಾರ ಸದ್ಯದಲ್ಲೇ ಚಿತ್ರೀಕರಣ ಸಹ ಪ್ರಾರಂಭ ಮಾಡಲು ನಿರ್ಧರಿಸಿದ್ದಾರಂತೆ. ಡಿಸೆಂಬರ್ ಅಂತ್ಯದ ವೇಳೆಗೆ ಸಿನಿಮಾ ಚಿತ್ರೀಕರಣ ಮುಗಿಸಲು ಚಿತ್ರತಂಡ ಪ್ಲಾನ್ ಮಾಡಿದೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಅಧಿಕೃತ ಘೋಷಣೆಯಾದ ಬಳಿಕ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

    Recommended Video

    ಅಮ್ಮನಿಗೋಸ್ಕರ ಶಿವಲಿಂಗದ ಆಣೆ ಮಾಡಿದ ಜಗ್ಗೇಶ್ | Jaggesh | Filmibeat Kannada

    ಈಗಾಗಲೇ ಕನ್ನಡದಲ್ಲಿ ರಿಷಬ್ ಶೆಟ್ಟಿ ನೇತೃತ್ವದಲ್ಲಿ 7 ಜನ ನಿರ್ದೇಶಕರ ಸಿನಿಮಾವನ್ನು ತಯಾರಿಸಲಾಗಿತ್ತು. ಆದರೆ ಆ ಸಿನಿಮಾದಲ್ಲಿ ಕಿರು ಕಥೆಗಳನ್ನು ಸೇರಿಸಿ ಸಿನಿಮಾ ಮಾಡಲಾಗಿದೆ. ಆದರೆ ಈ ಸಿನಿಮಾ ಹಾಗಿರಲ್ಲ ಎಂದು ಹೇಳಲಾಗುತ್ತಿದೆ.

    English summary
    Five Famous Kannada directors come together for a One commercial entertainer.
    Tuesday, November 3, 2020, 11:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X