For Quick Alerts
  ALLOW NOTIFICATIONS  
  For Daily Alerts

  ಇಂದಿನ ಪೀಳಿಗೆ ತಿಳಿಯಬೇಕಿದೆ ಶಿಸ್ತಿನ ಸಿಪಾಯಿ 'ಚಾಮಯ್ಯ ಮೇಷ್ಟ್ರ' ಕಥೆ

  By Bharath Kumar
  |
  ನಾಗರಹಾವು ಚಾಮಯ್ಯ ಮೇಷ್ಟ್ರು ಬಗ್ಗೆ ನಿಮಗೆಷ್ಟು ಗೊತ್ತು..!? | Filmibeat Kannada

  ಗುರು-ಶಿಷ್ಯರು ಅಂದ್ರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಮೊದಲ ನೆನಪಾಗೋದೆ ಚಾಮಯ್ಯ ಮೇಷ್ಟ್ರು ಮತ್ತು ರಾಮಾಚಾರಿ. ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ನಾಗರಹಾವು' ಚಿತ್ರದ ಚಾಮಯ್ಯ ಮೇಷ್ಟ್ರ ಪಾತ್ರ ಕೆ.ಎಸ್ ಅಶ್ವಥ್ ಅವರನ್ನು ಜನಮಾನಸದಲ್ಲಿ ಸದಾಕಾಲ ಇರುವಂತೆ ಮಾಡಿತು.

  ಮಕ್ಕಳಿಲ್ಲದ ಚಾಮಯ್ಯ ಮೇಷ್ಟ್ರುಗೆ ರಾಮಾಚಾರಿ ಅಂದ್ರೆ ಮಗನಿಗಿಂತ ಹೆಚ್ಚು. ರಾಮಾಚಾರಿಯೂ ಅಷ್ಟೇ ಚಾಮಯ್ಯ ಮೇಷ್ಟ್ರು ಹಾಕಿದ ಗೆರೆಯನ್ನ ದಾಟುವುದಿಲ್ಲ. ಅತಿಯಾಗಿ ಪ್ರೀತಿಸುವ ವಿದ್ಯಾರ್ಥಿ, ತಂದೆಗಿಂತ ಹೆಚ್ಚು ಆರಾಧಿಸುವ ಮೇಷ್ಟ್ರು, ಇಬ್ಬರ ನಡುವಣ ಮಾನವೀಯ ಸಂಬಂಧಗಳು, ಅಕ್ಕರೆ, ಕಾಳಜಿ, ದುರಂತದಲ್ಲಿ ಅಂತ್ಯವಾಗುವುದು ನಾಗರಹಾವು ಚಿತ್ರದಲ್ಲಿ ಪ್ರತಿಯೊಬ್ಬರ ಪ್ರೇಕ್ಷಕರ ಮನಸ್ಸಿನಲ್ಲೂ ಅಚ್ಚಳಿಯದಾಗೆ ಕುಳಿತುಬಿಟ್ಟಿತು.

  ಬೆಳ್ಳಿಪರದೆಯ ಚಾಮಯ್ಯ ಮೇಷ್ಟ್ರು ಕೆ ಎಸ್ ಅಶ್ವತ್ಥ್

  ಈ ಸಿನಿಮಾದ ನಂತರ ಕೆ.ಎಸ್ ಅಶ್ವಥ್ ಅವರು ಸಿನಿಮಾರಂಗಕ್ಕೆ ನಿಜವಾದ ಮೇಷ್ಟ್ರು ಎನಿಸಿಕೊಂಡರು. ಯಾಕಂದ್ರೆ, ನಿಜ ಜೀವನದಲ್ಲೂ ಅವರು ಬಾಳಿದ್ದು ಅದೇ ರೀತಿ. ಶಿಸ್ತು, ಸಮಯ ಪ್ರಜ್ಞೆಗೆ ಇನ್ನೊಂದು ಹೆಸರೇ ಅಶ್ವಥ್. ಇಂತಹ ಮೇಷ್ಟ್ರ ಬಗ್ಗೆ ಇಂದಿನ ಪೀಳಿಗೆಯರವರಿಗೆ ತಿಳಿಯಬೇಕಾಗಿರುವುದು ಹೆಚ್ಚಿದೆ. ಮುಂದೆ ಓದಿ.....

  ನಾಯಕನಾಗಿ ಪರಿಚಯ

  ನಾಯಕನಾಗಿ ಪರಿಚಯ

  ಕನ್ನಡ ಚಿತ್ರರಂಗದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾಗಿರುವ ಕೆ.ಎಸ್ ಅಶ್ವಥ್ (ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್) ಅವರು ಮೈಸೂರಿನವರು. 1955ರಲ್ಲಿ 'ಸ್ತ್ರೀ ರತ್ನ' ಚಿತ್ರದ ನಾಯಕನಾಗಿ ಚಿತ್ರರಂಗಕ್ಕೆ ಬಂದ ಇವರು ಸುಮಾರು 5 ದಶಕಗಳ ಕಾಲ ಬಣ್ಣದ ಜಗತ್ತಿನಲ್ಲಿ ದುಡಿದಿದ್ದಾರೆ. ಸುಮಾರು 350ಕ್ಕಿಂತಲೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಚಾಮಯ್ಯ ಮೇಷ್ಟ್ರು ಗುಂಡು ಹಾಕುತ್ತಿರಲಿಲ್ಲವೇ?

  ಅಚಾನಕ್ ಆಗಿ ಬಂದಿದ್ದು ಇಲ್ಲಿಗೆ

  ಅಚಾನಕ್ ಆಗಿ ಬಂದಿದ್ದು ಇಲ್ಲಿಗೆ

  ಅಂದು ಆಹಾರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವಥ್ ಅವರಿಗೆ ನಾಟಕದ ಗೀಳು ಹೆಚ್ಚಾಗಿತ್ತು. ಆಕಾಶವಾಣಿಯಲ್ಲಿ ನಾಟಕ ವಿಭಾಗದಲ್ಲಿ ಕೆಲಸ ಕೂಡ ಮಾಡಿದ್ದಾರೆ. ಅಶ್ವತ್ಥ್ ಅವರಿಗೆ ಚಲನಚಿತ್ರ ಸೇರಬೇಕೆಂಬ ಉದ್ದೇಶವಿರಲಿಲ್ಲ. ಆದ್ರೆ, ನಾಟಕದಲ್ಲಿನ ಇವರ ಅಭಿನಯ ನೋಡಿ ಮೆಚ್ಚಿದ ಹಿರಿಯ ನಿರ್ದೇಶಕ ಕೆ.ಸುಬ್ರಹ್ಮಣ್ಯಂ ಅವರಿಂದ ಚಿತ್ರರಂಗಕ್ಕೆ ಕರೆತಂದರು. ‘ಸ್ತ್ರೀ ರತ್ನ' ಚಿತ್ರದ ಮೂಲಕ ನಾಯಕನಾಗಿ ಪರಿಚಯಿಸಿದರು. ನಂತರ ಚಿತ್ರರಂಗವೇ ಅವರನ್ನ ಅಪ್ಪಿಕೊಂಡಿತು.

  ಕರ್ಮಯೋಗಿ ಡಾ.ಕೆ.ಎಸ್.ಅಶ್ಚತ್ಥ್ ಸಾಕ್ಷ್ಯಚಿತ್ರ

  ನಾರದನ ಪಾತ್ರಕ್ಕೆ ಹೆಚ್ಚು ಖ್ಯಾತಿ

  ನಾರದನ ಪಾತ್ರಕ್ಕೆ ಹೆಚ್ಚು ಖ್ಯಾತಿ

  ನಾಯಕನಟನಾಗಿ ಬಂದರೂ ಪೋಷಕ ಪಾತ್ರಗಳು ಹೆಚ್ಚು ಬರ್ತಿತ್ತು. ಇನ್ನು ಆಗಿನ ಕಾಲಕ್ಕೆ ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳು ಹೆಚ್ಚಾಗಿದ್ದ ಕಾರಣ ಅವುಗಳಲ್ಲಿ ನಾರದನ ಪಾತ್ರಗಳಿಗೆ ಅಶ್ವಥ್ ಅವರ ಸೂಕ್ತ ಆಯ್ಕೆಯಾಗಿದ್ದರು. ‘ಮಹಿಷಾಸುರ ಮರ್ದಿನಿ', ‘ಸ್ವರ್ಣಗೌರಿ', ‘ಭಕ್ತ ಪ್ರಹ್ಲಾದ', ‘ದಶಾವತಾರ', ‘ನಾಗಾರ್ಜುನ' ಚಿತ್ರಗಳಲ್ಲಿ ಅಶ್ವತ್ಥ್ ಅವರು ಮಾಡಿದ್ದ ನಾರದನ ಪಾತ್ರ ಜನಮೆಚ್ಚುಗೆ ಪಡೆಯಿತು.

  ಕೆ.ಎಸ್.ಅಶ್ವಥ್ ಪುತ್ರನ ಕಣ್ಣೀರು ಒರೆಸಲು ಮುಂದಾದ ಕನ್ನಡ ಚಿತ್ರರಂಗ

  ವೈವಿಧ್ಯಮಯ ನಟನೆಯಲ್ಲಿ ಇವರನ್ನ ಮೀರಿಸಿದವರಿಲ್ಲ

  ವೈವಿಧ್ಯಮಯ ನಟನೆಯಲ್ಲಿ ಇವರನ್ನ ಮೀರಿಸಿದವರಿಲ್ಲ

  ಅಶ್ವತ್ಥ್ ಅವರು ಎಲ್ಲಾ ರೀತಿಯ ವೈವಿಧ್ಯಮಯ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಂದೆಯಾಗಿ, ಸಹೋದರನಾಗಿ, ಪತಿಯಾಗಿ, ತಾತನಾಗಿ, ನಾರದನಾಗಿ, ಹಳ್ಳಿಗನಾಗಿ, ಪಟ್ಟಣಿಗನಾಗಿ, ಗುರುವಾಗಿ, ಅಧಿಕಾರಿಯಾಗಿ, ಸೇವಕನಾಗಿ, ಋಷಿಯಾಗಿ ಹೀಗೆ ವಿಭಿನ್ನ ನೆಲೆಗಳಲ್ಲಿ ಅವರು ತಮ್ಮ ಪಾತ್ರಗಳಿಗೆ ನೀಡಿದ ಬೆಲೆ ಅಸದೃಶವಾದದ್ದು.

  ಕಂಠೀರವ ಸ್ಟುಡಿಯೋ ಉದ್ಯಾನಕ್ಕೆ ಅಶ್ವತ್ಥ್ ಹೆಸರು

  ಸಕಲ ಪಾತ್ರಕ್ಕೂ ಜೀವ ತುಂಬಿದ್ದ ನಟ

  ಸಕಲ ಪಾತ್ರಕ್ಕೂ ಜೀವ ತುಂಬಿದ್ದ ನಟ

  ‘ಕಸ್ತೂರಿ ನಿವಾಸ'ದ ನಿಷ್ಠಾವಂತ ಸೇವಕ ರಾಮಯ್ಯ, ‘ಮಗ ಮೊಮ್ಮಗ', ‘ತಂದೆ-ಮಕ್ಕಳು' ಚಿತ್ರದಲ್ಲಿ ತಂದೆಯಾಗಿ ನೀಡಿರುವ ಮನ ಮುಟ್ಟುವ ಅಭಿನಯ. ‘ಸರ್ವಮಂಗಳ' ಚಿತ್ರದಲ್ಲಿ ಕುರೂಪಿ ಸುಬ್ಬರಾಯನ ಪಾತ್ರ, ಅಶ್ವತ್ಥ್ ಅವರ ಅಪ್ರತಿಮ ಪ್ರತಿಭೆಯ, ಭಾವಪೂರ್ಣ ಅಭಿನಯಕ್ಕೆ ಇವು ಕೆಲವು ನಿದರ್ಶನಗಳು. ಕುಟುಂಬದ ಯಜಮಾನ, ಒಲವಿನ ಸೋದರ, ತಂದೆ ಮೊದಲಾದ ಸಜ್ಜನಿಕೆಯ ಪಾತ್ರಗಳ ಜೊತೆಗೆ ಹಾಸ್ಯ ಪಾತ್ರಗಳಲ್ಲೂ ಖಳನಾಯಕನ ಪಾತ್ರಗಳಲ್ಲೂ ಅವರು ಸಹಜವಾಗಿ ಅಭಿನಯಿಸಿದ್ದಾರೆ.

  ಮತ್ತೆ ಮತ್ತೆ ಕಾಡುವ ಚಾಮಯ್ಯ ಮೇಷ್ಟ್ರು

  ಮತ್ತೆ ಮತ್ತೆ ಕಾಡುವ ಚಾಮಯ್ಯ ಮೇಷ್ಟ್ರು

  ಇಷ್ಟೆಲ್ಲಾ ವೈವಿಧ್ಯಮಯ ನಟನೆ ಮೂಲಕ ಅಜರಾಮರವಾಗಿರುವ ಅಶ್ವಥ್ ಅವರು, ಇಂದಿನ ಪೀಳಿಗೆ ಹೆಚ್ಚು ಪ್ರಚಲಿತವಾಗಿರುವುದು ಚಾಮಯ್ಯ ಮೇಷ್ಟ್ರು ಪಾತ್ರದ ಮೂಲಕವೇ. ಈ ಸಿನಿಮಾದ ನಂತರ ವಿಷ್ಣುವರ್ಧನ್ ಮತ್ತು ಅಶ್ವಥ್ ಅವರ ಮಧ್ಯೆ ಅದೇ ರೀತಿಯ ಸಂಬಂಧ ಕೂಡ ಹುಟ್ಟಿಕೊಂಡಿತು. ವಿಷ್ಣು ಅವರ ಅನೇಕ ಸಿನಿಮಾಗಳಲ್ಲಿ ತಂದೆಯಾಗಿ, ಗುರುವಾಗಿ, ಅಭಿನಯಿಸಿದ್ದಾರೆ. ನಿಜ ಜೀವನದಲ್ಲಿ ಹಾಗೆ ಇದ್ದರು ಎಂಬುದು ಅವರ ಆಪ್ತರು ಹೇಳಿಕೊಂಡಿದ್ದಾರೆ. ವಿಪರ್ಯಾಸ ಅಂದ್ರೆ, ಇಂದು ನಮ್ಮೊಂದಿಗೆ ಗುರು-ಶಿಷ್ಯರು ಇಬ್ಬರು ಇಲ್ಲ. ಆದ್ರೆ, ಅವರಿಬ್ಬರ ಬಾಂಧವ್ಯ ಮಾತ್ರ ಇಂದಿಗೂ ಕಾಡುತ್ತೆ.

  English summary
  teachers day special: ks ashwath's character role in Naagarahaavu as Chamayya meshtru (Chamayya Teacher) is still remembered and emulated.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X