»   » ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥದಲ್ಲಿ 30ಕ್ಕೂ ಹೆಚ್ಚು ಬಗೆಯ ಖಾದ್ಯಗಳು, ಪಟ್ಟಿ ಇಲ್ಲಿದೆ

ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥದಲ್ಲಿ 30ಕ್ಕೂ ಹೆಚ್ಚು ಬಗೆಯ ಖಾದ್ಯಗಳು, ಪಟ್ಟಿ ಇಲ್ಲಿದೆ

Posted By:
Subscribe to Filmibeat Kannada

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದ್ದು, ಇಂದು ಸಂಜೆ 6.30ಕ್ಕೆ ವಿರಾಜಪೇಟೆಯ ಸರಿನಿಟಿ ಹಾಲ್ ನಲ್ಲಿ 'ಕಿರಿಕ್ ಜೋಡಿ' ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ.

ಈ ವಿಶೇಷ ಸಂದರ್ಭಕ್ಕೆ ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದವರು ಸಾಕ್ಷಿಯಾಗಲಿದ್ದಾರೆ. ಇದೆಲ್ಲಾ ಒಂದೆಡೆಯಾದರೇ, ಮತ್ತೊಂದೆಡೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಾಗಿ ಬಗೆ ಬಗೆಯ ಭಕ್ಷ್ಯ ಭೋಜನಗಳನ್ನ ಸಿದ್ದಮಾಡಲಾಗಿದೆ.

ಕೊಡಗಿನ ಶೈಲಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಜೊತೆ ಚೈನೀಸ್, ಫಾರೀನ್ ಐಟಂಗಳು ಕೂಡ ತಯಾರು ಮಾಡಲಾಗಿದೆ. ಹಾಗಿದ್ರೆ, ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥದಲ್ಲಿ ಯಾವೆಲ್ಲಾ ಖಾದ್ಯಗಳು ಘಮಘಮಿಸಲಿವೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯ

ಕೊಡಗಿನ ಹೆಸರಾಂತ ಬಾಣಸಿಗ ರಾಮ್ ದಾಸ್ ನೇತೃತ್ವದಲ್ಲಿ ಖಾದ್ಯಗಳು ಸಿದ್ಧಗೊಳ್ಳುತ್ತಿದ್ದು, 50 ಜನರ ದೊಡ್ಡ ತಂಡ ಅಡುಗೆ ಸಿದ್ಧ ಮಾಡಿದೆ. ಸಸ್ಯಹಾರಿ, ಮಾಂಸಹಾರಿ ಮಿಶ್ರಣದ ಜೊತೆ, ಕೊಡಗಿನ ಸ್ಟೈಲ್, ಫಾರಿನ್ ಸ್ಟೈಲ್ ಎರಡೂ ರೀತಿಯ ಅಡುಗೆ ತಯಾರಾಗಿದೆ.

ಜುಲೈ 3, ಇಂದು ರಕ್ಷಿತ್-ರಶ್ಮಿಕಾ ಎಂಗೇಜ್ ಮೆಂಟ್ ಕಣ್ರಪ್ಪೋ

ಪಾರ್ಟಿಯ ಖಾದ್ಯಗಳು

ಎಂಗೇಜ್ ಮೆಂಟ್ ಪಾರ್ಟಿಯ ವಿಶೇಷವಾಗಿ, ಚಿಕನ್ ಲಾಲಿಪಪ್, ಪೋರ್ಕ್ ಡ್ರೈ, ಚಿಕನ್ ಡ್ರೈ, ಫಿಂಗರ್ ಚಿಪ್ಸ್, ಚಿಲ್ಲಿ ಮಟನ್, ಟೀತರ್ ಫ್ರೈ, ಕ್ಯಾಸಿವ್ ಮಸಾಲಾ, ಸಿಪಿ ಸಾಲಾಡ್, ಮ್ಯಾಂಗೋ ಮಸಾಲಾ ಸಿದ್ಧಗೊಂಡಿದೆ.

ಭಾವಿ ಸೊಸೆಗೆ ರಕ್ಷಿತ್ ಶೆಟ್ಟಿ ತಾಯಿಯ ಸ್ಪೆಷಲ್ ಉಡುಗೊರೆ ಏನು?

ಕೊಡಗಿನ ಶೈಲಿಯ ಊಟ

ಇನ್ನು ಡಿನ್ನರ್ ಪಾರ್ಟಿಗೆ ಕೊಡಗು ಶೈಲಿಯ ನೂಪುಟ್ಟು ಕೋಳಿ ಕರಿ, ಕಡಂಬುಟ್ಟು ಪೋರ್ಕ್ ಕರಿ, ಮಟನ್ ಬಿರಿಯಾನಿ, ಆನಿಯನ್ ರೈತಾ, ವೈಟ್ ರೈಸ್, ರಸಂ, ಪೆಪ್ಪರ್ ಚಿಕನ್ ಮಸಾಲಾ, ಫೋರ್ಕ್ ಚಾಪ್ಸ್, ಫೋರ್ಕ್ ಡ್ರೈ, ಮಟನ್ ಮಸಾಲಾ, ಮಟನ್ ಚಾಪ್ಸ್ ಸಿದ್ದವಾಗಿದೆ.

'ರಕ್ಷಿತ್-ರಶ್ಮಿಕಾ' ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ನೋಡಿ

ಚೈನೀಸ್ ಐಟಂ

ಇವುಗಳ ಜೊತೆ ಚೈನೀಸ್ ಐಟಂಗಳಾದ ವೆಜ್ ಫ್ರೈಡ್ ರೈಸ್, ಚಿಕನ್ ಫ್ರೈಡ್ ರೈಸ್, ನ್ಯೂಡಲ್ಸ್, ಚಿಕನ್ ನ್ಯೂಡಲ್, ಸ್ವೀಟ್ & ಸಾಲ್ಟ್ ಚಿಕನ್, ಬಟರ್ ನಾನ್, ಬಟರ್ ವ್ಯವಸ್ಥೆ ಕುಲ್ಚಾ, ಕಡಾಯ್ ಚಿಕನ್, ಪಾಲಾಕ್ ಪನ್ನೀರ್, ಕಡಾಯ್ ವೆಜ್, ದಾಲ್ ಕರಿ ಕೂಡ ತಯಾರಾಗುತ್ತಿದೆ.

'ಹೃದಯದ ಒಡತಿ' ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಕೊಟ್ಟ 'ಒಲವಿನ ಉಡುಗೊರೆ' ಏನು.?

English summary
Kannada Actor Rakshit Shetty and Actress Rashmika Mandanna Engagement Held on July 3rd at Virajapete. Check out the Food Menu here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada