For Quick Alerts
  ALLOW NOTIFICATIONS  
  For Daily Alerts

  ಗಣರಾಜ್ಯೋತ್ಸವ ಮರೆಯಿರಿ 'ಕ್ರಾಂತಿ' ಅಷ್ಟೇ ಎಂದ ರಚಿತಾ; ಪಾಕಿಸ್ತಾನಕ್ಕೆ ಹೋಗೆಂದು ಕಿಡಿಕಾರಿದ ನೆಟ್ಟಿಗರು!

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಟಾರ್ ನಟ ಹಾಗೂ ನಟಿಯರೆಂದರೆ ಅವರನ್ನು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಫಾಲೋ ಮಾಡುವುದು ಕಾಮನ್. ಕೇವಲ ತೆರೆ ಮೇಲಿನ ತಮ್ಮ ನಟನೆ, ಸೌಂದರ್ಯವನ್ನು ಮೆಚ್ಚಿಕೊಂಡು ಇಷ್ಟಪಡುವ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಹಾಗೂ ನಟಿ ಬರೀ ತೆರೆ ಮೇಲೆ ಮಾತ್ರವಲ್ಲದೇ ತೆರೆ ಹಿಂದೆಯೂ ಸಹ ಒಳ್ಳೆತನ ಹೊಂದಿರಬೇಕು, ಒಳ್ಳೆಯ ಮಾತುಗಳನ್ನಾಡಿ ತಮ್ಮ ಅಭಿಮಾನಿಗಳಿಗೆ ಸ್ಪೂರ್ತಿಯಾಗಿರಬೇಕು ಎಂದು ನಿರೀಕ್ಷೆ ಇಟ್ಟುಕೊಳ್ಳುವವರೇ ಹೆಚ್ಚು.

  ಇನ್ನು ನಟ - ನಟಿಯರೂ ಸಹ ಇದನ್ನು ಪಾಲಿಸುತ್ತಾ ಬರುತ್ತಾರೆ. ತಮ್ಮ ಅಭಿಮಾನಿಗಳಿಗೆ ತಮ್ಮ ಮೇಲೆ ಬೇಸರ ಹುಟ್ಟದ ಹಾಗೆ ನಡೆದುಕೊಳ್ತಾರೆ. ಆದರೆ ಕೆಲವೊಮ್ಮೆ ಅವರು ಕೊಡುವ ತಲೆಕೆಟ್ಟ ಹೇಳಿಕೆಗಳು ಅಭಿಮಾನಿಗಳನ್ನು ಮಾತ್ರವಲ್ಲದೇ ಸಾಮಾನ್ಯ ಜನರೂ ಸಹ ಕಿಡಿಕಾರುವಂತಿರುತ್ತವೆ. ಹೌದು, ಸ್ಟಾರ್‌ಗಳು ದೇಶ ಹಾಗೂ ನಾಡಿನ ವಿರುದ್ಧವಾಗಿ ತಮಗೆ ಅರಿತೋ ಅಥವಾ ಅರಿವಿಲ್ಲದೆಯೋ ನೀಡುವ ಹೇಳಿಕೆಗಳು ಇಂದು ಎಷ್ಟೋ ಜನರ ಕೆರಿಯರ್ ಅನ್ನೇ ಮುಗಿಸಿಬಿಟ್ಟಿವೆ.

  ಹೆಚ್ಚಾಗಿ ಬಾಲಿವುಡ್‌ಗಳಲ್ಲಿ ಕೇಳಿಬರುತ್ತಿದ್ದ ಈ ರೀತಿಯ ವಿವಾದ ಈಗ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದೆ. ಹೌದು, ಕ್ರಾಂತಿ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಚಿತ್ರದ ಕುರಿತು ಮಾತನಾಡುತ್ತಿದ್ದ ನಟಿ ರಚಿತಾ ರಾಮ್ ಸಿನಿಮಾವನ್ನು ನೋಡಿ ಎಂದು ಪ್ರಚಾರ ಮಾಡುವ ಭರದಲ್ಲಿ ಗಣರಾಜ್ಯೋತ್ಸವವನ್ನು ಮರೆಯಿರಿ ಎಂದು ಹೇಳಿಕೆ ನೀಡಿ ಇದೀಗ ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  ರಚಿತಾ ಹೇಳಿದ್ದೇನು?

  ರಚಿತಾ ಹೇಳಿದ್ದೇನು?

  ದರ್ಶನ್ ಹಾಗೂ ರಚಿತಾ ರಾಮ್ ನಟನೆಯ ಕ್ರಾಂತಿ ಚಿತ್ರ ಇದೇ ಗಣರಾಜ್ಯೋತ್ಸವದ ದಿನದಂದು ಬಿಡುಗಡೆಯಾಗುತ್ತಿದೆ. ಈ ದಿನ ಬಿಡುಗಡೆಯಾಗುತ್ತಿರುವ ಕಾರಣ ಚಿತ್ರದ ಬಿಡುಗಡೆ ಕುರಿತು ಮಾತನಾಡಿದ ರಚಿತಾ " ಇಷ್ಟು ವರ್ಷ ಜನವರಿ 26 ಅಂತಂದ್ರೆ ರಿಪಬ್ಲಿಕ್ ಡೇ. ಆದರೆ ಈ ವರ್ಷ ಗಣರಾಜ್ಯೋತ್ಸವ ಅನ್ನೋದನ್ನು ಮರೆತು ಬರೀ ಕ್ರಾಂತಿ ಉತ್ಸವ ಅಷ್ಟೇ" ಎಂದು ಹೇಳಿಕೆ ನೀಡಿದರು.

  ದೇಶಕ್ಕಿಂತ ಚಿತ್ರ ದೊಡ್ಡದಲ್ಲ, ಅನಕ್ಷರಸ್ಥೆ ಥರ ಆಡಬೇಡಿ

  ದೇಶಕ್ಕಿಂತ ಚಿತ್ರ ದೊಡ್ಡದಲ್ಲ, ಅನಕ್ಷರಸ್ಥೆ ಥರ ಆಡಬೇಡಿ

  ಹೀಗೆ ರಚಿತಾ ನೀಡಿರುವ ಈ ವಿವಾದಾತ್ಮಕ ಹೇಳಿಕೆ ವೈರಲ್ ಆಗುತ್ತಿದ್ದಂತೆ ಟ್ವಿಟರ್‌ನಲ್ಲಿ ನೆಟ್ಟಿಗರು ದೊಡ್ಡ ಮಟ್ಟದಲ್ಲಿ ಕಿಡಿಕಾರಿದ್ದಾರೆ. ನಿಮ್ಮ ಸಿನಿಮಾ ಬರುತ್ತಿದೆ ಎಂಬ ಕಾರಣಕ್ಕೆ ಗಣರಾಜ್ಯೋತ್ಸವ ಮರಿಬೇಕಾ, ಗಣರಾಜ್ಯೋತ್ಸವಕ್ಕಿಂತ ನಿಮ್ಮ ಚಿತ್ರ ದೊಡ್ಡದಾ, ಅನಕ್ಷರಸ್ಥೆ ಥರ ಮಾತನಾಡಬೇಡಿ ಮೊದಲು ದೇಶ ನಂತರ ಸಿನಿಮಾ ಅಷ್ಟೇ ಎಂದು ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  ಅಂದ ಇದ್ರೆ ಆಗಲ್ಲ, ಬುದ್ಧಿನೂ ಇರಲಿ

  ಅಂದ ಇದ್ರೆ ಆಗಲ್ಲ, ಬುದ್ಧಿನೂ ಇರಲಿ

  ಇನ್ನೂ ಕೆಲವರು ಕೇವಲ ಅಂದ ಚಂದ ಇದ್ರೆ ನಟಿಯಾಗಿಬಿಡಲ್ಲ ಸ್ವಲ್ಪ ಬುದ್ಧಿನೂ ಇರಲಿ, ಜನರಿಗೆ ಒಳ್ಳೆಯ ಸಂದೇಶವನ್ನು ಕೊಟ್ಟು ಮಾದರಿಯಾಗಬೇಕು, ನಿಮ್ಮನ್ನು ಹಲವರು ಅನುಸರಿಸುತ್ತಿರುತ್ತಾರೆ ನೋಡಿ ಮಾಡಿ ಮಾತನಾಡಿ ಎಂದು ಚಾಟಿ ಬೀಸಿದ್ದಾರೆ. ಇದೇ ರೀತಿಯ ಹೇಳಿಕೆಗಳನ್ನು ನೀಡಿದ ಮೇಲೆಯೇ ಬಾಲಿವುಡ್ ಮಕಾಡೆ ಮಲಗಿದ್ದು ಎಂದು ನೆಟ್ಟಿಗನೋರ್ವ ಕಿಡಿಕಾರಿದ್ದಾನೆ.

  ಪಾಕಿಸ್ತಾನದಲ್ಲಿ ಕ್ರಾಂತಿ ಮಾಡಿ

  ಪಾಕಿಸ್ತಾನದಲ್ಲಿ ಕ್ರಾಂತಿ ಮಾಡಿ

  ಇನ್ನು ಗಣರಾಜ್ಯೋತ್ಸವ ಅಲ್ಲ ಬರೀ ಕ್ರಾಂತಿ ಉತ್ಸವ ಎಂದಿರುವ ರಚಿತಾ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು 'ಗಣರಾಜ್ಯೋತ್ಸವ ಮರೆತು ಕ್ರಾಂತಿ ನೋಡಬೇಕಾ? ಥೂ ನೀವೆಲ್ಲ ಭಾರತೀಯರಾ? ನೀವೆಲ್ಲಾ ಇಲ್ಲಿ ಇರಬೇಡಿ, ಪಾಕಿಸ್ತಾನಕ್ಕೆ ಹೋಗಿ. ಅಲ್ಲೇ ಕ್ರಾಂತಿ ಉತ್ಸವ ಮಾಡಿ ಎಂದು ಕಿಡಿಕಾರಿದ್ದಾರೆ.

  English summary
  Forget Republic Day and watch Kranti movie; Rachita Ram gave controversial statement .
  Monday, January 9, 2023, 10:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X