For Quick Alerts
  ALLOW NOTIFICATIONS  
  For Daily Alerts

  ಕಾಮಿಡಿ ಚಿತ್ರದಲ್ಲಿ ಮಾಜಿ ಸಿಎಂ ಸದಾನಂದ ಗೌಡ

  By Rajendra
  |

  ಈಗಾಗಲೆ ಹಲವಾರು ರಾಜಕಾರಣಿಗಳು ಬೆಳ್ಳಿತೆರೆಯ ಮೇಲೆ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ. ಈಗ ಆ ಪಟ್ಟಿಗೆ ಹೊಸದಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೇರ್ಪಡೆಯಾಗುತ್ತಿದ್ದಾರೆ. ಅವರು ಅಭಿನಯಿಸಲಿರುವ ಚಿತ್ರದ ಹೆಸರು 'ಚೆಲ್ಲಾಪಿಲ್ಲಿ'.

  ಮೊದಲೇ ಕಾಮಿಡಿ ಚಿತ್ರ. ಇನ್ನು ನಮ್ಮ ಮಾಜಿ ಸಿಎಂ ಸದಾನಂದ ಗೌಡರಿದ್ದರಂತೂ ಮನರಂಜನೆಗೆ ನಯಾಪೈಸೆ ಮೋಸವಾಗಲ್ಲ. ಇದನ್ನು ನಿರ್ದೇಶಕ ಸಾಯಿಕೃಷ್ಣ ಕುಡ್ಲ ಅವರು ಚೆನ್ನಾಗಿ ಅರಿತಿರುವಂತಿದೆ. ಅದಕ್ಕಾಗಿಯೇ ತಮ್ಮ 'ಚೆಲ್ಲಾಪಿಲ್ಲಿ' ಚಿತ್ರಕ್ಕಾಗಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರನ್ನು ಬಣ್ಣದ ಲೋಕಕ್ಕೆ ಕರೆತರುತ್ತಿದ್ದಾರೆ.

  ಈಗಾಗಲೆ ಮೊದಲ ಹಂತಹ ಚಿತ್ರೀಕರಣ ಮುಗಿಸಿರುವ 'ಚೆಲ್ಲಾಪಿಲ್ಲಿ' ಚಿತ್ರಕ್ಕಾಗಿ ಸದಾನಂದ ಗೌಡರೊಂದಿಗೆ ಮಾತುಕತೆಯಾಗಿದೆ. ಅವರು ಅಭಿನಯಿಸುವುದೊಂದು ಬಾಕಿ ಇದೆ. ಈ ಚಿತ್ರದಲ್ಲೂ ಅವರದು ಮಾಜಿ ಸಿಎಂ ಪಾತ್ರ. ಸದಾನಂದ ಗೌಡರ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನುತ್ತವೆ ಮೂಲಗಳು.

  ಈ ಚಿತ್ರದಲ್ಲಿ ಅವರದು ಅತಿಥಿ ಪಾತ್ರ. ಎರಡನೇ ಹಂತದ ಚಿತ್ರೀಕರಣದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಚಿತ್ರದ ಕಥೆ ಅವರಿಗೆ ಇಷ್ಟವಾಗಿದೆಯಂತೆ. ವಿಜಯ ರಾಘವೇಂದ್ರ, ಐಶ್ವರ್ಯಾ ನಾಗ್, ಶೋಭಾರಾಜ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದೆ.

  ಶಿನೆಸಿಟಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುದೀಶ್ ಭಂಡಾರಿ, ಸುಕೇಶ್ ಭಂಡಾರಿ ನಿರ್ಮಿಸುತ್ತಿರುವ ಚಿತ್ರವಿದು. ಈ ಚಿತ್ರ ಔಟ್ ಅಂಡ್ ಔಟ್ ಮನರಂಜನಾತ್ಮಕವಾಗಿರುತ್ತದೆ. "Laughter is the best Medicine" ಎಂಬ ಆಂಗ್ಲ ನಾಣ್ಣುಡಿಗೆ ಅನ್ವರ್ಥವಾಗಿ ಈ ಚಿತ್ರ ಇರುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು. (ಏಜೆನ್ಸೀಸ್)

  English summary
  Karnataka former Chief Minister DV Sadananda Gowda is all set to make a foray into stardom. Director Sai Krishna Kudla announced that the Gowda has given his consent to act in the film starring VijayRaghavendra, Aishwarya Nag, Shobraj in lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X