»   » ಸುದೀಪ್ ಮತ್ತು ಹೆಚ್.ಡಿ.ಕೆ ಭೇಟಿ ಹಿಂದಿನ ಅಸಲಿ ಕಾರಣ?

ಸುದೀಪ್ ಮತ್ತು ಹೆಚ್.ಡಿ.ಕೆ ಭೇಟಿ ಹಿಂದಿನ ಅಸಲಿ ಕಾರಣ?

Posted By:
Subscribe to Filmibeat Kannada
ನಟ ಸುದೀಪ್ ರನ್ನ ಭೇಟಿ ಮಾಡಿದ ಎಚ್ ಡಿ ಕುಮಾರಸ್ವಾಮಿ | Filmibeat Kannada

ಕಿಚ್ಚ ಸುದೀಪ್ ಸದ್ಯ ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ಸೇರಿದಂತೆ ಹಾಲಿವುಡ್ ನಲ್ಲೂ ಬ್ಯುಸಿ ಆಗಿರುವ ನಟ. ಬೆಳ್ಳಿತೆರೆಯಲ್ಲಷ್ಟೇ ಅಲ್ಲದೆ ಕಿರುತೆರೆಯಲ್ಲೂ 'ರಿಯಾಲಿಟಿ ಶೋ' ನಡೆಸಿಕೊಡುತ್ತಾ, ಇವುಗಳ ಮಧ್ಯೆದಲ್ಲಿ ಬಿಡುವು ಮಾಡಿಕೊಂಡು 'ಸಿಸಿಎಲ್' ಪಂದ್ಯಗಳಲ್ಲೂ ಭಾಗಿಯಾಗುತ್ತಿರುವ ಹೀರೋ ಕಿಚ್ಚ ಸುದೀಪ್.

ಸದಾ ಹಲವಾರು ಕೆಲಸಗಳಲ್ಲಿ ಬ್ಯುಸಿ ಆಗಿರುವ ಸುದೀಪ್ ಬಿಡುವು ಮಾಡಿಕೊಂಡು ಪರ್ಸನಲ್ ಲೈಫ್ ಹಾಗೂ ಅಭಿಮಾನಿ ಸಂಘಟನೆಗಳನ್ನೂ ನೋಡಿಕೊಳ್ಳುತ್ತಾರೆ. ಇವುಗಳ ಮಧ್ಯೆ ಕಿಚ್ಚ ರಾಜಕೀಯಕ್ಕೆ ಬರ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಆದರೆ ಕಳೆದ ವಾರ ರೈತರ ಕಾರ್ಯಕ್ರಮವೊಂದರಲ್ಲಿ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಸುದೀಪ್ ಅವರೇ ನೇರವಾಗಿ ತಿಳಿಸಿದ್ದರು.

ರಾಜಕೀಯಕ್ಕೆ ಬರಲ್ಲ ಅಂದಿದ್ದ ಸುದೀಪ್ ರನ್ನ ಮಾಜಿ ಸಿಎಂ ಕುಮಾರಸ್ವಾಮಿ ಮೀಟ್ ಮಾಡಿದ್ದಾರೆ. ತಮ್ಮ ಹುಟ್ಟುಹಬ್ಬದ ನಂತರ ಕುಮಾರಸ್ವಾಮಿ ಅವರು ಸುದೀಪ್ ಅವರ ಮನೆಗೆ ಆಗಮಿಸಿದ್ದರು. ವೈಯಕ್ತಿಕ ವಿಚಾರವಾಗಿ ಸುದೀಪ್ ರನ್ನ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಹೊರತು ಪಡಿಸಿ ಬೇರೆಯದ್ದೇ ವಿಷ್ಯಾ ಇದೆ ಅಂತಿದ್ದಾರೆ ಗಾಂಧಿನಗರದ ಮಂದಿ. ಹಾಗಾದ್ರೆ ಸುದೀಪ್ ಹೆಚ್ ಡಿ ಕೆ ಮೀಟಿಂಗ್ ಯಾವ ಕಾರಣಕ್ಕೆ ಆಯ್ತು? ಮುಂದೆ ಓದಿ

ಸುದೀಪ್ ರನ್ನ ಭೇಟಿ ಮಾಡಿದ ಕುಮಾರಸ್ವಾಮಿ

ಹುಟ್ಟುಹಬ್ಬದ ಸಂಭ್ರಮವನ್ನ ಮುಗಿಸಿದ ನಂತರ 'ಹೆಚ್ ಡಿ ಕುಮಾರಸ್ವಾಮಿ' ನಟ ಕಿಚ್ಚ ಸುದೀಪ್ ಅವರನ್ನ ಭೇಟಿ ಮಾಡಿದ್ದಾರೆ. ಜೆ ಪಿ ನಗರದ ಸುದೀಪ್ ನಿವಾಸಕ್ಕೆ ಭೇಟಿಕೊಟ್ಟು ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ಸಾಕಷ್ಟು ವರ್ಷದ ಸ್ನೇಹಿತರು

ಸುದೀಪ್ ಅವರ ತಂದೆ 'ಸಂಜೀವ್' ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಕುಮಾರಸ್ವಾಮಿ ಕೂಡ ರಾಜಕೀಯದ ಜೊತೆ ಜೊತೆಗೆ ಸಿನಿಮಾರಂಗದಲ್ಲೂ ಗುರುತಿಸಿಕೊಂಡವರು. ಇಬ್ಬರಿಗೂ ಹಳೆ ಪರಿಚಯವಿದ್ದರಿಂದ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದಾರೆ.

ರಾಜಕೀಯಕ್ಕೆ ಜಾಕ್ ಮಂಜು ಎಂಟ್ರಿ?

ಸದ್ಯ, ಸುದೀಪ್ ಅವರ ಆಪ್ತ ಸ್ನೇಹಿತ ಹಾಗೂ ಮ್ಯಾನೇಜರ್ ಆಗಿರೋ 'ಜಾಕ್ ಮಂಜು' ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಚಿಕ್ಕಪೇಟೆ ಕ್ಷೇತ್ರದಿಂದ ನಿರ್ಮಾಪಕ ಜಾಕ್ ಮಂಜು ಅವರಿಗೆ 'ಜೆ ಡಿ ಎಸ್' ನಿಂದ ಕುಮಾರಸ್ವಾಮಿ ಟಿಕೆಟ್ ನೀಡಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದ ಗಲ್ಲಿಯಲ್ಲಿ ಸದ್ದು ಮಾಡುತ್ತಿದೆ.

ಸ್ನೇಹಕ್ಕಾಗಿ ರಾಜಕೀಯ ಪ್ರಚಾರ

ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿರುವ ಸುದೀಪ್ ಆಪ್ತರಿಗಾಗಿ ಪ್ರಚಾರ ಮಾಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಕಳೆದ ಬಾರಿ 'ಅಂಬರೀಶ್' ಅವರ ಪರ ಪ್ರಚಾರವನ್ನೂ ಮಾಡಿರುವ ಕಿಚ್ಚ, ಈ ಸಲ ಜಾಕ್ ಮಂಜು ರಾಜಕೀಯ ಪ್ರವೇಶ ಮಾಡಿದರೇ 'ಜೆ ಡಿ ಎಸ್' ಪರ ಕ್ಯಾಂಪೇನ್ ಮಾಡೋದು ಖಚಿತ.

English summary
Recently, former CM Kumaraswamy visited kannada actor Kicha Sudeep house, and discussed a lot of ideas for two hours, according to grapevine producer jack manju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X