For Quick Alerts
  ALLOW NOTIFICATIONS  
  For Daily Alerts

  'ಬನಾರಸ್' ಸಿನಿಮಾ ವೀಕ್ಷಿಸಿ ಭೇಷ್ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

  |

  ಝೈದ್ ಖಾನ್ ಮೊದಲ ಬಾರಿಗೆ ನಟಿಸಿರುವ 'ಬನಾರಸ್' ಸಿನಿಮಾ ಕಳೆದ ಶುಕ್ರವಾರ ತೆರೆಗೆ ಬಂದಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಜಯತೀರ್ಥ ನಿರ್ದೇಶಿಸಿ, ಸೊನಲ್ ಮೊಂಟೇರೊ ನಾಯಕಿಯಾಗಿ ನಟಿಸಿರುವ ಈ ಸಿನಿಮಾದ ಬಗ್ಗೆ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಸಿನಿಮಾವನ್ನು ವೀಕ್ಷಿಸಿದ್ದಾರೆ.

  ಭಾನುವಾರ ರಾತ್ರಿ, ತಮ್ಮ ಕೆಲವು ಸಹೋದ್ಯೋಗಿಗಳ ಜೊತೆಗೆ ಮಲ್ಟಿಪ್ಲೆಕ್ಸ್‌ನಲ್ಲಿ 'ಬನಾರಸ್' ಸಿನಿಮಾವನ್ನು ಸಿದ್ದರಾಮಯ್ಯ ವೀಕ್ಷಿಸಿದ್ದಾರೆ. ಈ ಸಮಯದಲ್ಲಿ ಸಿದ್ದರಾಮಯ್ಯ ಜೊತೆಗೆ ನಟ ಝೈದ್ ಖಾನ್ ಹಾಗೂ ಚಿತ್ರತಂಡದ ಇತರ ಸದಸ್ಯರು ಸಹ ಇದ್ದರು. ಹಾಗೂ ಝೈದ್ ಖಾನ್‌ರ ತಂದೆ, ರಾಜಕಾರಣಿ ಜಮೀರ್ ಅಹ್ಮದ್ ಸಹ ಉಪಸ್ಥಿತರಿದ್ದರು.

  ಹೀರೋ ಆಗಲು ಮುಂಬೈಗೆ ಹೋಗಿದ್ದೆ, ಆದರೆ...: ಹಳೆ ನೆನಪಿಗೆ ಜಾರಿದ ಜಮೀರ್ ಅಹ್ಮದ್ಹೀರೋ ಆಗಲು ಮುಂಬೈಗೆ ಹೋಗಿದ್ದೆ, ಆದರೆ...: ಹಳೆ ನೆನಪಿಗೆ ಜಾರಿದ ಜಮೀರ್ ಅಹ್ಮದ್

  ಜಮೀರ್ ಅಹ್ಮದ್ ಹಾಗೂ ಸಿದ್ದರಾಮಯ್ಯ ಬಹಳ ಆಪ್ತರು. ಅವರ ಮಗನ ಮೊದಲ ಸಿನಿಮಾ ಇದಾಗಿರುವ ಕಾರಣದಿಂದ ಈ ಸಿದ್ದರಾಮಯ್ಯ ಆಸಕ್ತಿವಹಿಸಿ 'ಬನಾರಸ್' ಸಿನಿಮಾ ವೀಕ್ಷಿಸಿದ್ದಾರೆ.

  ಸಿನಿಮಾಗಳ ಬಗ್ಗೆ ಸಾಕಷ್ಟು ಒಲವು ಇರುವ ಸಿದ್ದರಾಮಯ್ಯ ಆಗಾಗ್ಗೆ ಕನ್ನಡ ಸಿನಿಮಾಗಳನ್ನು ವೀಕ್ಷಿಸುತ್ತಿರುತ್ತಾರೆ. ಸಿನಿಮಾ ತಂಡಗಳು ಕರೆದರೆ ಆ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿರುತ್ತಾರೆ. ಬೇಡಿಕೆ ಮೇರೆಗೆ ಸಿನಿಮಾ ಪ್ರೀವ್ಯುಗಳಲ್ಲಿಯೂ ಭಾಗವಹಿಸುತ್ತಾರೆ. ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದಂತೆ ಬಹಳ ಹಿಂದು ಸಿನಿಮಾ ಒಂದರ ಸಣ್ಣ ಪಾತ್ರದಲ್ಲಿ ನಟಿಸಿದ್ದರಂತೆ ಸಹ!

  ಸದಭಿರುಚಿಯ ಸಿನಿಮಾ ಇದು: ಸಿದ್ದರಾಮಯ್ಯ

  ಸದಭಿರುಚಿಯ ಸಿನಿಮಾ ಇದು: ಸಿದ್ದರಾಮಯ್ಯ

  ಇದೀಗ 'ಬನಾರಸ್' ಸಿನಿಮಾ ವೀಕ್ಷಿಸಿ ಆ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚುಕುಟಾಗಿ ಬರೆದಿರುವ ಸಿದ್ದರಾಮಯ್ಯ, ''ಝೈದ್ ಖಾನ್ ಹಾಗೂ ಸೋನಂ ಮಾಂಟೇರೋ ಅಭಿನಯದ ಬನಾರಸ್ ಚಿತ್ರ ವೀಕ್ಷಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದೆ. ನೈಜತೆಯಿಂದ ಕೂಡಿದ ಪಾತ್ರಗಳು, ಸ್ವಾರಸ್ಯಕರವಾದ ಕತೆಯನ್ನು ಒಳಗೊಂಡಿರುವ ಸದಭಿರುಚಿಯ ಚಲನಚಿತ್ರವಿದು. ಇಂಥಾ ಚಿತ್ರಗಳ ಸಂಖ್ಯೆ ನೂರಾಗಲಿ. ಚಿತ್ರರಂಗ ಬೆಳೆಯಲಿ, ಚಿತ್ರತಂಡ ಬೆಳೆಯಲಿ. ಎಲ್ಲರಿಗೂ ಒಳಿತಾಗಲಿ'' ಎಂದಿದ್ದಾರೆ.

  ಸಿನಿಮಾ ನೋಡಿ ಖುಷಿಯಾದ ಸಿದ್ದರಾಮಯ್ಯ

  ಸಿನಿಮಾ ನೋಡಿ ಖುಷಿಯಾದ ಸಿದ್ದರಾಮಯ್ಯ

  ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸಿದ್ದರಾಮಯ್ಯ, ''ನಾನು ಸಿನಿಮಾ ನೋಡಿ ಬಹಳ ದಿನವಾಗಿತ್ತು. ಇತ್ತೀಚೆಗೆ ನೋಡಿರಲಿಲ್ಲ. ಅದೇ ಸಮಯಕ್ಕೆ ನನ್ನ ಗೆಳೆಯ ಜಮೀರ್, ಆತನ ಪುತ್ರ ಝೈದ್ ಖಾನ್ ಸಿನಿಮಾ ಮಾಡುವುದಾಗಿ ಹೇಳಿ ನೋಡಬೇಕೆಂದು ಆಗ್ರಹಿಸಿದರು. ಹಾಗಾಗಿ ಸಿನಿಮಾ ನೋಡಿದೆ'' ಎಂದಿದ್ದಾರೆ.

  ಝೈದ್ ಖಾನ್ ನಟನೆ ಚೆನ್ನಾಗಿದೆ: ಸಿದ್ದರಾಮಯ್ಯ

  ಝೈದ್ ಖಾನ್ ನಟನೆ ಚೆನ್ನಾಗಿದೆ: ಸಿದ್ದರಾಮಯ್ಯ

  ''ಬನಾರಸ್' ಸಿನಿಮಾ ನೋಡಿದೆ. ಸಿನಿಮಾದ ಕತೆಯೂ ಚೆನ್ನಾಗಿದೆ. ಸಿನಿಮಾ ಸಹ ಚೆನ್ನಾಗಿದೆ. ಸಿನಿಮಾದ ನಾಯಕ ಝೈದ್ ಖಾನ್, ಅವರಿಗಿದು ಮೊದಲನೇ ಸಿನಿಮಾ ಆದರೂ ಸಹ, ಅವರು ಪಕ್ವವಾಗಿ ನಟಿಸಿದ್ದಾರೆ. ಅವರ ಮೊದಲನೇ ಸಿನಿಮಾ ಇದು ಎನಿಸುವುದಿಲ್ಲ. ಸ್ವಾಭಾವಿಕವಾಗಿ ನಟಿಸಿದ್ದಾರೆ. ಇನ್ನು ನಟಿ ಸೋನಲ್, ಕೆಲವು ಸಿನಿಮಾಗಳಲ್ಲಿ ನಟಿಸಿ ಅನುಭವ ಉಳ್ಳವರು. ಅವರೂ ಸಹ ಚೆನ್ನಾಗಿ ನಟಿಸಿದ್ದಾರೆ.

  ನಿರ್ದೇಶಕರ ಕಲ್ಪನೆ ಚೆನ್ನಾಗಿದೆ: ಸಿದ್ದರಾಮಯ್ಯ

  ನಿರ್ದೇಶಕರ ಕಲ್ಪನೆ ಚೆನ್ನಾಗಿದೆ: ಸಿದ್ದರಾಮಯ್ಯ

  ಸಿನಿಮಾ ಎರಡು ವರೆಗಂಟೆ ಇದ್ದು, ಸಿನಿಮಾ ನೋಡುವಾಗ ಬೇಸರ ಆಗಲ್ಲ. ಸಿನಿಮಾ ನೋಡುವಾಗ ಮುಂದೇನಾಗುತ್ತದೆ ಎಂಬ ಕುತೂಹಲ ಉಂಟಾಗುತ್ತಾ ಇರುತ್ತದೆ. ಹಾಗಾಗಿ ಸಿನಿಮಾ ಉದ್ದಕ್ಕೂ ಸಹ ಎಲ್ಲೂ ಬೇಸರವಾಗುವುದಿಲ್ಲ. ಸಿನಿಮಾದ ಕತೆಯನ್ನು ನಿರ್ದೇಶಕ ಜಯತೀರ್ಥ ಚೆನ್ನಾಗಿ ತೆಗೆದುಕೊಂಡು ಹೋಗಿದ್ದಾರೆ. ಅವರ ನಿರ್ದೇಶನ, ಅವರ ಕಲ್ಪನೆ ಬಹಳ ಚೆನ್ನಾಗಿದೆ'' ಎಂದಿದ್ದಾರೆ ಸಿದ್ದರಾಮಯ್ಯ.

  English summary
  Former CM Siddaramaiah watched Banaras movie with actor Zaid Khan and his friend and Zaid Khan's father Zameer Ahmed.
  Monday, November 7, 2022, 10:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X