For Quick Alerts
  ALLOW NOTIFICATIONS  
  For Daily Alerts

  ಈ ವಾರ 'ಕುಲ್ಫಿ' ಸವಿಯುತ್ತಾ 'ಚಿಟ್ಟೆ' ಜೊತೆ 'ಹೈಪರ್' ನೋಡಿ

  By Bharath Kumar
  |

  ಇತ್ತೀಚಿನ ದಿನದಲ್ಲಿ ಯಾವುದು ದೊಡ್ಡ ಸ್ಟಾರ್ ಸಿನಿಮಾಗಳು ತೆರೆಕಂಡಿಲ್ಲ ಆದ್ರೆ, ವಿಭಿನ್ನ, ವಿಶೇಷವಾದ ಹೊಸಬರ ಚಿತ್ರಗಳು ತೆರೆಮೇಲೆ ಬಂದಿದೆ. ಸಂಪ್ರದಾಯದಂತೆ, ನಿರೀಕ್ಷೆಯಂತೆ ಈ ವಾರವೂ ನಾಲ್ಕು ಕನ್ನಡ ಸಿನಿಮಾಗಳು ಚಿತ್ರಮಂದಿರಕ್ಕೆ ಈ ವಾರ ಲಗ್ಗೆಯಿಡುತ್ತಿದೆ.

  ಅಂದ್ಹಾಗೆ, ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲಿ ಸಸ್ಪೆನ್ಸ್-ಥ್ರಿಲ್ಲರ್-ಲವ್ ಸ್ಟೋರಿ ಕಥೆಯಿಂದ ಗಮನ ಸೆಳೆಯುತ್ತಿದೆ. ಒಂದೊಂದು ಚಿತ್ರಗಳು ಒಂದೊಂದು ಅಂಶದಿಂದ ಕುತೂಹಲ ಮೂಡಿಸಿದೆ.

  ಹಾಗಿದ್ರೆ, ಈ ವಾರ ಥಿಯೇಟರ್ ಅಂಗಳಕ್ಕೆ ಕಾಲಿಡುತ್ತಿರುವ ಚಿತ್ರಗಳು ಯಾವುದು.? ಆ ಚಿತ್ರಗಳ ವಿಶೇಷತೆ ಏನು.? ನೀವು ಯಾವ ಚಿತ್ರಕ್ಕೆ ಹೋಗಬಹುದು.? ಎಂಬುದನ್ನ ಮುಂದೆ ಓದಿ....ನಿರ್ಧರಿಸಿ

  ಲವ್ ಸ್ಟೋರಿ 'ಹೈಪರ್'

  ಲವ್ ಸ್ಟೋರಿ 'ಹೈಪರ್'

  ಅರ್ಜುನ್ ಆರ್ಯ ಮತ್ತು ಶೀಲ ಮುಖ್ಯ ಭೂಮಿಕೆಯಲ್ಲಿ ಅಭಿನಯದ 'ಹೈಪರ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಗಣೇಶ್ ವಿನಾಯಕ್ ನಿರ್ದೇಶಿಸಿದ್ದಾರೆ. ಕಾಲೇಜ್ ಲವ್ ಸ್ಟೊರಿ ಹಾಗೂ ಅಪ್ಪ- ಮಗಳ ಭಾಂಧವ್ಯದ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಡಿ.ಇಮಾನ್ ಸಂಗೀತ ನೀಡಿದ್ದಾರೆ. ಎಂ.ಬಿಗ್ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಕಾರ್ತಿಕ್ ಅವರು ನಿರ್ಮಾಣ ಮಾಡಿದ್ದಾರೆ.

  'ಚಿಟ್ಟೆ' ಈ ವಾರ ಬಿಡುಗಡೆ

  'ಚಿಟ್ಟೆ' ಈ ವಾರ ಬಿಡುಗಡೆ

  'ರಂಗಪ್ಪ ಹೊಗ್ಬಿಟ್ನ' ಸಿನಿಮಾ ನಿರ್ದೇಶನ ಮಾಡಿದ್ದ ಎಂ.ಎಲ್. ಪ್ರಸನ್ನ ಆಕ್ಷನ್ ಕಟ್ ಹೇಳಿರುವ 'ಚಿಟ್ಟೆ' ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ ಅಲ್ಲದೆ ಸಾಹಿತ್ಯ ಹಾಗೂ ಸಂಗೀತದ ಜವಾಬ್ದಾರಿಯನ್ನೂ ಪ್ರಸನ್ನ ಅವರೇ ವಹಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಯಶಸ್ ಸೂರ್ಯ, ನಾಗೇಶ್ ಕಾರ್ತಿಕ್ ಮತ್ತು ಹರ್ಷಿಕ ಪೂಣಚ್ಚ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ವೈವಾಹಿಕ ಜೀವನದಲ್ಲಿ ಜರಗುವ ಘಟನೆಗಳೇ ಈ ಚಿತ್ರದ ಪ್ರಮುಖ ಅಂಶಗಳಾಗಿವೆ.

  ಈ ವಾರ ತೆರೆಗೆ 'ಕುಲ್ಫಿ'

  ಈ ವಾರ ತೆರೆಗೆ 'ಕುಲ್ಫಿ'

  ಮಂಜು ಹಾಸನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ 'ಕುಲ್ಫ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎ ಎಂ ಎಸ್ ಪ್ರೊಡಕ್ಷನ್ ಲಾಂಛನದಲ್ಲಿ ಮುನಿಸ್ವಾಮಿ ಎಸ್.ಡಿ ನಿರ್ಮಾಣ ಮಾಡಿದ್ದಾರೆ. ಖ್ಯಾತ ವಿತರಕರಾದ ಬಹರ್ ಫಿಲಂಸ್ ಭಾಷಾ ಅವರು ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಅಭೀಷೇಕ್ ಸಂಗೀತ ನಿರ್ದೇಶನವಿದ್ದು, ಸಿನೋಲ್, ದಿಲೀಪ್, ಗಿರೀಶ್, ಲಾರೆನ್ಸ್, ರಮೇಶ್ ಭಟ್, ಬಿರಾದಾರ್ ಮುಂತಾದವರಿದ್ದಾರೆ.

  ಈ ವಾರ ತೆರೆಗೆ 121

  ಈ ವಾರ ತೆರೆಗೆ 121

  ದೋಸ್ತಿ ಆನಂದ್ ಕಥೆ ಬರೆದು ಸಂಕಲನದೊಂದಿಗೆ ನಿರ್ದೇಶನವನ್ನು ಮಾಡಿರುವ *121#ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನೇಕಾರ ಸಿನಿ ಎಂಟರ್‍ಪ್ರೈಸಸ್ ಲಾಂಛನದಲ್ಲಿ ಕಿರಣ್ ಕುಮಾರ್ ಟಿ.ಎಂ ನಿರ್ಮಾಣ ಮಾಡಿದ್ದಾರೆ. ಆಕಾಶ್ ಜಾಧವ್ ಹಾಗೂ ರಾಘವೇಂದ್ರ ವಿ ಸಂಗೀತ ನಿರ್ದೇಶನವಿದ್ದು, ವಿನಯ್ ಚಂದರ್, ವಿದ್ಯಾ ವಿರ್ಶ್, ನವೀನ್, ಮಜಾ ಟಾಕೀಸ್ ಪವನ್, ಉಗ್ರಂ ಮಂಜು, ಸ್ವಾತಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

  English summary
  Kannada movie hyper, kannada movie chitte, kannada movie kulfi, kannada movie *121# are releasing this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X