»   » ಈ ವಾರ 4 ಚಿತ್ರಗಳು ತೆರೆಗೆ, ನಿಮ್ಮ ಆಯ್ಕೆ ಯಾವುದು?

ಈ ವಾರ 4 ಚಿತ್ರಗಳು ತೆರೆಗೆ, ನಿಮ್ಮ ಆಯ್ಕೆ ಯಾವುದು?

Posted By:
Subscribe to Filmibeat Kannada

ಚಂದನವನದಲ್ಲಿ ಪ್ರತೀ ವಾರ ಎರಡು-ಮೂರು ಚಿತ್ರಗಳು ತೆರೆ ಮೇಲೆ ಬರ್ತಾನೇ ಇರ್ತಾವೆ. ಅಲ್ಲದೇ ದೀಪಾವಳಿ ಹಬ್ಬ ಕಳೆದರೂ ಕೂಡ ಸಿನಿಮಾಗಳ ಹಬ್ಬ ಇನ್ನು ಮುಂದುವರೆದಿದೆ. ಇದೀಗ ಈ ವಾರ ಕೂಡ ನಾಲ್ಕು ಕನ್ನಡ ಚಿತ್ರಗಳು ಬಿಡುಗಡೆ ಕಾಣುತ್ತಿವೆ.

ನವೆಂಬರ್ 19 'ಅಕ್ಟೋಪಸ್' : ಬಹುಭಾಷಾ ನಟ ಹಾಗೂ ಬಹುಮುಖ ಪ್ರತಿಭೆ ಎನ್ನಲಡ್ಡಿಯಿಲ್ಲದ ನಟ ಕಿಶೋರ್ ಅವರ ವಿಭಿನ್ನ ಚಿತ್ರ 'ಅಕ್ಟೋಪಸ್' ಇದೇ ಗುರುವಾರ ತೆರೆ ಕಾಣುತ್ತಿದೆ. ನಿರ್ದೇಶಕ ಪಿ.ಅಣ್ಣಯ್ಯ ಆಕ್ಷನ್-ಕಟ್ ಹೇಳಿರುವ ಚಿತ್ರದಲ್ಲಿ ನಾಯಕಿಯಾಗಿ ನಟಿ ಯಜ್ಞಾ ಶೆಟ್ಟಿ ಅವರು ಮಿಂಚಿದ್ದು, ನಟ ತಿಲಕ್, ಶರತ್ ಲೋಹಿತಾಶ್ವ ಜೈ ಜಗದೀಶ್ ಮುಂತಾದವರು ತಾರಾಗಣದಲ್ಲಿ ಮಿಂಚಿದ್ದಾರೆ.['ಸುಮ್ಮನೆ ಕುಣಿದು ಹಣ ಮಾಡುವ ಇರಾದೆ ನನ್ನದಲ್ಲ' ಎಂದ ನಟ ಯಾರು?]

Four Kannada movies to be released this week

ನವೆಂಬರ್ 20 'ಬಾಕ್ಸರ್' : ಡೈರೆಕ್ಟರ್ ಸ್ಪೆಷಲ್ ಹುಡುಗ ಧನಂಜಯ್ ಹಾಗೂ ನಟಿ ಕೃತಿಕಾ ಜಯರಾಂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಬಾಕ್ಸರ್' ಚಿತ್ರ ಇದೇ ಶುಕ್ರವಾರ ಭರ್ಜರಿಯಾಗಿ ತೆರೆ ಮೇಲೆ ಅಪ್ಪಳಿಸುತ್ತಿದೆ. ನಿರ್ದೇಶಕ ಪ್ರೀತಂ ಗುಬ್ಬಿ ಅವರ ಆಕ್ಷನ್-ಕಟ್ ಈ ಚಿತ್ರಕ್ಕಿದ್ದು, ಜಯಣ್ಣ ಭೋಗೆಂದ್ರ ಕಂಬೈನ್ಸ್ ನಲ್ಲಿ ಸಿನಿಮಾ ಮೂಡಿಬಂದಿದೆ.

ನವೆಂಬರ್ 20 'ಬೆಂಗಳೂರು-560023' : ಕಿರುತೆರೆ ನಟ ಜೆ.ಕೆ ಅಲಿಯಾಸ್ ಜಯ ಕಾರ್ತಿಕ್, ಬಿಗ್ ಬಾಸ್ ಖ್ಯಾತಿಯ ಚಂದನ್, ಕಾಮಿಡಿ ನಟ ಚಿಕ್ಕಣ್ಣ, ನಟ ಧ್ರುವ, ಮುಂತಾದವರು ಕಾಣಿಸಿಕೊಂಡಿರುವ 'ಬೆಂಗಳೂರು-560023' ಚಿತ್ರ ಈ ಶುಕ್ರವಾರ ತೆರೆ ಕಾಣುತ್ತಿದೆ. 'ಕಿರಾತಕ' ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಪ್ರದೀಪ್ ರಾಜ್ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಹಿರಿತೆರೆಯಲ್ಲಿ ಅಷ್ಟಾಗಿ ಯಶಸ್ಸು ಗಳಿಸದ ಜೆಕೆಗೆ ಈ ಚಿತ್ರವಾದರೂ ಯಶಸ್ಸು ತಂದುಕೊಡುತ್ತಾ ಕಾದು ನೋಡಬೇಕು.[ಮೌಂಟ್ ಕಾರ್ಮೆಲ್ ಹುಡುಗಿ, 'ಬಾಕ್ಸರ್' ಬೆಡಗಿ ಕೃತಿಕಾ, ಏನಂತಾರೆ..?]

ನವೆಂಬರ್ 20 'ಮಾಮು ಟೀ ಅಂಗಡಿ' : ವೃತ್ತಿಯಲ್ಲಿ ಪತ್ರಕರ್ತನಾಗಿದ್ದ ಪರಮೇಶ್ ಅವರಿಗೆ ಇದು ಚೊಚ್ಚಲ ಚಿತ್ರ. ಎಲ್ಲಾ ಹೊಸಬರನ್ನೇ ಹಾಕಿಕೊಂಡು ಮಾಡಿರುವ 'ಮಾಮು ಟೀ ಅಂಗಡಿ' ಈ ಶುಕ್ರವಾರ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಸ್ಟಾರ್ ನಟರಾದ ಶ್ರೀನಗರ ಕಿಟ್ಟಿ, ಅಜೇಯ್ ರಾವ್ ಹಾಗೂ ಲವ್ಲೀ ಸ್ಟಾರ್ ಪ್ರೇಮ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[ಅಚ್ಚರಿ.! ಸಂಭಾವನೆ ಪಡೆಯದೇ ನಟಿಸಿದ, ಸ್ಯಾಂಡಲ್ ವುಡ್ ನ ನಟರು]

ಒಟ್ನಲ್ಲಿ ಈ ನಾಲ್ಕು ಚಿತ್ರಗಳು ಈ ವಾರ ಭರ್ಜರಿಯಾಗಿ ತೆರೆ ಮೇಲೆ ಅಪ್ಪಳಿಸುತ್ತಿದ್ದು, ನೀವು ಯಾವ ಸಿನಿಮಾ ನೋಡಲು ಇಷ್ಟ ಪಡ್ತೀರಾ?, ಅಂತ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ.

English summary
Four Kannada movies 'Boxer', 'Bengaluru-560023', 'Mamu Tea Angadi', and 'Octopus' to be release this week

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada