twitter
    For Quick Alerts
    ALLOW NOTIFICATIONS  
    For Daily Alerts

    ಮೇ 31, ಜೂನ್ 1 ರಂದು ಸಿನಿಮಾ ಕಲಾವಿದರಿಗೆ ಉಚಿತ ಕೋವಿಡ್ ಲಸಿಕೆ

    |

    ಚಿತ್ರರಂಗದ ಸದಸ್ಯರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಮೇ 31 ಹಾಗೂ ಜೂನ್ 1 ರಂದು ಎರಡು ದಿನಗಳ ಕಾಲ ಸ್ಯಾಂಡಲ್‌ವುಡ್ ಇಂಡಸ್ಟ್ರಿಯ ನೋಂದಾಯಿತ ಕಲಾವಿದರಿಗೆ ಲಸಿಕೆ ನೀಡಲು ಕಾರ್ಯಕ್ರಮ ಆಯೋಜನೆಯಾಗಿದೆ.

    ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಭವನ ಕಟ್ಟಡದಲ್ಲಿ ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಡಿಸಿಎಂ ಅಶ್ವಥ್ ನಾರಾಯಣ, ಸಂಸದೆ ಸುಮಲತಾ ಚಾಲನೆ ನೀಡಲಿದ್ದಾರೆ.

    ಚಿತ್ರರಂಗದವರಿಗೆ ಕೋವಿಡ್ ಲಸಿಕೆ ಒದಗಿಸಲು ಕೆಎಫ್‌ಸಿಸಿ ನಿಯೋಗದ ಮನವಿಚಿತ್ರರಂಗದವರಿಗೆ ಕೋವಿಡ್ ಲಸಿಕೆ ಒದಗಿಸಲು ಕೆಎಫ್‌ಸಿಸಿ ನಿಯೋಗದ ಮನವಿ

    ಈ ವೇಳೆ ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಹಾಗೂ ಬಿಬಿಎಂಪಿ ಆಯುಕ್ತ ಹಾಗೂ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

    Free Covid-19 Vaccination to Sandalwood Artists on May 31st and 1st June

    ಈ ಕುರಿತು ಸಮುಲತಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ''ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಿಂದ ಸದಸ್ಯರಿಗೆ 31-5-21 ಮತ್ತು 1-6-21 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೂ ಡಾ: ಅಂಬಿ ಆಡಿಟೋರಿಯಂ, ಚಾಮರಾಜಪೇಟೆಯಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲನೇ ಅಥವಾ ಎರಡನೇ ಲಸಿಕೆಗಾಗಿ ಆಧಾರ್ ಕಾರ್ಡ್ ಸಹಿತ, ಕೋವಿಡ್ ನಿಯಮ ಪಾಲಿಸಿ ಬಂದು ಸೌಲಭ್ಯ ಪಡೆಯಬೇಕು.'' ಎಂದು ತಿಳಿಸಿದ್ದಾರೆ.

    ಇದಕ್ಕೂ ಮುಂಚೆ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ನಿರ್ದೇಶಕ ನಾಗಣ್ಣ, ಸಾರಾ ಗೋವಿಂದು ಸೇರಿದಂತೆ ಹಲವರು ಆರೋಗ್ಯ ಸಚಿವ ಸುಧಾಕರ್‌ರನ್ನು ಭೇಟಿ ಮಾಡಿ ಚಿತ್ರರಂಗದ ಸದಸ್ಯರಿಗೆ ಕೋವಿಡ್ ಲಸಿಕೆ ನೀಡುವಂತೆ ಮನವಿ ಸಲ್ಲಿಸಿದ್ದರು.

    Recommended Video

    ಹೈದರಾಬಾದ್ ನ ಲಗೇಜ್ ಆಟೋ ಹತ್ತಿ ಪರದಾಡಿದ ಕನ್ನಡತಿ ಖ್ಯಾತಿಯ ರಂಜನಿ | Filmibeat Kanada

    ಚಿತ್ರರಂಗದ ಸಮಸ್ಯೆಯಲ್ಲಿದೆ. ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುಬೇಕು ಎಂದು ಸಿಎಂ ಭೇಟಿ ಮಾಡಿದ್ದರು. ಸಾಧ್ಯವಾದರೆ ಚಿತ್ರರಂಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಮನವಿ ಸಹ ಸಲ್ಲಿಸಿದ್ದರು.

    ಚಿತ್ರ ಕಲಾವಿದರ ಜೊತೆ ರಂಗಭೂಮಿ ಕಲಾವಿದರು, ತಂತ್ರಜ್ಞರು ಸಹ ಕಲಾವಿದರ ಭವನದಲ್ಲಿ ಉಚಿತ ಕೋವಿಡ್ ಲಸಿಕೆ ಪಡೆಯಬಹುದು. ಲಸಿಕೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಿ.

    English summary
    Free COVID-19 vaccination to sandalwood artists on may 31st and 1st June Said MP Sumalatha.
    Monday, May 31, 2021, 14:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X