For Quick Alerts
  ALLOW NOTIFICATIONS  
  For Daily Alerts

  ಶುಕ್ರವಾರದ ಚುರುಮುರಿ: ಸಿನಿಮಾ ಇಂಡಸ್ಟ್ರಿಯ ಗಲ್ಲಿ ಸುದ್ದಿಗಳು

  |

  ಕೃಷ್ಣ ಅಜಯ್ ರಾವ್ ಅಭಿನಯಿಸಿದ್ದ 'ಕೃಷ್ಣ ಟಾಕೀಸ್' ಸಿನಿಮಾ ಕಳೆದ ಏಪ್ರಿಲ್ ತಿಂಗಳಲ್ಲಿ ತೆರೆಕಂಡಿತ್ತು. ಥಿಯೇಟರ್‌ಗೆ ಬಂದ ಕೆಲವೇ ದಿನಗಳಲ್ಲಿ ಲಾಕ್‌ಡೌನ್ ಜಾರಿಯಾದ ಹಿನ್ನೆಲೆ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದೀಗ, ಕೃಷ್ಣ ಟಾಕೀಸ್ ಚಿತ್ರವನ್ನು ಮತ್ತೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

  ಆಗಸ್ಟ್ 27 ರಂದು ಎರಡನೇ ಬಾರಿ ''ಕೃಷ್ಣ ಟಾಕೀಸ್'' ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಇದೊಂದು ಹಾರರ್ ಥ್ರಿಲ್ಲರ್ ಸಿನಿಮಾ ಆಗಿದ್ದು, ವಿಜಯಾನಂದ್ ನಿರ್ದೇಶಿಸಿದ್ದರು. ಅಪೂರ್ವ ಈ ಚಿತ್ರದ ನಾಯಕಿ. ಸಿಂಧು ಲೋಕನಾಥ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನವಿದೆ. ಶೋಭ್‌ರಾಜ್, ಪ್ರಮೋದ್ ಶೆಟ್ಟಿ, ಮಂಡ್ಯ ರಮೇಶ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

  ಒಲಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡ ರೋಚಕ ಆಟ: 'ಚೆಕ್ ದೇ ಇಂಡಿಯಾ 2' ಆಫರ್?ಒಲಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡ ರೋಚಕ ಆಟ: 'ಚೆಕ್ ದೇ ಇಂಡಿಯಾ 2' ಆಫರ್?

  'ನವರಸ' ಸಿನಿಮಾ ಲೀಕ್

  ಮಣಿರತ್ನಂ ಮತ್ತು ಜಯೇಂದ್ರ ಪಂಚಪಕೇಶನ್ ಜಂಟಿಯಾಗಿ ನಿರ್ಮಾಣ ಮಾಡಿದ್ದ 'ನವರಸ' ಸಿನಿಮಾ ಶುಕ್ರವಾರ ನೆಟ್‌ಪ್ಲಿಕ್ಸ್‌ನಲ್ಲಿ ಪ್ರೀಮಿಯರ್ ಕಂಡಿದೆ. ಆದರೆ ಮೊದಲ ದಿನವೇ ನವರಸ ಸಿನಿಮಾ ಸೋರಿಕೆಯಾಗಿದೆ. ಟೆಲಿಗ್ರಾಂ ಹಾಗೂ ಇನ್ನಿತರ ಆಪ್‌ಗಳಲ್ಲಿ ನವರಸ ಸಿನಿಮಾ ಹರಿದಾಡುತ್ತಿದೆ.

  ನವರಸ ಸರಣಿಯಲ್ಲಿ ಒಂಬತ್ತು ಜನರು ಒಂದೊಂದು ಭಾಗವನ್ನು ನಿರ್ದೇಶಿಸಿದ್ದಾರೆ. ಸೂರ್ಯ, ವಿಜಯ್ ಸೇತುಪತಿ, ಸಿದ್ಧಾರ್ಥ್, ಸತೀಶ್ ಕುಮಾರ್, ಪಾರ್ವತಿ ತಿರುವೊತ್ತು, ರೇವತಿ, ಅಥರ್ವ ಮತ್ತು ಅಂಜಲಿ, ಪ್ರಕಾಶ್ ರಾಜ್ ಸೇರಿದಂತೆ ಹಲವರು ಈ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

  ಅಮೇಜಾನ್ ಪ್ರೈಮ್ ಜೊತೆ ನಟ ಸೂರ್ಯ ಮೆಗಾ ಒಪ್ಪಂದಕ್ಕೆ ಸಹಿಅಮೇಜಾನ್ ಪ್ರೈಮ್ ಜೊತೆ ನಟ ಸೂರ್ಯ ಮೆಗಾ ಒಪ್ಪಂದಕ್ಕೆ ಸಹಿ

  ಕಾರ್ತಿಕ್ ಆರ್ಯನ್ 'ಫ್ರೆಡ್ಡಿ' ಶುರು

  ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ನಟಿಸುತ್ತಿರುವ 'ಫ್ರೆಡ್ಡಿ' ಚಿತ್ರದ ಶೂಟಿಂಗ್ ಶುರುವಾಗಿದೆ. ಏಕ್ತಾ ಕಪೂರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಶಶಾಂಕ್ ಘೋಷ್ ನಿರ್ದೇಶಿಸುತ್ತಿದ್ದಾರೆ. ಶಶಾಂಕ್ ಇದಕ್ಕೂ ಮುಂಚೆ ಕರೀನಾ ಕಪೂರ್, ಸೋನಮ್ ಕಪೂರ್ ನಟಿಸಿದ್ದ 'ವೀರ್ ದಿ ವೆಡ್ಡಿಂಗ್' ಸಿನಿಮಾ ಮಾಡಿದ್ದರು. ಈ ಚಿತ್ರ ನನ್ನ ಹೃದಯಕ್ಕೆ ಹತ್ತಿರವಾದುದು ಎಂದು ಟ್ವೀಟ್ ಮಾಡಿದ್ದಾರೆ ಕಾರ್ತಿಕ್ ಆರ್ಯನ್.

   Friday Updates: Bell Bottom and Bhuj movie songs released, Krishna Talkies Movie set to re release

  ಈ ಚಿತ್ರದ ಜೊತೆಗೆ ರಾಮ್ ಮಾಧ್ವನಿ ಅವರ 'ಧಮಾಕಾ' ಸಿನಿಮಾದಲ್ಲಿ ಕಾರ್ತಿನ್ ನಟಿಸುತ್ತಿದ್ದಾರೆ. ಕೇವಲ ಹತ್ತು ದಿನದಲ್ಲಿ ಈ ಚಿತ್ರದ ಶೂಟಿಂಗ್ ಮುಗಿಸಿ ದಾಖಲೆ ಬರೆದಿದ್ದಾರೆ. ಅನೀಸ್ ಬಾಜ್ಮಿಯವರ 'ಭೂಲ್ ಭುಲಾಯಿಯಾ 2', ಹನ್ಸಲ್ ಮೆಹ್ತಾ ಅವರ 'ಕ್ಯಾಪ್ಟನ್ ಇಂಡಿಯಾ' ಹಾಗೂ ಸಮೀರ್ ವಿದ್ವಾನ್ಸ ಅವರ ಇನ್ನು ಹೆಸರಿಡದ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ.

  ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಹಾಡು

  ಅಜಯ್ ದೇವಗನ್ ನಟನೆಯಲ್ಲಿ ಮೂಡಿ ಬರುತ್ತಿರುವ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಸಿನಿಮಾದ 'ದೇಶ್ ಮೇರೇ...' ಹಾಡು ಬಿಡುಗಡೆಯಾಗಿದೆ. ಅರಿಜಿತ್ ಸಿಂಗ್ ಹಾಡಿದ್ದು, ಈ ಭಾವಪೂರ್ಣ ಹಾಡಿಗೆ ಅರ್ಕೊ ಸಂಗೀತ ಒದಗಿಸಿದ್ದಾರೆ. ಮನೋಜ್ ಮುಂಟಶಿರ್ ಸಾಹಿತ್ಯ ಬರೆದಿರುವುದು ವಿಶೇಷ. 1971ರಲ್ಲಿ ನಡೆದ ಭಾರತ-ಪಾಕ್ ಯುದ್ಧದ ನೈಜ ಘಟನೆಗಳನ್ನು ಆಧರಿಸಿ ಮಾಡಿರುವ ಚಿತ್ರ ಇದಾಗಿದ್ದು, ಸ್ಕ್ವಾಡ್ರನ್ ಲೀಡರ್ ವಿಜಯ್ ಕಾರ್ಣಿಕ್ ನಾಯಕನಾಗಿ ದೇವಗನ್ ನಟಿಸಿದ್ದಾರೆ. ಆಗಸ್ಟ್ 13 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ.

  'ಬೆಲ್ ಬಾಟಮ್' ಹಾಡು

  ಅಕ್ಷಯ್ ಕುಮಾರ್ ಮತ್ತು ವಾಣಿ ಕಪೂರ್ ನಟನೆಯ ಬೆಲ್ ಬಾಟಮ್ ಸಿನಿಮಾ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ. ರಂಜಿತ್ ಎಂ ತಿವಾರಿ ನಿರ್ದೇಶನದ ಈ ಚಿತ್ರ ಆಗಸ್ಟ್ 19 ರಂದು ತೆರೆಗೆ ಬರ್ತಿದೆ. ಅಕ್ಷಯ್ ಕುಮಾರ್, ವಾಣಿ ಕಪೂರ್ ಜೊತೆ ಲಾರಾ ದತ್ತ, ಹುಮಾ ಖುರೇಶಿ ಸಹ ಕಾಣಿಸಿಕೊಂಡಿದ್ದಾರೆ.

  ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭ

  2021ನೇ ಸಾಲಿನ ಸೈಮಾ ಪ್ರಶಸ್ತಿ ಸೆಪ್ಟೆಂಬರ್ 11, 12 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಚಿತ್ರಗಳಿಗೆ ನೀಡಲಾಗುವ ಪ್ರಶಸ್ತಿ ಇದಾಗಿದೆ.

  English summary
  Ajay Rao Starrer Krishna Talkies Re-releasing in theatres on August 27. SIIMA 2021 on 11th and 12th September in Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X