»   » ಟ್ವಿಟ್ಟರ್ ಸ್ಪರ್ಧೆ: ಸುದೀಪ್-ಉಪೇಂದ್ರ ಇಬ್ಬರಲ್ಲಿ 'ಬ್ಯಾಟ್' ಯಾರು.? 'ಬಾಲ್' ಯಾರು.?

ಟ್ವಿಟ್ಟರ್ ಸ್ಪರ್ಧೆ: ಸುದೀಪ್-ಉಪೇಂದ್ರ ಇಬ್ಬರಲ್ಲಿ 'ಬ್ಯಾಟ್' ಯಾರು.? 'ಬಾಲ್' ಯಾರು.?

Posted By: Bharath kumar
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರು ಒಟ್ಟಾಗಿ 'ಮುಕುಂದ ಮುರಾರಿ' ಸಿನಿಮಾದಲ್ಲಿ ಅಭಿನಯಿಸಿರುವುದು ಗೊತ್ತೆ ಇದೆ. ಆದ್ರೆ, ಇದೀಗ ಇವರಿಬ್ಬರ ಮಧ್ಯೆ ಒಂದು ಹೊಸ ಕಾಂಪಿಟೇಷನ್ ಶುರುವಾಗಿರುವುದು ಅನೇಕರಿಗೆ ಗೊತ್ತಿಲ್ಲ.

ಅಸಲಿಗೆ, ಈ ಕಾಂಪಿಟೇಷನ್ ಶುರುವಾಗಿದ್ದು, 'ಬಿಗ್ ಬಾಸ್' ವೇದಿಕೆಯಲ್ಲಿ. ನಿನ್ನೆ (ಅಕ್ಟೋಬರ್ 23) ರಾತ್ರಿ ಪ್ರಸಾರವಾದ 'ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪೇಂದ್ರ ಆಗಮಿಸಿದ್ದರು. ಈ ವೇಳೆ ಸುದೀಪ್, ಉಪ್ಪಿಗೆ ಹಲವು ಪ್ರಶ್ನೆಗಳನ್ನ ಕೇಳಿದರು. ಕಿಚ್ಚ ಕೇಳಿದ ಎಲ್ಲ ಪ್ರಶ್ನೆಗಳಿಗೂ ತಮ್ಮದೇ ಆದ ಸ್ಟೈಲ್ ನಲ್ಲಿ ಉಪೇಂದ್ರ ಉತ್ತರ ಕೊಟ್ಟರು.


ಸುದೀಪ್ ಪ್ರಶ್ನೆಗಳಿಗೆ ಅತ್ಯಂತ ಜಾಣ್ಮೆಯಿಂದ ಉತ್ತರ ಕೊಟ್ಟ ಉಪ್ಪಿ, ಕೊನೆಯಲ್ಲಿ ಕಿಚ್ಚ ಸುದೀಪ್ ಗೆ ಕೆಲ ಪ್ರಶ್ನೆಗಳನ್ನ ಕೇಳಲು ಮುಂದಾದರು. ಆದ್ರೆ, ಸುದೀಪ್ 'ಬಿಗ್ ಬಾಸ್' ವೇದಿಕೆಯಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಿಲ್ಲ. ನಿಮ್ಮ ಪ್ರಶ್ನೆಗೆ ಟ್ವಿಟ್ಟರ್ ನಲ್ಲಿ ಉತ್ತರ ನೀಡುತ್ತೇನೆ ಅಂತ ಹೇಳಿದರು.[ಉಪೇಂದ್ರ ದೃಷ್ಟಿಯಲ್ಲಿ ರಾಜಕೀಯ ಹೇಗಿರಬೇಕು ಗೊತ್ತಾ ?]


ಆಡಿದ ಮಾತಿನಂತೆ ಈಗ ಟ್ವಿಟ್ಟರ್ ನಲ್ಲಿ ಸುದೀಪ್ ಮತ್ತು ಉಪೇಂದ್ರ ನಡುವೆ ಕಾಂಪಿಟೇಷನ್ ಶುರುವಾಗಿದ್ದು, 'ಮುಕುಂದ ಹಾಗೂ ಮುರಾರಿ'ಯ ಮಧ್ಯೆ ಬ್ಯಾಟ್-ಬಾಲ್ ಆಟ ನಡೆಯುತ್ತಿದೆ. ಅಷ್ಟಕ್ಕೂ ಏನಿದು ಗೇಮ್ ಅಂತ ಇಲ್ಲಿದೆ ನೋಡಿ....


ಗೇಮ್ ಸ್ಟಾರ್ಟ್ ಮಾಡಿದ ಉಪ್ಪಿ

ಸುದೀಪ್ ಅವರ ಮಾತಿಗೆ ಗ್ರೀನ್ ಸಿಗ್ನಲ್ ಕೊಟ್ಟ ಉಪ್ಪಿ ನಿನ್ನೆ ರಾತ್ರಿಯೇ ಟ್ವಿಟ್ಟರ್ ಮೂಲಕ ತಮ್ಮ ಮೊದಲ ಪ್ರಶ್ನೆಯನ್ನ ಸುದೀಪ್ ಗೆ ಕೇಳಿದ್ದಾರೆ.


ಉಪ್ಪಿಯ ಮೊದಲ ಪ್ರಶ್ನೆ

''ನಾವಿಬ್ಬರು ಸೇರಿ ಒಂದು ಸಿನಿಮಾ ಮಾಡಿದ್ದೀವಿ. ಅದರಲ್ಲಿ ಒಬ್ಬರು ಬ್ಯಾಟ್, ಒಬ್ಬರು ವಿಕೆಟ್ ಅಂತ ಎಲ್ಲೋ ಒಂದು ಕಡೆಯಿಂದ ಕೇಳದೆ, ನಮ್ಮಿಬ್ಬರ ಮಧ್ಯೆ ಬ್ಯಾಟ್ ಯಾರು? ವಿಕೆಟ್ ಯಾರು? ಉತ್ತರ ಕೊಡಿ'' - ಅಂತ ಉಪೇಂದ್ರ ಪ್ರಶ್ನೆ ಮಾಡಿದ್ದಾರೆ. (ಉಪ್ಪಿ ಕೇಳಿರುವ ಪ್ರಶ್ನೆಯ ವಿಡಿಯೋ ಲಿಂಕ್ ಇಲ್ಲಿದೆ ನೋಡಿ...)


ಕಿಚ್ಚನ ಪ್ರತಿಕ್ರಿಯೆ

ಉಪ್ಪಿ ಅವರ ವಿಡಿಯೋ ನೋಡಿದ ಸುದೀಪ್ ''ಆದಷ್ಟೂ ಬೇಗ ನಿಮಗೆ ನನ್ನ ಉತ್ತರ ಸಿಗುತ್ತೆ'' ಅಂತ ನಿನ್ನೆ ರಾತ್ರಿಯೇ ಪ್ರತಿಕ್ರಿಯೆ ನೀಡಿದ್ದಾರೆ.


ಉಪ್ಪಿ ಪ್ರಶ್ನೆಗೆ ಕಿಚ್ಚನ ಮರು ಪ್ರಶ್ನೆ

ಉಪೇಂದ್ರ ಕೇಳಿದ ಮೊದಲ ಪ್ರಶ್ನೆಗೆ, ಸುದೀಪ್ ಇನ್ನು ಉತ್ತರ ಕೊಟ್ಟಿಲ್ಲ. ಆದ್ರೆ, ಉಪ್ಪಿಯ ಪ್ರಶ್ನೆಗೆ ಸುದೀಪ್ ಮರು ಪ್ರಶ್ನೆ ಹಾಕಿದ್ದಾರೆ.


ಏನದು ಕಿಚ್ಚನ ಮರು ಪ್ರಶ್ನೆ.?

''ಮುರಾರಿ ಆಗಿರುವ ಉಪ್ಪಿ ಸಾರ್ ಅವರಿಗೆ ಕಿಚ್ಚನ ನಮಸ್ಕಾರ, ನಿನ್ನೆ ರಾತ್ರಿ ನೀವು ಒಂದು ಪ್ರಶ್ನೆ ಹಾಕಿದ್ರಿ? ಬ್ಯಾಟ್ ಯಾರು, ವಿಕೆಟ್ ಯಾರು ಅಂತ? ಕ್ರಿಕೆಟ್ ನಲ್ಲಿ ಬಾಲ್ ಬಹಳ ಇಂಪಾರ್ಟೆಂಟ್ ಉಪ್ಪಿ ಸಾರ್. ಬಾಲ್ ಯಾರು ಅಂತ ತಾವು ನನಗೆ ಫಸ್ಟ್ ಹೇಳಿ. ನಮ್ಮಿಬ್ರಲ್ಲಿ ಬ್ಯಾಟ್ ಯಾರು, ವಿಕೆಟ್ ಯಾರು ಅಂತ ಹೇಳ್ತಿನಿ'' - ಅಂತ ಸುದೀಪ್ ವಿಡಿಯೋ ಕಳುಹಿಸಿದ್ದಾರೆ. (ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ)


ಸುದೀಪ್ ಡೌಟ್ ಗೆ ಉಪ್ಪಿಯ ಮತ್ತೊಂದು ಡೌಟ್

''ಸುದೀಪ್, ಬಾಲ್ ಯಾರು ಅಂತ ನೀವು ಕೇಳ್ತಾ ಇದ್ದೀರಾ. ಮೊದಲು ಆ ಬಾಲು, 'ಕಾರ್ಕ್ ಬಾಲ್', 'ಟೆನ್ನಿಸ್ ಬಾಲ್', 'ಲೆದರ್ ಬಾಲ್' ಇಲ್ಲ, ಬ್ಲೋ ಹೋಗಿರುವ 'ಟುಸ್ ಬಾಲ್' ಅಂತ ನೀವೇ ಹೇಳಿ. ಅಮೇಲೆ ಆ ಬಾಲ್ ಯಾರು ಅಂತ ನಾನು ಹೇಳ್ತಿನಿ'' ಅಂತ ಮತ್ತೆ ಬಾಲ್ ನ ಸುದೀಪ್ ಅಂಗಳಕ್ಕೆ ಹೊಡೆದಿದ್ದಾರೆ. (ವಿಡಿಯೋ ಇಲ್ಲಿದೆ ನೋಡಿ)


ಉಪೇಂದ್ರ ಬಾಲ್ ಡೌಟ್ ಗೆ ಸುದೀಪ್ ಉತ್ತರ

''ಆದಷ್ಟೂ ಬೇಗ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತೆ ಸರ್'' ಅಂತ ಸುದೀಪ್ ಟ್ವೀಟ್ ಮಾಡಿದ್ದಾರೆ.


ಕಿಚ್ಚನ ಕೋರ್ಟ್ ನಲ್ಲಿ ಬಾಲ್

ಸದ್ಯ, ಸುದೀಪ್ ಅವರ ಅಂಗಳದಲ್ಲಿ ಬಾಲ್ ಬಂದು ಬಿದ್ದಿದೆ. ಬ್ಯಾಟ್ ಯಾರು, ವಿಕೆಟ್ ಯಾರು ಅಂತ ಶುರುವಾದ ಕಾಂಪಿಟೇಷನ್, ಉತ್ತರ ಸಿಗದೆ, ಬಾಲ್ ಹಿಂದೆ ಹೋಗಿದೆ. ನೋಡೋಣ ಅಭಿನಯ ಚಕ್ರವರ್ತಿ ಏನು ಉತ್ತರ ಕೊಡ್ತಾರೆ ಅಂತ... ಮುಂದಿನ ಉತ್ತರಕ್ಕಾಗಿ ನಿರೀಕ್ಷಿಸಿ...


English summary
After respecting Kiccha Sudeep's words in 'Bigg Boss Kannada 4' stage, Real Star Upendra has taken his Twitter Account to ask questions for Kiccha Sudeep through videos. Here is the detailed report.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada