For Quick Alerts
  ALLOW NOTIFICATIONS  
  For Daily Alerts

  ಯಶ್ ಕಡೆಗೆ ಗರುಡಾಗಿಂತಲೂ ಡೇಂಜರ್ ಲುಕ್ ಕೊಟ್ಟ ಐರಾ!

  |

  ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಮಗಳು ಐರಾಳ ಮುಡಿಕೊಟ್ಟ ಬಳಿಕ ನಟ ಯಶ್, ಬೋಳು ತಲೆಯ ಪಾಪುವಿನೊಂದಿಗೆ ಚೆಂದದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ತಮಾಷೆಯ ಕ್ಯಾಪ್ಷನ್ ಕೊಟ್ಟಿದ್ದರು. ಈ ಚಿತ್ರ ಸಾಕಷ್ಟು ವೈರಲ್ ಆಗಿತ್ತು. ಯಶ್ ಅಭಿಮಾನಿಗಳು ಈ ಚಿತ್ರವನ್ನು ಬಳಸಿಕೊಂಡು ತಹೇವಾರಿ ಮೀಮ್‌ಗಳನ್ನು ಮಾಡುತ್ತಿದ್ದಾರೆ. ಈ ಮೀಮ್‌ಗಳೂ ವೈರಲ್ ಆಗುತ್ತಿವೆ.

  ಕೂದಲು ತೆಗೆದ ನಂತರ ಐರಾ ಯಶ್ ಹೇಗಿದ್ದಾಳೆ ನೋಡಿ | Yash | Radhika pandit | Ayra

  ಯಶ್-ರಾಧಿಕಾ ದಂಪತಿ ಬುಧವಾರ ನಂಜನಗೂಡಿನ ದೇವಸ್ಥಾನಕ್ಕೆ ತೆರಳಿ ತಮ್ಮ ದೊಡ್ಡ ಮಗುವಿನ ಮುಡಿ ಕೊಟ್ಟಿದ್ದರು. ಬಳಿಕ ಯಶ್ ಐರಾ ಜತೆಗಿನ ಸೆಲ್ಫಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಆ ಚಿತ್ರದಲ್ಲಿ ಐರಾ, ಕೋಪದಿಂದ ಅಪ್ಪನ ಕಡೆಗೆ ನೋಡುತ್ತಾ ಪ್ರಶ್ನೆ ಮಾಡುತ್ತಿರುವಂತೆ ಕಾಣಿಸುತ್ತಿತ್ತು.

  ಮಗಳು ಐರಾ ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಯಶ್ ತಬ್ಬಿಬ್ಬು!ಮಗಳು ಐರಾ ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಯಶ್ ತಬ್ಬಿಬ್ಬು!

  ಇದಕ್ಕೆ ಯಶ್, 'ಇದು ಬೇಸಿಗೆ ಎನ್ನುವುದು ನನಗೆ ಗೊತ್ತು. ಆದರೆ ಇದು ಬೇಸಿಗೆ ಕಾಲದ ಕಟ್ ಅಲ್ಲ ಎನ್ನುವುದಂತೂ ನನಗೆ ಖಚಿತವಿದೆ' ಎಂಬ ಐರಾ ಸಿಟ್ಟಿನಿಂದ ಹೇಳುವಂತೆ ಕ್ಯಾಪ್ಷನ್ ನೀಡಿದ್ದರು. ಈ ಫೋಟೊವನ್ನು ಅಭಿಮಾನಿಗಳು ತಮಾಷೆಯ ಮೀಮ್‌ಗಳನ್ನಾಗಿ ಪರಿವರ್ತಿಸಿದ್ದಾರೆ. ಅವು ಹೇಗಿವೆ? ಮುಂದೆ ನೋಡಿ...

  ಗರುಡಾಗಿಂತ ಡೇಂಜರ್ ಲುಕ್

  ಗರುಡಾಗಿಂತ ಡೇಂಜರ್ ಲುಕ್

  ನೀವ್ ನೀವೆ ಹರಕೆ ಹೇಳ್ಕೊಂಡು ನಿಮ್ ಕೂದಲು ಕೊಡೋದ್ ಬಿಟ್ಟು ನನ್ ಕೂದಲು ಮುಡಿ ಕೊಟ್ಟಿದ್ದೀರಾ ಎಂದು ಐರಾ, ಮುನಿಸಿನಿಂದ ಹೇಳುತ್ತಿದ್ದಾಳೆ. ಕೆಜಿಎಫ್‌ ಗರುಡಾಗಿಂತ ಡೇಂಜರ್ ಲುಕ್ ಕೊಟ್ಟ ಐರಾ ಎಂದು ಟ್ರೋಲ್ ಸ್ಯಾಂಡಲ್‌ವುಡ್ ಪುಟದಲ್ಲಿ ಮೀಮ್ ಮಾಡಲಾಗಿದೆ.

  ಕೆಜಿಎಫ್2 ಯಾವಾಗ ರಿಲೀಸ್ ಅಪ್ಪಾ?

  ಕೆಜಿಎಫ್2 ಯಾವಾಗ ರಿಲೀಸ್ ಅಪ್ಪಾ?

  'ಕೆಜಿಎಫ್ 2 ಯಾವಾಗ ರಿಲೀಸ್ ಆಗುತ್ತದೆ ಅಪ್ಪಾ?' ಎಂದು ಐರಾ ಕೇಳಿದರೆ, ಅದಕ್ಕೆ ಯಶ್ 'ನಿನಗೆ ಪೂರ್ತಿ ಕೂದಲು ಬಂದ ಬಳಿಕ ಮಗಳೇ' ಎಂದು ಹೇಳುವಂತೆ ಮೀಮ್ ಮಾಡಲಾಗಿದೆ. ಇದು ತೆಲುಗಿನ ಅಭಿಮಾನಿಗಳು ತಯಾರಿಸಿದ್ದಾರೆ ಎನ್ನುವುದು ವಿಶೇಷ.

  ತಂದೆಯಾಗಿ ಸಣ್ಣ ಜವಾಬ್ದಾರಿ ಪೂರೈಸಿದ ಯಶ್, ಪತಿಗೆ ರಾಧಿಕಾ ಸಾಥ್ತಂದೆಯಾಗಿ ಸಣ್ಣ ಜವಾಬ್ದಾರಿ ಪೂರೈಸಿದ ಯಶ್, ಪತಿಗೆ ರಾಧಿಕಾ ಸಾಥ್

  ಸಾಲ ಪಡೆದ ಸ್ನೇಹಿತನ ಲುಕ್

  ಸಾಲ ಪಡೆದ ಸ್ನೇಹಿತನ ಲುಕ್

  ಸಾಲಕೊಟ್ಟ ಸ್ನೇಹಿತನತ್ತ ನಾವು ಗುರಾಯಿಸುತ್ತಿದ್ದರೆ, ಹಣ ಪಡೆದ ಸ್ನೇಹಿತ ಹೇಗೆ ನೋಡುತ್ತಾನೆ ಎಂಬುದನ್ನು ತಮಾಷೆಯಾಗಿ ಸೌತ್ ಕರ್ನಾಟಕ ಮಿಮ್ಸ್‌ನಲ್ಲಿ ತೋರಿಸಲಾಗಿದೆ. ಸ್ನೇಹಿತನಿಗೆ ಕೊಟ್ಟ ಕಾಸು ವಾಪಸ್ ಬರೊಲ್ಲ ಎನ್ನುವುದು ಈ ಮೀಮ್ಸ್ ತಂಡದ ಅನುಭವ!

  ನೀವು ಕಟ್ ಮಾಡಿಸಿ ಮೊದಲು...

  ನೀವು ಕಟ್ ಮಾಡಿಸಿ ಮೊದಲು...

  ನೀವು ತಲೆ ತುಂಬಾ ಕೂದಲು, ಮುಖವೆಲ್ಲಾ ಆವರಿಸಿರುವ ಗಡ್ಡ ಬಿಟ್ಟಿರುವಾಗ ನನ್ನ ಕೂದಲನ್ನೇಕೆ ಪೂರ್ತಿ ತೆಗೆದು ಬೋಳು ಮಾಡಿಸಿದ್ದೀರಿ. ಮೊದಲು ನೀವು ಕಟ್ ಮಾಡಿಸಿಕೊಳ್ಳಿ ಎಂದು ಐರಾ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾಳೆ ಎಂಬುದಾಗಿ ಅನೇಕರು ಯಶ್ ಫೋಟೊಗೆ ಕಾಮೆಂಟ್ ಮಾಡಿದ್ದಾರೆ. ಕೆಲವರು ಯಶ್ ಅವರು 'ಡ್ಯಾಡ್' ಬದಲು 'ಅಪ್ಪ' ಎಂದು ಬಳಸಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

  English summary
  Memes pages started creating funny thoughts on Yash Ayra photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X