»   » ಚಂದನ್ ಶರ್ಮಾ ಸಾರಥ್ಯದ 'G6' ಸುದ್ದಿ ವಾಹಿನಿಯ ಲೋಗೋ ಅನಾವರಣ

ಚಂದನ್ ಶರ್ಮಾ ಸಾರಥ್ಯದ 'G6' ಸುದ್ದಿ ವಾಹಿನಿಯ ಲೋಗೋ ಅನಾವರಣ

Posted By:
Subscribe to Filmibeat Kannada

ಕನ್ನಡದ ಖ್ಯಾತ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿರುವ ನಿರೂಪಕ ಚಂದನ್ ಶರ್ಮಾ ಸಾರಥ್ಯದಲ್ಲಿ ಹೊಸ ಸುದ್ದಿ ವಾಹಿನಿ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. 'G6 news' ಎಂಬ ಹೆಸರಿನಲ್ಲಿ ಮೂಡಿ ಬರಲಿರುವ ವಾಹಿನಿಯ ಲೋಗೋ ಈಗ ಅಧಿಕೃತವಾಗಿ ಅನಾವರಣವಾಗಿದೆ.

ಫೆಬ್ರವರಿ 9 ರಂದು 'G6 news' ಲೋಗೋ ಬಿಡುಗಡೆಯಾಗಿದ್ದು, ದೇಶ ಕಾಯುವ ಯೋಧರಿಗೆ ಈ ವಾಹಿನಿಯನ್ನ ಅರ್ಪಣೆ ಮಾಡಲಾಗಿದೆ. ಇದು ಮಾಧ್ಯಮ ಲೋಕದಲ್ಲಿ ಹೊಸ ಇತಿಹಾಸ. ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನಡೆದ ಲೋಗೋ ಬಿಡುಗಡೆ ಸಮಾರಂಭದಲ್ಲಿ ರಾಜಕೀಯ ವ್ಯಕ್ತಿಗಳು, ಯೋಧರು, ಪೊಲೀಸರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಈ ವೇಳೆ ದಶಕಕ್ಕೂ ಹೆಚ್ಚು ಕಾಲ ದೇಶ ಸೇವೆಯಲ್ಲಿ ತೊಡಗಿದ್ದ ನಿವೃತ್ತ ಯೋಧರಾದ ಮುರುಳಿ, ಅಚ್ಚಪ್ಪ ಮತ್ತು ಬಂಡಾರಿಯವರನ್ನು ಗೌರವಿಸಲಾಯಿತು. ಗೃಹ ಸಚಿವ ರಾಮಲಿಂಗರೆಡ್ಡಿ, ಬಿಬಿಎಂಪಿ ಮೇಯರ್ ಸಂಪತ್ ರಾಜ್, ಮಾಜಿ ಸಚಿವ ಬಿ.ಜೆ ಪುಟ್ಟಸ್ವಾಮಿ, ನೂತನ ಒಡೆಯರ್(ನಿ.ಪ್ರಿನ್ಸಿಪಲ್ ಚೀಫ್ ಕಮಿಷನರ್ ಆಫ್ ಇನ್ ಕಮ್ ಟ್ಯಾಕ್ಸ್), ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರಾದ ಡಾ.ಸಿ.ಎನ್ ಮಂಜುನಾಥ್, ಹಿರಿಯ ವಕೀಲರಾದ ಎಂ.ಟಿ ನಾಣಯ್ಯ, ಜಿ6 ನ ಚೇರ್ ಮನ್ ಡಾ. ಸತ್ಯನಾರಾಯಣ ಗುಪ್ತ ಸೇರಿದಂತೆ ಹಲವರು ಭಾಗಿಯಾಗಿದ್ದರು.

G6 News channel Logo launch

'ಒಂದೇ ದಾರಿ...ಒಂದೇ ಗುರಿ' ಎಂಬ ಟ್ಯಾಗ್ ಲೈನ್ ನೊಂದಿಗೆ ನಿಮ್ಮನ್ನು ತಲುಪಲಿರುವ 'ಜಿ6 ನ್ಯೂಸ್' ಸತ್ಯ, ಪ್ರಾಮಾಣಿಕ ದಾರಿಯಲ್ಲಿ ಸಾಗಿ ಜನರ ಮನಸ್ಸನ್ನು ತಲುಪುತ್ತೇವೆ ಎಂದು‌ ಶಪತ ‌ಮಾಡಿದೆ. ಚಂದನ್ ಶರ್ಮಾ ಅವರ ಸಾರಥ್ಯದಲ್ಲಿ ಬರುತ್ತಿರುವ 'G6 news' ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ನಿಮ್ಮ ಮುಂದೆ ಬರಲಿದೆ.

English summary
Kannada New Channel 'g6 news' logo has launched at bangalore capitol hotel on february 9th. Famous news anchor Chandan sharma is the chief editor of this channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada