»   » ಯೋಗರಾಜ್ ಭಟ್ 'ಪ್ಲಸ್' ಗಡ್ಡ ವಿಜಿ ಸಂಕಲನ

ಯೋಗರಾಜ್ ಭಟ್ 'ಪ್ಲಸ್' ಗಡ್ಡ ವಿಜಿ ಸಂಕಲನ

Posted By:
Subscribe to Filmibeat Kannada

ಇನ್ನೊಂದು ಹೊಸ ಪ್ರಯೋಗಕ್ಕೆ ಯೋಗರಾಜ್ ಭಟ್ ಅಣಿಯಾಗಿದ್ದಾರೆ. ಸಿಂಬಲ್ ನಲ್ಲೇ ಚಿತ್ರಗಳನ್ನು ತೆಗೆದು ಗೆದ್ದವರು ರಿಯಲ್ ಸ್ಟಾರ್ ಉಪೇಂದ್ರ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸಿಂಬಲ್ ಚಿತ್ರಗಳು ಬಂದರೂ ಉಪ್ಪಿಯಷ್ಟು ಹೆಸರು ಯಾರೂ ಮಾಡಲಿಲ್ಲ.

ಇದೀಗ ಯೋಗರಾಜ್ ಭಟ್ ಮತ್ತು 'ದ್ಯಾವ್ರೇ' ಖ್ಯಾತಿಯ ಗಡ್ಡ ವಿಜಿ ಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ತಮ್ಮ ಕಾಂಬಿನೇಷನ್ ಚಿತ್ರಕ್ಕೆ 'ಪ್ಲಸ್' ಸಿಂಬಲ್ ಬಳಸಿಕೊಂಡಿದ್ದಾರೆ. ಇವರಿಬ್ಬರು ಗುಣಾಕಾರ, ಭಾಗಾಕಾರ ಹಾಕಿ ಸಂಕಲನ ಮಾಡಿರುವ 'ಪ್ಲಸ್' ಚಿತ್ರ ಇದೀಗ ಸ್ಯಾಂಡಲ್ ವುಡ್ ನ ಕುತೂಹಲದ ಬಿಂದು. [ದ್ಯಾವ್ರೇ ಚಿತ್ರ ವಿಮರ್ಶೆ]

Plus symbol moie

ಗಡ್ಡ ವಿಜಿ ನಿರ್ದೇನದ 'ದ್ಯಾವ್ರೇ' ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಮೆಚ್ಚುಗೆಗೂ ಪಾತ್ರವಾಯಿತು. ಇಷ್ಟಕ್ಕೂ ಈ ಪ್ಲಸ್ ಸಿಂಬಲ್ ಅರ್ಥ ಏನೆಂದರೆ ಒಮ್ಮೆ ಗಡ್ಡದ ಮೇಲೆ ಕೈಯಾಡಿಸುವ ವಿಜಿ ತಮ್ಮದೇ ಆದಂತಹ ವಿವರಣೆ ನೀಡುತ್ತಾರೆ. ಇದನ್ನು ಪಾಸಿಟೀವ್ ಅಂತಾನೂ ತಿಳಿಯಬಹುದು, ಸಿಲುಬೆ ಎಂದಾದರೂ ಭಾವಿಸಬಹುದು. ಅದು ಅವರವರ ಊಹೆಗೆ ಬಿಟ್ಟಿದ್ದು. ಆದರೆ ತಮ್ಮ ಕಥೆ ಮಾತ್ರ ಸಿಂಬಲ್ ಗೆ ತಕ್ಕಂತೆ ಇರುತ್ತದೆ ಎನ್ನುತ್ತಾರೆ.

ಈಗಾಗಲೆ ಈ ಪ್ಲಸ್ ಸಿಂಬಲ್ ಫಿಲಂ ಚೇಂಬರ್ ನಲ್ಲಿ ರಿಜಿಸ್ಟರ್ ಆಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸೆಟ್ಟೇರಲಿದೆ. ಇಷ್ಟಕ್ಕೂ ಚಿತ್ರದ ನಾಯಕ ನಟ ಹಾಗೂ ಹೀರೋಯಿನ್ ಯಾರು ಎಂಬುದು ಸದ್ಯಕ್ಕೆ ಗುಟ್ಟಾಗಿ ಇಡಲಾಗಿದೆ. ಸ್ಟಾರ್ ನಟರೇ ಈ ಚಿತ್ರದ ಹೀರೋ ಹೀರೋಯಿನ್ ಎಂಬುದು ಇನ್ನೊಂದು ವಿಶೇಷ.

ಚಿತ್ರದ ಮುಹೂರ್ತಕ್ಕೂ ಹೀರೋ ಬರದಂತೆ ಚಿತ್ರತಂಡ ಎಚ್ಚರವಹಿಸಲಾಗಿದೆ. ಪ್ಲಸ್ ಚಿತ್ರದ ವಿಶೇಷ ಗೆಟಪ್ ಗಾಗಿ ಹೀರೋ ರೆಡಿಯಾಗುತ್ತಿದ್ದಾರಂತೆ. ಅವರನ್ನು ಇನ್ನೊಂದು ಕಾರ್ಯಕ್ರಮದ ಮೂಲಕ ಬಹಿರಂಗಪಡಿಸುವ ಯೋಚನೆ ಚಿತ್ರತಂಡಕ್ಕಿದೆ. ಬಿ.ಜೆ. ಭರತ್ ಅವರ ಸಂಗೀತ ಹಾಗೂ ಗುರುಪ್ರಶಾಂತ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. (ಏಜೆನ್ಸೀಸ್)

English summary
Yograj movies and Gadda Viji joins hands with another different project titled as a '+' Plus symbol. The movie will go on floors in September. Music will be handled by BJ Bharath. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada