For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ನಲ್ಲಿ ಈ ವಾರ 2 ಹೊಸ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆ

  |

  ಲಾಕ್‌ಡೌನ್‌ನಿಂದ ನಿಧಾನವಾಗಿ ಚಿತ್ರರಂಗ ಸುಧಾರಿಸಿಕೊಳ್ಳುತ್ತಿದೆ. ಮಂಸೋರೆ ನಿರ್ದೇಶನದ 'ಆಕ್ಟ್ 1978' ಚಿತ್ರದ ಬಳಿಕ ಮತ್ತೆರಡು ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿವೆ.

  'ಆಕ್ಟ್ 1978' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಹಾಗೂ ಸ್ವಾಗತದಿಂದ ಕನ್ನಡ ನಿರ್ಮಾಪಕರಿಗೆ ಧೈರ್ಯ ಬಂದಿದೆ. ಹಾಗಾಗಿ, ಒಂದೊಂದೆ ಚಿತ್ರಗಳು ಥಿಯೇಟರ್‌ಗೆ ಲಗ್ಗೆಯಿಡುತ್ತಿವೆ. ಈ ವಾರ ಸ್ಯಾಂಡಲ್ ವುಡ್‌ನಲ್ಲಿ ಎರಡು ಸಿನಿಮಾ ಬಿಡುಗಡೆಯಾಗುತ್ತಿದೆ.

  'ಅರಿಷಡ್ವರ್ಗ' ಟೀಸರ್ ಬಿಡುಗಡೆಗೊಳಿಸಿದ ನಟ ಸುದೀಪ್'ಅರಿಷಡ್ವರ್ಗ' ಟೀಸರ್ ಬಿಡುಗಡೆಗೊಳಿಸಿದ ನಟ ಸುದೀಪ್

  * ಅರಿಷಡ್ವರ್ಗ

  ಅರವಿಂದ್ ಕಾಮತ್ ನಿರ್ದೇಶನ ಮಾಡಿರುವ ಅರಿಷಡ್ವರ್ಗ ಈ ವಾರ ತೆರೆಗೆ ಬರ್ತಿದೆ. ಮಿಸ್ಟರಿ ಥ್ರಿಲ್ಲರ್ ಕಥಾ ಹೊಂದಿರುವ ಈ ಚಿತ್ರ ಈಗಾಗಲೇ ಟ್ರೈಲರ್ ಮೂಲಕ ಗಮನ ಸೆಳೆದಿದೆ. ಕಿಚ್ಚ ಸುದೀಪ್ ಟ್ರೈಲರ್ ಬಿಡುಗಡೆ ಮಾಡಿದ್ದರು. ವಿಶೇಷ ಅಂದ್ರೆ 2019ರ ಲಂಡನ್ ವರ್ಲ್ಡ್ ಪ್ರೀಮಿಯರ್ ಮತ್ತು ಸಿಂಗಾಪಪುರದಲ್ಲಿ ನಡೆದ ಸೌತ್ ಏಷ್ಯನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈಗಾಗಲೇ ಪ್ರದರ್ಶನ ಕಂಡಿದೆ.

  ನಟಿ ಸಂಯುಕ್ತಾ ಹೊರನಾಡು, ನಂದ ಗೋಪಾಲ್, ಅವಿನಾಶ್, ಮಹೇಶ್ ಬಂಗ್, ಅಂಜು ಅಲ್ವಾ ನಾಯಕ್, ಅರವಿಂದ್ ಕುಪ್ಲಿಕರ್ ಪಾಲಕೃಷ್ಣ ದೇಶಪಾಂಡೆ, ಶ್ರೀಪತಿ ಮಂಜನ ಬೈಲು ಸೇರಿದಂತೆ ಹಲವರು ನಟಿಸಿದ್ದಾರೆ. ನಿರ್ದೇಶನದ ಜೊತೆಗೆ ಅರವಿಂದ್ ಕಾಮತ್ ಅವರೇ ನಿರ್ಮಾನ ಸಹ ಮಾಡಿದ್ದು, ಬಾಲಾಜಿ ಮನೋಹರ್ ಛಾಯಾಗ್ರಹಣ ಹಾಗೂ ಉದಿತ್ ಹರಿತಾನ್ ಸಂಗೀತ ನೀಡಿದ್ದಾರೆ.

  'ಅರಿಷಡ್ವರ್ಗ' ಟೀಸರ್ ಬಿಡುಗಡೆಗೊಳಿಸಿದ ನಟ ಸುದೀಪ್

  * ಗಡಿಯಾರ

  ಪ್ರಭಿಕ್ ಮೊಗವೀರ್ ನಿರ್ಮಾಣದಲ್ಲಿ ತಯಾರಾಗಿರುವ ಚಿತ್ರ ಗಡಿಯಾರ. ರಾಜಮನೆತನದ ಇತಿಹಾಸವನ್ನು ನೆನಪಿಸುವಂತಹ ಕಥಾ ಹಂದರದ ಮೂಲಕ ಲವ್, ಕಾಮಿಡಿ, ಥ್ರಿಲ್ಲರ್, ಸಸ್ಪೆನ್ಸ್ ಹಾಗೂ ಸಾಹಸ ಸೇರಿ ಕಮರ್ಷಿಯಲ್ ಚಿತ್ರ ಸಿದ್ಧವಾಗಿದೆ.

  Gadiyara and Arishadvarga Kannada Movies Releasing on November 27

  ಶೀತಲ್ ಶೆಟ್ಟಿ ಮತ್ತು ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಣದ ಜೊತೆ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಸಹ ಅವರೇ ಮಾಡಿದ್ದಾರೆ.

  ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಸಾಂಗ್ಲಿಯಾನ, ಯಶ್ ಶೆಟ್ಟಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವ್ ಸುಭಾಷ್ ಸಂಗೀತ, ಹೈಟ್ ಮಂಜು ಮತ್ತು ಶ್ಯಾಮ್ ಸಂದನೂರ್ ಅವರ ಛಾಯಾಗ್ರಹಣ, ಎನ್ ಎಂ ವಿಶ್ವಾಸ್ ಸಂಕಲನ ಚಿತ್ರಕ್ಕಿದೆ.

  ಭಾರಿ ಮೊಟ್ಟಕ್ಕೆ ಮಾರಾಟವಾಯ್ತು Pogaru Hindi ರೈಟ್ಸ್ | Dhruva Sarja | Filmibeat Kannada

  ಇದರ ಜೊತೆಗೆ ಮನೆ ನಂಬರ್ 13 ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿದೆ. ಮುಖವಾಡ ಇಲ್ಲದವನು ಸಿನಿಮಾನೂ ಇದೇ ವಾರ ಬಿಡುಗಡೆಯಾಗುತ್ತಿದೆ.

  English summary
  Gadiyara and Arishadvarga Kannada Movies Releasing on November 27.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X