»   » ಮತ್ತೆ ಒಂದಾದ ಸ್ಯಾಂಡಲ್ ವುಡ್ಡಿನ 'ಗಂಡ-ಹೆಂಡತಿ'

ಮತ್ತೆ ಒಂದಾದ ಸ್ಯಾಂಡಲ್ ವುಡ್ಡಿನ 'ಗಂಡ-ಹೆಂಡತಿ'

Posted By:
Subscribe to Filmibeat Kannada

ನಟಿ ಸಂಜನಾ ಯಾರಿಗೆ ತಾನೆ ಗೊತ್ತಿಲ್ಲ. ಹಾಗೆ, ಸಂಜನಾ ಸಖತ್ ಬೋಲ್ಡ್ ಆಗಿ ನಟಿಸಿದ 'ಗಂಡ ಹೆಂಡತಿ' ಸಿನಿಮಾ ಕೂಡ ಯಾರಿಗೂ ಗೊತ್ತಿಲ್ಲ ಅನ್ನುವ ಹಾಗಿಲ್ಲ. 'ಲಿಪ್ ಲಾಕ್' ವಿವಾದದಿಂದ ಇಡೀ ಸ್ಯಾಂಡಲ್ ವುಡ್ ನಲ್ಲಿ ಸುದ್ಧಿಯಾದ ಸಂಜನಾ ಮತ್ತು ತಿಲಕ್ ಈಗ ಮತ್ತೊಮ್ಮೆ ತೆರೆ ಮೇಲೆ ಒಂದಾಗುತ್ತಿದ್ದಾರೆ.

ಹೌದು, ವರ್ಷಗಳ ನಂತರ ನಟಿ ಸಂಜನಾ ಮತ್ತು ತಿಲಕ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಮಾಯತ್ ನಿರ್ಮಾಣದಲ್ಲಿ ಮೂಡಿ ಬರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಸಂಜನಾಗೆ ತಿಲಕ್ ಸಾಥ್ ಕೊಡಲಿದ್ದಾರೆ.


Ganda Hendathi fame Actors Sanjjanaa and Tilak reunite again

ಇದು ಕೊಂಚ ವಿಚಿತ್ರ ಅಂತ ನಿಮಗೆ ಅನಿಸಬಹುದು. ಯಾಕಂದ್ರೆ, ಬಿಗ್ ಬಾಸ್ ನಲ್ಲಿ ಸಂಜನಾ ಮತ್ತು ತಿಲಕ್ ಹಾವು-ಮುಂಗುಸಿಯಂತಿದ್ದರು. 'ಗಂಡ ಹೆಂಡತಿ' ವಿಷಯವಾಗಿಯೇ ಇಬ್ಬರು ಕಿತ್ತಾಡಿದ್ದರು. ಒಂದೇ ಮನೆಯಲ್ಲಿ ಇರುವುದಕ್ಕಾಗದ ಈ ಇಬ್ಬರು ಈಗ ಜೋಡಿಯಾಗಿ ನಟಿಸುವುದಕ್ಕೆ ಹೇಗೆ ಸಾಧ್ಯ ಅಂದ್ರೆ, ಅದರ ಹಿಂದೆ ಮತ್ತೊಂದು ಸ್ಟೋರಿ ಇದೆ.


ಚಿತ್ರಕ್ಕೆ ಹೀರೋ ತಿಲಕ್ ಸೂಕ್ತ ಅಂತ ನಿರ್ಮಾಪಕ ಹಿಮಾಯತ್ ಗೆ ಸೂಚಿಸಿದವರು ಇದೇ ಸಂಜನಾ. ಕಥೆ ಕೇಳುವಾಗ ಹೀರೋ ಪಾತ್ರ ಸಖತ್ ಸ್ಟೈಲಿಶ್ ಆಗಿ ಅನಿಸಿದ್ದರಿಂದ, ತಿಲಕ್ ಇದ್ದರೆ ಚಂದ ಅಂತ ಸಂಜನಾ ಸಜೆಸ್ಟ್ ಮಾಡಿದರಂತೆ. [ಅಯ್ಯೋ ಗಂಡ-ಹೆಂಡತಿ ಅನ್ಬೇಡಿ ಅಣ್ಣ-ತಂಗಿ ಅನ್ನಿ!]


ಸಂಜನಾ ಆಯ್ಕೆ ಮೇರೆಗೆ ನಿರ್ಮಾಪಕರು ತಿಲಕ್ ರನ್ನ ಸಂಪರ್ಕಿಸಿದಾಗ, ಅವರೂ ಒಪ್ಪಿಕೊಂಡಿದ್ದಾರೆ. ಹಾಗ್ನೋಡಿದ್ರೆ, ಬಿಗ್ ಬಾಸ್ ಕಾರ್ಯಕ್ರಮದ ನಂತ್ರ ಎಲ್ಲಾ ಭಿನ್ನಾಭಿಪ್ರಾಯಕ್ಕೆ ಎಳ್ಳುನೀರು ಬಿಟ್ಟು ತಿಲಕ್-ಸಂಜನಾ ಸ್ನೇಹಿತರಾಗಿದ್ದಾರೆ. ಅದರ ಪರಿಣಾಮವೇ ಈ ಹೊಸ ಸಿನಿಮಾ. ಇನ್ನೂ ಪ್ರೀ-ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರ ಸೆಟ್ಟೇರುವುದಕ್ಕೆ ಕೊಂಚ ಸಮಯ ಹಿಡಿಯಲಿದೆ. (ಏಜೆನ್ಸೀಸ್)

English summary
Kannada Actors Sanjjanaa and Tilak, who shot fame with the movie 'Ganda Hendathi', will be seen together again in an upcoming, yet-to-be-titled film produced by Himayath.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada