For Quick Alerts
  ALLOW NOTIFICATIONS  
  For Daily Alerts

  ಅಪ್ಪುಗೆ ಹಾಡಿಗೆ ಕುಣಿದ ಹ್ಯಾಟ್ರಿಕ್ ಹೀರೋ: 'ನನ್ನ ತಮ್ಮ ಹುಟ್ಟುತ್ತಾನೆ ಸೂಪರ್ ಸ್ಟಾರ್' ಎಂದ ಶಿವಣ್ಣ

  By ಎಸ್ ಸುಮಂತ್
  |

  ಇವತ್ತು ಒಂದಷ್ಟು ಕಣ್ಣೀರು, ಒಂದಷ್ಟು ಖುಷಿ, ಒಂದಷ್ಟು ಎಂಜಾಯ್‌ಮೆಂಟ್. ಒಂದಷ್ಟು ಕುಣಿತ ಈ ಎಲ್ಲಾ ಒಟ್ಟುಗೂಡಿಸಿ ಪುನೀತ್ ರಾಜ್‌ಕುಮಾರ್ ಅವರನ್ನು ಸಂಭ್ರಮಿಸಿದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಪುನೀತ ಪರ್ವ ಕಾರ್ಯಕ್ರಮ. ನಮ್ಮ ಸ್ಯಾಂಡಲ್‌ವುಡ್ ಸ್ಟಾರ್ ನಟ-ನಟಿಯರ ಜೊತೆಗೆ ಅಕ್ಕ ಪಕ್ಕದ ಸ್ಟಾರ್ ನಟರು ಕೂಡ ವೇದಿಕೆಗೆ ಮೆರಗು ತಂದುಕೊಟ್ಟಿದ್ದರು. ಎಲ್ಲರೂ ಅಪ್ಪುವಿಗಾಗಿ ನೃತ್ಯ ಮಾಡಿ ನಮನ ಅರ್ಪಿಸಿದರು.

  ಯಾವಾಗಲೂ ನನ್ನ ಅಣ್ಣ ಅಂತ ಅಪ್ಪು. ನನ್ನ ತಮ್ಮ ಅಂತ ಶಿವಣ್ಣ ಕೊಂಡಾಡುತ್ತಲೆ ಇದ್ದರು. ಶಿವಣ್ಣನ ಡ್ಯಾನ್ಸ್ ನೋಡಿದಾಗೆಲ್ಲಾ ಅಪ್ಪು ಸೂಪರ್ ಅಣ್ಣ ಅಂತಿದ್ದರು. ಅಂಥ ಮುದ್ದು ತಮ್ಮನಿಗೆ ಶಿವಣ್ಣ ಡ್ಯಾನ್ಸ್ ಮಾಡದೆ ಇರುತ್ತಾರಾ? ಗಂಧದ ಗುಡಿಯ ಬೃಹತ್ ವೇದಿಕೆಯಲ್ಲಿ ಶಿವಣ್ಣ ಅದ್ಭುತ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

  ತಾಲಿಬಾನ್ ಹಾಡಿಗೆ ಶಿವಣ್ಣ ಹೆಜ್ಜೆ

  ತಾಲಿಬಾನ್ ಹಾಡಿಗೆ ಶಿವಣ್ಣ ಹೆಜ್ಜೆ

  ಅಪ್ಪು ನಟನಾಗಿ ಎಂಟ್ರಿಯಾಗುವುದಕ್ಕೂ ಮುನ್ನ ನಾಲ್ಕು ತಿಂಗಳ ಮಗುವಿನಿಂದಲೇ ನಟನೆಯನ್ನು ಆರಂಭಿಸಿದ್ದರು. ಆದರೆ ಪೂರ್ಣಪ್ರಮಾಣದಲ್ಲಿ ನಟನಾಗಿ ಬಂದದ್ದು ಮಾತ್ರ ಅಪ್ಪು ಸಿನಿಮಾ ಮೂಲಕ. ಅದರಲ್ಲೂ ಆ ಸಿನಿಮಾದಲ್ಲಿರುವ ತಾಲಿಬಾನ್ ಅಲ್ಲ ಅಲ್ಲ ಸಾಂಗ್ ಅಪ್ಪು ಹಾಕಿದ್ದ ಸ್ಟೆಪ್ ಎಲ್ಲರಿಗೂ ಈಗಲೂ ಸಿಕ್ಕಾಪಟ್ಟೆ ಇಷ್ಟವಾಗುವಂತ ಸ್ಟೆಪ್. ಅಂದಿನಿಂದ ಡ್ಯಾನ್ಸರ್‌ಗಳ ಫೇವರಿಟ್ ಹೀರೋ ಆಗಿಬಿಟ್ಟಿದ್ದರು ಅಪ್ಪು. ಅದಾದ ಮೇಲೆ ಅಪ್ಪುವಿನ ಡ್ಯಾನ್ಸ್‌ಗೆ ಸರಿಸಾಟಿ ಯಾರಿಲ್ಲ ಎಂಬುದು ಗೊತ್ತಾಗುತ್ತಾ ಹೋಗಿದ್ದು, ಆ ಹಾಡಿಗೆ ಶಿವಣ್ಣ ಇಂದು ಪುನೀತ ಪರ್ವ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದಾರೆ.

  ಅಪ್ಪು ಅಗಲಿದ ದಿನ ನೆನೆದ ಶಿವಣ್ಣ

  ಅಪ್ಪು ಅಗಲಿದ ದಿನ ನೆನೆದ ಶಿವಣ್ಣ

  ಇನ್ನು ಅದ್ಭುತ ಡ್ಯಾನ್ಸ್ ಮಾಡಿದ ಬಳಿಕ ಮಾತನಾಡಿದ ಶಿವಣ್ಣ, "ಈ ಸಮಾರಂಭದಲ್ಲಿ ಮಾತನಾಡುವುದು ಬಹಳ ಕಷ್ಟ ಇದೆ. ಈ ಒಂದು ವರ್ಷ ಹೇಗೆ ಹೋಯ್ತು ಎಂಬುದನ್ನು ನೆನೆಸಿಕೊಳ್ಳುವುದಕ್ಕೂ ಬಹಳ ದುಃಖ ಆಗುತ್ತೆ. ನಮಗೆ ಮಾತ್ರ ಅಲ್ಲ ಇಡೀ ಕರ್ನಾಟಕ ಜನತೆಗೂ ಇದೆ. ಬೇರೆ ಇಂಡಸ್ಟ್ರಿಯವರಿಗೂ ಇಷ್ಟೊಂದು ಪ್ರೀತಿ ಇದೆ. ನಮ್ಮ ದುಃಖದಲ್ಲಿ ನೀವೆಲ್ಲಾ ನೈತಿಕ ಬೆಂಬಲ ನೀಡಿದ್ದಕ್ಕೆ ಇಷ್ಟು ಸ್ಟ್ರೆಂಥ್‌ ಬಂದಿದೆ. ಇಲ್ಲ ಅಂದಿದ್ರೆ ಇನ್ನು ಕುಗ್ಗಿ ಹೋಗ್ತಾ ಇದ್ವಿ. ಕನ್ನಡಾಭಿಮಾನಿ ದೇವರುಗಳು ನಮ್ಮ ಜೊತೆಯಲ್ಲಿದ್ದರು. ಅವರಿಗೆ ಒಂದು ಥ್ಯಾಂಕ್ಸ್ ಹೇಳಬೇಕು" ಎಂದರು.

  ಶಿವಣ್ಣನಿಗೆ ಮಾತು ಕೊಟ್ಟು ಹೋಗಿದ್ದ ಅಪ್ಪು

  ಶಿವಣ್ಣನಿಗೆ ಮಾತು ಕೊಟ್ಟು ಹೋಗಿದ್ದ ಅಪ್ಪು

  ಅಪ್ಪು ಗಂಧದ ಗುಡಿ ಬಗ್ಗೆ ಬಹಳಷ್ಟು ಕನಸು ಕಂಡಿದ್ದವರು. ಆ ಡಾಕ್ಯೂ ಸಿನಿಮಾದ ಬಗ್ಗೆ ಅದಾಗಲೇ ಎಲ್ಲರಿಗೂ ಸಣ್ಣ ಸಣ್ಣ ಕ್ಲ್ಯೂ ಕೊಟ್ಟಿದ್ದರು. ಅದರಂತೆ ಶಿವಣ್ಣನಿಗೂ ಆ ಬಗ್ಗೆ ಹೇಳಿದ್ದರಂತೆ. ಈ ಬಗ್ಗೆ ಶಿವಣ್ಣ ಹೇಳಿದ್ದು ಹೀಗೆ, ಅಪ್ಪು ಡ್ರೀಮ್ ಒಂಥರ ಚೆಂದ. ಈ ರೀತಿಯ ಅಡ್ವೆಂಚರ್ ಅಂದ್ರೆ ತುಂಬಾ ಇಷ್ಟ. ಏನಾದರೂ ಮಾಡಿದರೂ ಯಾವಾಗಲೂ ನನ್ ಹತ್ತಿರ ಹೇಳುತ್ತಾ ಇದ್ದ. ಟ್ರೈಲರ್ ತೋರಿಸಬೇಕಾಗಿತ್ತು. ಆದರೆ ಅವತ್ತು ಇನ್ನೊಂದಿನ ಬರುತ್ತೀನಿ ಅಂತ ಹೇಳಿ ಹೋದವನು ಮತ್ತೆ ಬರಲೇ ಇಲ್ಲ. ನಾವೂ ಯಾವಾಗಲೂ ಅಪ್ಪುನಾ ಪ್ರೀತಿ ಮಾಡುತ್ತಲೇ ಇರುತ್ತೀವಿ ಎಂದಿದ್ದಾರೆ.

  ಅಪ್ಪು ಹುಟ್ಟುತ್ತಲೇ ಸೂಪರ್ ಸ್ಟಾರ್

  ಅಪ್ಪು ಹುಟ್ಟುತ್ತಲೇ ಸೂಪರ್ ಸ್ಟಾರ್

  ಯಾವಗಾಲೂ ಶಿವಣ್ಣ ನಿನ್ನ ಡ್ಯಾನ್ಸ್ ಚೆಂದ ಅಂತಾರೆ. ಆದರೆ ನಿಜವಾಗಲೂ ಅವನು ಡ್ಯಾನ್ಸ್ ಚೆನ್ನಾಗಿ ಮಾಡುತ್ತಿದ್ದ. ಆಕ್ಚುಲಿ ನಾನು ಅಪ್ಪು ಫ್ಯಾನ್. ಚಿಕ್ಕವನಿರುವಾಗಲೇ ಅವನ ಡ್ಯಾನ್ಸ್ ನೋಡುತ್ತಾ ಇದ್ವಿ. ಸ್ಕೂಲಿಗೆಲ್ಲಾ ಹೋಗುವಾಗ ಮೈಕೆಲ್ ಜಾನ್ಸನ್ ಸಾಂಗ್ ನೋಡಿದರೆ ಟಕ್ ಅಂತ ಅಲ್ಲಿನೇ ಡ್ಯಾನ್ಸ್ ಮಾಡುತ್ತಿದ್ದ. ಅವನು ಹುಟ್ಟುವಾಗಲೇ ಸೂಪರ್ ಸ್ಟಾರ್. ನಾಲ್ಕನೇ ತಿಂಗಳಿನಲ್ಲಿಯೇ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಮಾಡಿದ್ದ ಎಂದು ಶಿವಣ್ಣ ತನ್ನ ಮುದ್ದಿನ ತಮ್ಮನನ್ನು ಹಾಡಿ ಹೊಗಳಿದ್ದಾರೆ.

  English summary
  Gandhada Gudi Pre-Release Event: Shivarajkumar Dance About Taliban Alla Alla, Know More.
  Friday, October 21, 2022, 23:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X