For Quick Alerts
  ALLOW NOTIFICATIONS  
  For Daily Alerts

  ಗಂಧದಗುಡಿ ಪ್ರೀಮಿಯರ್ ಶೋನ ಎಷ್ಟು ಟಿಕೆಟ್ ಮಾರಾಟ, ಗಳಿಸಿದ್ದೆಷ್ಟು ಹಣ? ಈ ಥಿಯೇಟರ್‌ನ ಒಂದೇ ಶೋಗೆ ಲಕ್ಷ ಗಳಿಕೆ!

  |

  ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದಗುಡಿ ಡಾಕ್ಯುಮೆಂಟರಿ ಚಿತ್ರ ನಾಳೆ ( ಅಕ್ಟೋಬರ್ 28 ) ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಅಪ್ಪು ಅಭಿನಯದ ಅಂತಿಮ ಚಿತ್ರವಾಗಿರುವುದರಿಂದ ಗಂಧದಗುಡಿ ಚಿತ್ರ ವೀಕ್ಷಿಸಲು ಸಿನಿರಸಿಕರು ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

  ಇನ್ನು ಗಂಧದಗುಡಿ ನಾಳೆ ಬಿಡುಗಡೆಯಾಗುತ್ತಿದ್ದು, ಇಂದು ( ಅಕ್ಟೋಬರ್ 27 ) ಸಂಜೆ ಮತ್ತು ರಾತ್ರಿ ವೇಳೆಗೆ ಗಂಧದಗುಡಿ ಚಿತ್ರದ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನು ಕರ್ನಾಟಕದ ಹಲವು ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಆಯೋಜಿಸಲಾಗಿದೆ. ಇನ್ನು ಈ ಹಿಂದಿನ ಅಪ್ಪು ಅಭಿನಯದ ಚಿತ್ರಗಳ ಟಿಕೆಟ್ ಬುಕಿಂಗ್ ರೀತಿ ಗಂಧದಗುಡಿ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಬೇಗನೆ ತೆರೆದಿರಲಿಲ್ಲ. ಚಿತ್ರವನ್ನು ಬಿಡುಗಡೆ ದಿನ ನೇರವಾಗಿ ಪ್ರದರ್ಶಿಸುತ್ತಾರಾ ಅಥವಾ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನು ಆಯೋಜಿಸುತ್ತಾರಾ ಎಂಬ ಗೊಂದಲವೂ ಸಹ ಅಭಿಮಾನಿಗಳಲ್ಲಿತ್ತು.

  ಹೀಗೆ ಹಲವು ಪ್ರಶ್ನೆ ಹಾಗೂ ಕುತೂಹಲದಿಂದ ಕಾಯುತ್ತಿದ್ದ ಅಪ್ಪು ಅಭಿಮಾನಿಗಳಿಗೆ ಚಿತ್ರ ಬಿಡುಗಡೆಗೆ ಎರಡು ದಿನ ಬಾಕಿ ಇರುವಾಗ ಚಿತ್ರದ ಪ್ರೀಮಿಯರ್ ಶೋಗಳ ಅಡ್ವಾನ್ಸ್ ಬುಕ್ಕಿಂಗ್ ತೆರೆಯಲಾಯಿತು. ಟಿಕೆಟ್ ಖರೀದಿಗಾಗಿ ಕಾಯುತ್ತಿದ್ದ ಅಪ್ಪು ಅಭಿಮಾನಿಗಳು ನಿಮಿಷಗಳಲ್ಲಿಯೇ ಟಿಕೆಟ್ ಖರೀದಿಸಿದರು. ಪರಿಣಾಮ ಬೆಂಗಳೂರು ಹಾಗೂ ಮೈಸೂರಿನಲ್ಲಿ ಆಯೋಜಿಸಿರುವ ಎಲ್ಲಾ ಪ್ರೀಮಿಯರ್‌ ಪ್ರದರ್ಶನಗಳು ಸಹ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ. ಹಾಗಿದ್ದರೆ ಬೆಂಗಳೂರಿನಲ್ಲಿ ಗಂಧದಗುಡಿ ಚಿತ್ರದ ಒಟ್ಟು ಎಷ್ಟು ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳಿವೆ ಹಾಗೂ ಇದರಿಂದ ಬಂದ ಕಲೆಕ್ಷನ್ ಎಷ್ಟು ಎಂಬುದರ ಕುರಿತ ಮಾಹಿತಿ ಕೆಳಕಂಡಂತಿದೆ.

  ಬೆಂಗಳೂರಿನಲ್ಲಿ ಎಷ್ಟು ಪೇಯ್ಡ್ ಪ್ರೀಮಿಯರ್ ಪ್ರದರ್ಶನ, ಎಷ್ಟು ಟಿಕೆಟ್ ಸೇಲ್, ಬಂದ ಹಣವೆಷ್ಟು?

  ಬೆಂಗಳೂರಿನಲ್ಲಿ ಎಷ್ಟು ಪೇಯ್ಡ್ ಪ್ರೀಮಿಯರ್ ಪ್ರದರ್ಶನ, ಎಷ್ಟು ಟಿಕೆಟ್ ಸೇಲ್, ಬಂದ ಹಣವೆಷ್ಟು?

  ಇಂದು ( ಅಕ್ಟೋಬರ್ 27 ) ಗಂಧದಗುಡಿ ಚಿತ್ರದ ಒಟ್ಟು 29 ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಪೈಕಿ ಎಲ್ಲಾ ಪ್ರದರ್ಶನಗಳ ಎಲ್ಲಾ ಟಿಕೆಟ್ ಕೂಡ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ. ಈ 29 ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳ ಒಟ್ಟು 7124 ಟಿಕೆಟ್ ಮಾರಾಟವಾಗಿದೆ. ಹೀಗೆ ಬೆಂಗಳೂರಿನ ಎಲ್ಲ ಪ್ರೀಮಿಯರ್ ಪ್ರದರ್ಶನಗಳು ಸೋಲ್ಡ್ ಔಟ್ ಆಗಿದ್ದು 29 ಪ್ರದರ್ಶನಗಳಿಂದ ಒಟ್ಟು 18,40,000 ರೂಪಾಯಿ ಕಲೆಕ್ಷನ್ ಆಗಿದೆ. ಇದು ಬೆಂಗಳೂರಿನ ಪ್ರೀಮಿಯರ್ ಶೋ ಟ್ರೆಂಡ್ ಇತಿಹಾಸದಲ್ಲಿಯೇ ದಾಖಲೆಯಾಗಿದೆ.

  ಒಂದೇ ಶೋನಲ್ಲಿ ಲಕ್ಷ ಗಳಿಕೆ

  ಒಂದೇ ಶೋನಲ್ಲಿ ಲಕ್ಷ ಗಳಿಕೆ

  ಇನ್ನು ಬೆಂಗಳೂರಿನ ಸಿಗ್ಮಾ ಮಾಲ್‌ನ ಫನ್ ಸಿನಿಮಾಸ್ ಚಿತ್ರಮಂದಿರದಲ್ಲಿ ಗಂಧದ ಗುಡಿಗೆ 1 ಪೇಯ್ಡ್ ಪ್ರೀಮಿಯರ್ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿದ್ದು ಬರೋಬ್ಬರಿ 1,05,000 ರೂಪಾಯಿ ಕಲೆಕ್ಷನ್ ಆಗಿದೆ. ಇದು ಬೆಂಗಳೂರಿನ ಪ್ರೀಮಿಯರ್ ಶೋಗಳಲ್ಲಿ ಆದ ಅತಿಹೆಚ್ಚು ಮೊತ್ತದ ಕಲೆಕ್ಷನ್ ಆಗಿದೆ.

  ಎಲ್ಲೆಲ್ಲಿ ಎಷ್ಟು ಪ್ರೀಮಿಯರ್ ಪ್ರದರ್ಶನಗಳು?

  ಎಲ್ಲೆಲ್ಲಿ ಎಷ್ಟು ಪ್ರೀಮಿಯರ್ ಪ್ರದರ್ಶನಗಳು?

  ರಾಜ್ಯಾದ್ಯಂತ ಯಾವ ನಗರಗಳಲ್ಲಿ ಎಷ್ಟು ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳು ಗಂಧದಗುಡಿಗಾಗಿ ಆಯೋಜನೆಗೊಂಡಿವೆ ಎಂಬ ಪಟ್ಟಿ ಇಲ್ಲಿದೆ.

  ಬೆಂಗಳೂರು : 29

  ಮೈಸೂರು : 4

  ಹುಬ್ಬಳ್ಳಿ : 2

  ಮಂಗಳೂರು : 4

  ಮಣಿಪಾಲ : 2

  ಕಲಬುರ್ಗಿ, ಶಿವಮೊಗ್ಗ ಹಾಗೂ ತುಮಕೂರು ತಲಾ ಒಂದೊಂದು ಶೋ

  English summary
  Gandhada Gudi premiere show collection report; More than 18 lakh gross in Bengaluru
  Thursday, October 27, 2022, 15:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X