»   » ಸ್ವಾತಂತ್ರೋತ್ಸವ ದಿನದಂದು 'ಗಾಂಧೀಜಿ ಕನಸು' ನನಸು

ಸ್ವಾತಂತ್ರೋತ್ಸವ ದಿನದಂದು 'ಗಾಂಧೀಜಿ ಕನಸು' ನನಸು

Posted By:
Subscribe to Filmibeat Kannada

ಗ್ರಾಮ ನೈರ್ಮಲ್ಯ, ಗ್ರಾಮೀಣಾಭಿವೃದ್ಧಿ, ರಾಷ್ಟ್ರಪಿತ ಮಹಾತ್ಮಾಗಾಂಧಿ ಕಂಡ ಕನಸುಗಳಲ್ಲೊಂದು. ಗ್ರಾಮಗಳು ಅಭಿವೃದ್ಧಿಯಾಗದ ಹೊರತು ದೇಶ ಪ್ರಗತಿ ಹೊಂದಲಾರದು. ಈ ಬಗ್ಗೆ ಜನರು ಜಾಗೃತರಾಗಬೇಕು ಎಂಬ ಸಂದೇಶ ಹೊತ್ತ ಚಿತ್ರ 'ಗಾಂಧೀಜಿ ಕನಸು' ಇದೇ ತಿಂಗಳ ಆಗಸ್ಟ್ 15ರ ಸ್ವಾತಂತ್ರೋತ್ಸವದಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಶ್ರೀ ಚೌಡೇಶ್ವರಿ ಫಿಲಂನ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರಮೇಶ್ ಎಸ್. ಪರವಿನಾಯ್ಕರ್ ಕಥೆ, ಚಿತ್ರಕಥೆ ಬರೆದು ನಿರ್ಮಾಣದ ಜೊತೆ ನಿರ್ದೇಶಿಸುತ್ತಿದ್ದಾರೆ. ಆರ್.ಗಿರಿ ಛಾಯಾಗ್ರಹಣ, ಗುರುರಾಜ ಹೊಸಕೋಟೆ ಸಂಗೀತ, ಮನು ಸಂಭಾಷಣೆ, ಸಿದ್ದು ನರಗುಂದ, ಗುರುರಾಜ ಹೊಸಕೋಟೆ, ಸಾಹಿತ್ಯ, ಮದನಹರಿಣಿ ನೃತ್ಯ ನಿರ್ದೇಶನ, ಈಶ್ವರ್ ಸಂಕಲನ ಈ ಚಿತ್ರಕ್ಕಿದೆ.

Gandhiji Kanasu releases on 15th August

ಈ ಹಿಂದೆ 7-8 ಚಿತ್ರಗಳಲ್ಲಿ ಅಭಿನಯಿಸಿರುವ ರಮೇಶ್.ಎಸ್.ಪರವಿ ನಾಯ್ಕರ್ ನಿರ್ಮಾಣದ ಜೊತೆ ನಿರ್ದೇಶನ ಮಾಡಿರುವ ಚಿತ್ರ ಗಾಂಧೀಜಿ ಕನಸು. ಗಾಂಧೀಜಿಯವರ ಚಳವಳಿ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆದಂಥ ನೈಜ ಘಟನೆಗಳನ್ನು ಈ ಚಿತ್ರಕ್ಕೆ ಕಥಾ ವಸ್ತುವನ್ನಾಗಿ ಬಳಸಿಕೊಳ್ಳಲಾಗಿದೆ.

ರಮೇಶ್ ರೂಪಿತ, ಎಂ.ಎನ್. ಲಕ್ಷ್ಮಿದೇವಿ, ಬ್ಯಾಂಕ್ ಜನಾರ್ಧನ್, ಹೊನ್ನಾವಳ್ಳಿ ಕೃಷ್ಣ, ರೇಖಾದಾಸ್, ಎಂ.ಎಸ್. ಉಮೇಶ್, ಸಚಿವರುಗಳಾದ ಎಸ್. ಆರ್. ಪಾಟೀಲ್, ಹೆಚ್.ಕೆ. ಪಾಟೀಲ್, ಮಾಜಿ ಸಚಿವ ಆರ್. ತಿಮ್ಮಾಪುರ್ ಹಾಗೂ ಎಸ್.ಬಿ. ನಂಜಯನ್ ಮಠ್ ತಾರಾ ಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Kannada movie Gandhiji Kanasu (Gandhi Dreams) releases on 15th August. The movie is based on Toilet! and as well as on real incidents happened in North Karnataka. The movie is directed by Ramesh.s, along with playing he directed the movie as well. Sandalwood cute actress Roopika is playing lady lead in the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada