»   » ಈ ಈಯರ್ ಎಂಡ್ ಕಳೀರಿ ಖುಷಿ ಖುಷಿಯಾಗಿ

ಈ ಈಯರ್ ಎಂಡ್ ಕಳೀರಿ ಖುಷಿ ಖುಷಿಯಾಗಿ

By: ಜೀವನರಸಿಕ
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್-ಗೋಲ್ಡನ್ ಕ್ವೀನ್ ಅಮೂಲ್ಯಾ ಜೋಡಿಯ 'ಶ್ರಾವಣಿ ಸುಬ್ರಹ್ಮಣ್ಯ' ನೋಡಿ ಸೂಪರ್ ಅಂದಿದ್ದವರಿಗೆ ಈ ಸೂಪರ್ ಹಿಟ್ ಜೋಡಿಯನ್ನ ಮತ್ತೆ ತೆರೆಮೇಲೆ ನೋಡೋ ಅವಕಾಶ ಬೇಗನೆ ಬರ್ತಿದೆ.

ಗಣೇಶ್ ಮುಂದಿನ ಚಿತ್ರ 'ಖುಷಿ ಖುಷಿಯಾಗಿ' ಡಿಸೆಂಬರ್ 21ಕ್ಕೆ ಥಿಯೇಟರ್ ಗೆ ಲಗ್ಗೆ ಇಡೋ ಸುದ್ದಿ ಬಂದಿದೆ. ಚಿತ್ರ ಸೆನ್ಸಾರ್ ಮಂಡಳಿಯ ಮುಂದಿದ್ದು ಸೆನ್ಸಾರ್ ಮುಗಿಯೋದನ್ನ ಚಿತ್ರತಂಡ ಕಾಯ್ತಿದೆ, ತೆಲುಗಿನ 'ಗುಂಡೆಜಾರಿ ಗಲ್ಲಂತಯ್ಯಿಂದಿ' ಚಿತ್ರದ ರೀಮೇಕ್ ಈ 'ಖುಷಿ ಖುಷಿಯಲಿ'. [ಖುಷಿ ಖುಷಿಯಾಗಿ ಆಡಿಯೋ ವಿಮರ್ಶೆ]

Ganesh-Amoolya Khushi Khushiyagi on 21st December

ತೆಲುಗಿನಲ್ಲಿ ನಿತ್ಯಾ ಮೆನನ್ ಮಾಡಿದ್ದ ಪಾತ್ರವನ್ನ ಕನ್ನಡದಲ್ಲಿ ಅಮೂಲ್ಯಾ ಮಾಡ್ತಿದ್ದು ಗೊಲ್ಡನ್ ಸ್ಟಾರ್ ಲವರ್ ಬಾಯ್ ನಿತಿನ್ ಪಾತ್ರದಲ್ಲಿ ಮಸ್ತ್ ಮಜಾ ಕೊಡಲಿದ್ದಾರೆ. 'ಚೆಲುವಿನ ಚಿತ್ತಾರ'ದ ನಂತ್ರ ಸತತ ಯಶಸ್ಸುಗಳಿಂದ ಮುನ್ನುಗ್ತಿರೋ ಗಣೇಶ್-ಅಮೂಲ್ಯಾ ಜೋಡಿಯ ಮತ್ತೊಂದು ಅದಷ್ಟ ಪರೀಕ್ಷೆ ಈ ಈಯರ್ ಎಂಡ್ ನಲ್ಲಿ ನಡೆಯೋ ಸುದ್ದಿ ಬಂದಿದೆ.

ಈ ಅದೃಷ್ಟ ಪರೀಕ್ಷೆಯಲ್ಲಿ ಯಶಸ್ವಿ ಜೋಡಿ ಮೇಲೆ ನಿರೀಕ್ಷೆ ಹೆಚ್ಚಿದೆ ಆದ್ರೆ ಗಣೇಶ್ ಅಮೂಲ್ಯಾ ಅಭಿಮಾನಿಗಳಂತೂ ಈಯರ್ ಎಂಡ್ ನ ಖುಷಿ ಖುಷಿಯಾಗಿ ಕಳೆಯೋ ಸಮಯ ಬಂದಿದೆ. ಮೂಲ ಚಿತ್ರಕ್ಕೆ ಸಂಗೀತ ನೀಡಿದ್ದ ಅನೂಪ್ ರುಬೆನ್ಸ್ ಈ ಚಿತ್ರದ ಮೂಲಕ ಕನ್ನಡಕ್ಕೂ ಅಡಿಯಿಡುತ್ತಿದ್ದಾರೆ.

ಅಮೂಲ್ ಬೇಬಿ ಅಮೂಲ್ಯಾ ಮತ್ತು ಆಂಧ್ರ ಬೆಡಗಿ ನಂದಿನಿ ರೈ ಚಿತ್ರದ ನಾಯಕಿಯರು. ಈ ಹಿಂದೆ ‘ಜಂಬೂಸವಾರಿ' ಚಿತ್ರ ನಿರ್ಮಿಸಿದ್ದ ತೆಲುಗಿನ ನಿರ್ಮಾಪಕ ಹರಿಪ್ರಸಾದ್ ರಾವ್ ಈ ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ. ತೆಲುಗು ಚಿತ್ರ ಹಾಡುಗಳ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು.

English summary
Ganesh and Amulya along with Nandini Rai lead movie Khushi Khushiyagi slated for release on 21st December, 2015. The film is an official remake of the Telugu blockbuster film Gunde Jaari Gallanthayyinde (2013). Spend this year end 'Khushi Khushiyagi'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada