For Quick Alerts
  ALLOW NOTIFICATIONS  
  For Daily Alerts

  ಮತದಾನ ಮಾಡಿದ ಆರ್ ಆರ್ ನಗರ ಕ್ಷೇತ್ರದ ಸ್ಟಾರ್‌ ಗಳು

  By Pavithra
  |

  Recommended Video

  ರಾಜರಾಜೇಶ್ವರಿ ನಗರದಲ್ಲಿ ಸ್ಯಾಂಡಲ್ವುಡ್ ಸ್ಟಾರ್ಸ್ ವೋಟ್ ..! | Filmibeat Kannada

  ನಕಲಿ ಗುರುತಿನ ಚೀಟಿ ತಯಾರು ಪ್ರಕರಣದ ಹಿನ್ನಲೆಯಲ್ಲಿ ಆರ್ ಆರ್ ನಗರದ ಚುನಾವಣೆಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿತ್ತು. ಇಂದು ಆರ್ ಆರ್ ನಗರ ಕ್ಷೇತ್ರದ ಚುನಾವಣೆ ಬೆಳಗ್ಗಿನಿಂದ ನಡೆಯುತ್ತಿದೆ.

  ರಾಜರಾಜೇಶ್ವರಿ ನಗರದಲ್ಲಿಯೂ ಸಾಕಷ್ಟು ಸಿನಿಮಾ ಕಲಾವಿದರು ವಾಸವಾಗಿದ್ದು ಮೇ 12 ರಂದು ಮತದಾನ ಮಾಡಲು ಸಾಧ್ಯವಾಗದವರು ಇಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

  ಜಗ್ಗೇಶ್ ಸೋತಿದ್ದು ಯಾಕೆ? ಇಲ್ಲಿದೆ ಐದು ಮುಖ್ಯ ಕಾರಣಗಳುಜಗ್ಗೇಶ್ ಸೋತಿದ್ದು ಯಾಕೆ? ಇಲ್ಲಿದೆ ಐದು ಮುಖ್ಯ ಕಾರಣಗಳು

  ಹಾಗಾದರೆ ಯಾವ ಕಲಾವಿದರು ಆರ್ ಆರ್ ನಗರದ ಕ್ಷೇತ್ರದಲ್ಲಿ ಮತದಾನ ಮಾಡಿದರು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಫೋಟೋ ಸ್ಲೈಡ್ ಗಳ ಮೂಲಕ ಓದಿ

  ಫ್ಯಾಮಿಲಿ ಜೊತೆ ಮತದಾನ ಮಾಡಿದ ಅಮೂಲ್ಯ

  ಫ್ಯಾಮಿಲಿ ಜೊತೆ ಮತದಾನ ಮಾಡಿದ ಅಮೂಲ್ಯ

  ನಟಿ ಅಮೂಲ್ಯ ಅವರ ಮಾವ ಆರ್ ಆರ್ ನಗರದಿಂದ ಜೆ ಡಿ ಎಸ್ ಅಭ್ಯರ್ಥಿಯಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ನಟಿ ಅಮೂಲ್ಯ ಇಂದು ತಮ್ಮ ಕುಟುಂಬದ ಜೊತೆಯಲ್ಲಿ ಮತದಾನ ಮಾಡಿ ಬಂದಿದ್ದಾರೆ.

  ಮತದಾನ ಮಾಡಿದ ಮಾಳವಿಕಾ-ಅವಿನಾಶ್

  ಮತದಾನ ಮಾಡಿದ ಮಾಳವಿಕಾ-ಅವಿನಾಶ್

  ಸಿನಿಮಾ ಕಲಾವಿದೆ ಹಾಗೂ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ ನಟಿ ಮಾಳವಿಕಾ, ಪತಿ ಅವಿನಾಶ್ ಇಬ್ಬರು ಮತದಾನ ಮಾಡಿದ್ದಾರೆ. ನಂತರ ಇಬ್ಬರು ಜೊತೆಗಿರುವ ಫೋಟೋ ತೆಗೆದುಕೊಂಡು ಟ್ವಿಟ್ಟರ್ ನಲ್ಲಿ ನಮ್ಮ ಕೆಲಸವನ್ನು ಮಾಡಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

  ಮತದಾನ ಮಾಡಿದ ಗೋಲ್ಡನ್ ಸ್ಟಾರ್

  ಮತದಾನ ಮಾಡಿದ ಗೋಲ್ಡನ್ ಸ್ಟಾರ್

  ಆರ್ ಆರ್ ನಗರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ ಆಗಿದ್ದ ನಿರ್ಮಾಪಕಿ ಶಿಲ್ಪಾ ಗಣೇಶ್ ಹಾಗೂ ನಟ ಗಣೇಶ್ ಇಬ್ಬರು ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಮತದಾನ ಮಾಡಿದ್ದಾರೆ.

  ವೋಟ್ ಮಾಡಿದ ಕಾವ್ಯ ಶಾಸ್ತ್ರಿ

  ವೋಟ್ ಮಾಡಿದ ಕಾವ್ಯ ಶಾಸ್ತ್ರಿ

  ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಕಾವ್ಯ ಶಾಸ್ತ್ರಿ ಕೂಡ ಇಂದು ತಮ್ಮ ಹಕ್ಕನ್ನು ಮತದಾನ ಮಾಡುವ ಮೂಲಕ ಚಲಾಯಿಸಿದ್ದಾರೆ.

  English summary
  Kannada cinema artists Ganesh, Amulya, Kavya sha, malavika avinash, avinash and many others have voted today in the RR area.
  Monday, May 28, 2018, 15:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X