For Quick Alerts
  ALLOW NOTIFICATIONS  
  For Daily Alerts

  ವೇದಾ ಪ್ರಿರಿಲೀಸ್ ಕಾರ್ಯಕ್ರಮದ ಗೆಸ್ಟ್ ಲಿಸ್ಟ್ ಇಲ್ಲಿದೆ; ಶಿವಣ್ಣನಿಗಾಗಿ ವೇದಿಕೆ ಏರಲಿದ್ದಾರೆ ಇಬ್ಬರು ಸ್ಟಾರ್ ನಟರು

  |

  ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ಹಾಗೂ ಎ ಹರ್ಷ ಕಾಂಬಿನೇಶನ್‌ನ ನಾಲ್ಕನೇ ಚಿತ್ರ ವೇದಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇನ್ನು ಚಿತ್ರ ಇದೇ ಡಿಸೆಂಬರ್ 23ರಂದು ತೆರೆಗೆ ಬರಲಿದ್ದು, ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಚಿತ್ರತಂಡ ಹಾಡುಗಳನ್ನು ಬಿಡುಗಡೆಗೊಳಿಸುವ ಮೂಲಕ ಹಾಗೂ ಪ್ರಿ ರಿಲೀಸ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಚಿತ್ರದ ಹೈಪ್ ಹೆಚ್ಚಿಸುವ ಕೆಲಸಕ್ಕೆ ಕೈಹಾಕಿದೆ.

  ಇನ್ನು ಮೊದಲಿಗೆ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣ್ಲದಲ್ಲಿ ಮೊದಲ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ವೇದಾ ಚಿತ್ರತಂಡ ಡಿಸೆಂಬರ್ 10ರಂದು ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಎರಡನೇ ಪ್ರಿ ರಿಲೀಸ್ ಇವೆಂಟ್ ಆಯೋಜಿಸಿತ್ತು. ಹೀಗೆ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಕರ್ನಾಟದಲ್ಲಿ ಸದ್ದು ಮಾಡಿದ್ದ ವೇದಾ ಚಿತ್ರತಂಡ ಈಗ ಉತ್ತರ ಕರ್ನಾಟದಲ್ಲೂ ಸಹ ಸದ್ದು ಮಾಡಲು ಸಿದ್ಧವಾಗಿದೆ.

  ಹೌದು, ಇದೇ ತಿಂಗಳ 14ರಂದು ಹುಬ್ಬಳ್ಳಿ ನಗರದ ರೈಲ್ವೇ ಮೈದಾನದಲ್ಲಿ ಸಂಜೆ 5.30ಕ್ಕೆ ವೇದಾ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಕರೆ ನೀಡಿದೆ ಚಿತ್ರತಂಡ. ಇನ್ನು ಸಿನಿಮಾ ಕಾರ್ಯಕ್ರಮಗಳೆಂದರೆ ಜಮಾಯಿಸುವ ಹುಬ್ಬಳ್ಳಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಮೆರುಗು ಹೆಚ್ಚಿಸುವ ಸಲುವಾಗಿ ವೇದಾ ಚಿತ್ರತಂಡ ಹಲವಾರು ನಟ ಹಾಗೂ ನಟಿಯರನ್ನು ಈ ಕಾರ್ಯಕ್ರಮಕ್ಕೆ ಅತಿಥಿಗಳನ್ನಾಗಿ ಆಹ್ವಾನಿಸಿದ್ದು, ಅದರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

  ಶಿವಣ್ಣನಿಗಾಗಿ ವೇದಿಕೆ ಏರಲಿದ್ದಾರೆ ಇಬ್ಬರು ಸ್ಟಾರ್ಸ್

  ಶಿವಣ್ಣನಿಗಾಗಿ ವೇದಿಕೆ ಏರಲಿದ್ದಾರೆ ಇಬ್ಬರು ಸ್ಟಾರ್ಸ್

  ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಶಿವರಾಜ್‌ಕುಮಾರ್ ಅಭಿನಯದ ವೇದಾ ಚಿತ್ರದ ಹುಬ್ಬಳ್ಳಿ ಪ್ರಿ ರಿಲೀಸ್ ವೇದಿಕೆಯನ್ನೇರಿ ಮಾತನಾಡಲಿದ್ದಾರೆ. ಗಣೇಶ್ ಹಾಗೂ ಧೃವ ಸರ್ಜಾ ಒಂದೇ ವೇದಿಕೆ ಹಂಚಿಕೊಂಡಿದ್ದು ಬಲು ಅಪರೂಪ ಎಂದೇ ಹೇಳಬಹುದಾಗಿದ್ದು, ಈ ಸ್ಟಾರ್ ಜೋಡಿ ಶಿವಣ್ಣನಿಗಾಗಿ ಈ ಬಾರಿ ವೇದಿಕೆ ಹಂಚಿಕೊಳ್ಳಲಿದೆ.

  ವೇದಾ ಪ್ರಿ ರಿಲೀಸ್ ಕಾರ್ಯಕ್ರಮದ ಅತಿಥಿಗಳ ಪಟ್ಟಿ

  ವೇದಾ ಪ್ರಿ ರಿಲೀಸ್ ಕಾರ್ಯಕ್ರಮದ ಅತಿಥಿಗಳ ಪಟ್ಟಿ

  ಹುಬ್ಬಳ್ಳಿಯಲ್ಲಿ ನಡೆಯಲಿರುವ ವೇದಾ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಅತಿಥಿಗಳ ಪಟ್ಟಿಯನ್ನು ವೇದಾ ಚಿತ್ರತಂಡ ಬಿಡುಗಡೆಗೊಳಿಸಿದ್ದು, ಆ ಪಟ್ಟಿ ಹೀಗಿದೆ: ಗೋಲ್ಡನ್ ಸ್ಟಾರ್ ಗಣೇಶ್, ಆಕ್ಷನ್ ಪ್ರಿನ್ಸ್ ಧೃವ ಸರ್ಜಾ, ಅರ್ಜುನ್ ಜನ್ಯಾ, ನಿರ್ದೇಶಕ ಎ ಹರ್ಷ, ಉಮಾಶ್ರೀ, ಕುರಿ ಪ್ರತಾಪ್, ಘಾನವಿ ಲಕ್ಷ್ಮಣ್ ಹಾಗೂ ಸಪ್ತಮಿ ಗೌಡ.

  ಹಾಡುಗಳ ಸದ್ದು

  ಹಾಡುಗಳ ಸದ್ದು

  ಒಂದೆಡೆ ಪ್ರಿ ರಿಲೀಸ್ ಕಾರ್ಯಕ್ರಮಗಳ ಮೂಲಕ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ವೇದಾ ಚಿತ್ರತಂಡ ಯುಟ್ಯೂಬ್‌ನಲ್ಲಿ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಸದ್ದು ಮಾಡುತ್ತಿದೆ. ವೇದಾ ಚಿತ್ರತಂಡ ಬಿಡುಗಡೆಗೊಳಿಸಿದ ಮೊದಲ ಹಾಡು 'ಗಿಲ್ಲಕ್ಕೋ ಶಿವ' ಹಿಟ್ ಲಿಸ್ಟ್ ಸೇರಿದ್ದು, ನಂತರ ಬಿಡುಗಡೆಗೊಂಡಿರುವ 'ಪುಷ್ಪ ಪುಷ್ಪ' ಹಾಡು ಸಹ ಸದ್ದು ಮಾಡುತ್ತಿದೆ. ಇನ್ನು ಪುಷ್ಪ ಹಾಡಿಗೆ ಶಿವಣ್ಣ ದನಿ ನೀಡಿರುವುದು ವಿಶೇಷವಾಗಿದೆ.

  English summary
  Ganesh and Dhruva Sarja to grace the Vedha pre release event as guests at Hubli. Read on
  Monday, December 12, 2022, 20:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X