»   » 'ಇಟಲಿ' ದಿನಪತ್ರಿಕೆಯಲ್ಲಿ ಗಣೇಶ್-ರಾಧಿಕಾ ಪಂಡಿತ್ ಸುದ್ದಿ!

'ಇಟಲಿ' ದಿನಪತ್ರಿಕೆಯಲ್ಲಿ ಗಣೇಶ್-ರಾಧಿಕಾ ಪಂಡಿತ್ ಸುದ್ದಿ!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಟಾಪ್ ತಾರೆಯರಲ್ಲಿ ಒಬ್ಬರಾದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಧಿಕಾ ಪಂಡಿತ್ ಬರೀ ಕರ್ನಾಟಕದ ದಿನಪತ್ರಿಕೆಗಳಲ್ಲಿ ಮಾತ್ರ ಸುದ್ದಿ ಮಾಡುತ್ತಿದ್ದಾರೆ ಅಂದುಕೊಳ್ಳಬೇಡಿ. ಇಟಲಿ ನ್ಯೂಸ್ ಪೇಪರ್ ಗಳಲ್ಲೂ ಗಣೇಶ್ ಮತ್ತು ರಾಧಿಕಾ ಪಂಡಿತ್ ನ್ಯೂಸ್ ಮಾಡಿದ್ದಾರೆ. [ಗೋಲ್ಡನ್ ಸ್ಟಾರ್ ಗಣೇಶ್ ಇಟಲಿಯಲ್ಲಿ ಏನ್ ಮಾಡ್ತಿದ್ದಾರೆ?]

ಹಾಗಂತ ಇಬ್ಬರೂ ಕಾಂಟ್ರವರ್ಸಿಯಲ್ಲಿ ಸಿಲುಕಿಕೊಂಡಿಲ್ಲ. ಬದಲಾಗಿ ತಮ್ಮ ಮುಂದಿನ ಚಿತ್ರ 'ZOOಮ್' ನಿಂದಾಗಿ ಇಟಲಿಯ ದಿನಪ್ರತಿಕೆಯೊಂದರಲ್ಲಿ ಸುದ್ದಿ ಆಗಿದ್ದಾರೆ. ವಾರಗಳಿಂದಲೂ ಇಟಲಿಯ ಬೀದಿ ಬೀದಿಗಳಲ್ಲಿ ಗಣೇಶ್ ಮತ್ತು ರಾಧಿಕಾ ಪಂಡಿತ್ ಜೋಡಿಯಾಗಿ ಅಭಿನಯಿಸುತ್ತಿರುವ 'ZOOಮ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ganesh radhika pandit

ಚಿತ್ರೀಕರಣ ಸಂದರ್ಭದ ತೆಗೆದ ಫೋಟೋ ಇಟಲಿಯ ಪ್ರಸಿದ್ಧ 'IL TIRRENO' ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದನ್ನ ಕಂಡ ಗಣೇಶ್ ಖುಷಿಯಿಂದ ಟ್ವೀಟ್ ಮಾಡಿದ್ದಾರೆ. [ಈ ಜೋಡಿ ಯಾರು ಗೊತ್ತಾಯ್ತಾ..? 'ZOOಮ್' ಮಾಡಿ ನೋಡಿ...]

ಹೀಗೆ ವಿದೇಶದಲ್ಲೂ ಸದ್ದು ಮಾಡುತ್ತಿರುವ 'ZOOಮ್' ಚಿತ್ರಕ್ಕೆ ಪ್ರಶಾಂತ್ ರಾಜ್ ನಿರ್ದೇಶಕ. ವಿದೇಶಿ ಪತ್ರಿಕೆಗಳಲ್ಲಿ ಗಣಿ ಮತ್ತು ರಾಧಿಕಾ ಮಿಂಚಿದ್ದಾರೆ ಅಂದ್ರೆ, ಅದಕ್ಕೆ 'ZOOಮ್' ಮ್ಯಾಜಿಕ್ ಕಾರಣ.

English summary
Golden Star Ganesh and Radhika Pandit have made news in Italy News Paper called 'IL TIRRENO'. Both were in Italy for the shooting of Prashanth Raj directorial 'Zoom'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada