»   » ಗೋಲ್ಡನ್ ಸ್ಟಾರ್ ಗಣೇಶ್ ಇಟಲಿಯಲ್ಲಿ ಏನ್ ಮಾಡ್ತಿದ್ದಾರೆ?

ಗೋಲ್ಡನ್ ಸ್ಟಾರ್ ಗಣೇಶ್ ಇಟಲಿಯಲ್ಲಿ ಏನ್ ಮಾಡ್ತಿದ್ದಾರೆ?

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಈಗ ಎಲ್ಲಿದ್ದಾರೆ? ಇಟಲಿಯಲ್ಲಿದ್ದಾರೆ. ಅಲ್ಲಿ ಏನ್ ಮಾಡ್ತಾಯಿದ್ದಾರೆ? ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಜೊತೆ ರೋಮ್ಯಾನ್ಸ್ ಮಾಡ್ತಾ ಇದ್ದಾರೆ.! ಅರೇ..ಗಾಬರಿ ಆಗ್ಬಿಟ್ರಾ, ನಾವ್ ಹೇಳ್ತಿರೋದು ರೀಲ್ ಸುದ್ದಿ ಮಾತ್ರ.

ಇದೇ ಮೊದಲ ಬಾರಿಗೆ ಗಣೇಶ್ ಮತ್ತು ರಾಧಿಕಾ ಪಂಡಿತ್ ಜೋಡಿಯಾಗಿರುವ ಚಿತ್ರ 'ZOOಮ್'. ಈ ಜೋಡಿ ಇಟಿಲಿಯಲ್ಲಿ ರೋಮ್ಯಾನ್ಸ್ ಮಾಡ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ 'ZOOಮ್' ಚಿತ್ರತಂಡ ಸಾಂಗ್ ಶೂಟಿಂಗ್ ಅಂತ ಇಟಲಿಗೆ ತೆರಳಿದೆ. [ಫುಲ್ 'ZOOಮ್' ನಲ್ಲಿ ಕಾಶೀನಾಥ್ ಮತ್ತೆ ಎಂಟ್ರಿ]

ganesh-and-radhika-pandit-starrer-zoom-song-shoot-in-italy

ಕಳೆದ ವರ್ಷ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾಂಗ್ ರೆಕಾರ್ಡಿಂಗ್ ನಡೆಸಿದ 'ZOOಮ್' ಚಿತ್ರತಂಡ ಈಗ ಹಾಡಿನ ಚಿತ್ರೀಕರಣದಲ್ಲಿ ಬಿಜಿಯಾಗಿದೆ. [ಈ ಜೋಡಿ ಯಾರು ಗೊತ್ತಾಯ್ತಾ..? 'ZOOಮ್' ಮಾಡಿ ನೋಡಿ...]

ಟಾಲಿವುಡ್ ಹಿಟ್ ಮ್ಯೂಸಿಕ್ ಡೈರೆಕ್ಟರ್ ಎಸ್.ಎಸ್.ಥಮನ್ ಸಂಗೀತ ಸಂಯೋಜಿಸಿರುವ ಹಾಡುಗಳಿಗೆ ಗಣೇಶ್ ಮತ್ತು ರಾಧಿಕಾ ಪಂಡಿತ್ ಇಟಲಿ ಬೀದಿಗಳಲ್ಲಿ ಡ್ಯುಯೆಟ್ ಹಾಡುತ್ತಿದ್ದಾರೆ. 'ಲವ್ ಗುರು' ಖ್ಯಾತಿಯ ಪ್ರಶಾಂತ್ ರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ganesh-and-radhika-pandit-starrer-zoom-song-shoot-in-italy

ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ನ ಕಂಡು ಗಣೇಶ್ ಮತ್ತು ರಾಧಿಕಾ ಪಂಡಿತ್ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. 'ಚೆಲುವಿನ ಚಿತ್ತಾರ'ದ ನಾಯಕನಿಗೆ 'ZOOಮ್' ಸಕ್ಸಸ್ ತಂದುಕೊಡುವಲ್ಲಿ ಯಶಸ್ವಿಯಾಗುತ್ತಾ ಅಂತ ಚಿತ್ರ ಬಿಡುಗಡೆಯಾಗುವವರೆಗೂ ಕಾದುನೋಡಬೇಕಿದೆ.

English summary
Golden Star Ganesh and Radhika Pandit starrer Kannada Movie 'Zoom' song shooting in Italy. The movie is directed by Prashanth Raj of 'Love Guru' fame.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada