For Quick Alerts
  ALLOW NOTIFICATIONS  
  For Daily Alerts

  ಗಣೇಶ್ ಮತ್ತು ರಶ್ಮಿಕಾ 'ಚಮಕ್'ಗೆ 3 ವರ್ಷದ ಸಂಭ್ರಮ

  By ಫಿಲ್ಮ್ ಡೆಸ್ಕ್
  |

  ಗೋಲ್ಡನ್ ಗಣೇಶ್ ಪಾಲಿಗೆ ಡಿಸೆಂಬರ್ 29 ಲಕ್ಕಿ ದಿನ. ಗಣೇಶ್ ಸಿನಿಮಾ ಜೀವನದ ದಿಕ್ಕನ್ನು ಬದಲಾಯಿಸಿದ ದಿನ, ಸ್ಟಾರ್ ಆಗಿ ಹೊರಹೊಮ್ಮಿದ ದಿನವಿದು. ಹೌದು, ಗಣೇಶ್ ನಟನೆಯ ಸೂಪರ್ ಹಿಟ್ ಮುಂಗಾರು ಮಳೆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 14 ವರ್ಷಗಳು ಕಳೆದಿದೆ.

  ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಎಬ್ಬಿಸಿದ ಮುಂಗಾರು ಮಳೆ ಬಿಡುಗೆಯಾದ ದಿನ ಎನ್ನುವ ಸಂತಸವೊಂದೆಡೆಯಾದರೆ. ಮತ್ತೊಂದೆಡೆ ಗಣೇಶ್ ಅಭಿನಯದ ಮತ್ತೊಂದು ಸೂಪರ್ ಹಿಟ್ ಸಿನಿಮಾ ರಿಲೀಸ್ ಆಗಿದ್ದು ಇದೇ ದಿನ. ಗಣೇಶ್ ಪಾಲಿಗೆ ಇಂದು ಡಬಲ್ ಸಂತಸ.

  ಗಣೇಶ್-ಯೋಗರಾಜ್ ಭಟ್ಟರ 'ಮುಂಗಾರು ಮಳೆ'ಗೆ 14 ವರ್ಷ ತುಂಬಿದ ಸಂತಸಗಣೇಶ್-ಯೋಗರಾಜ್ ಭಟ್ಟರ 'ಮುಂಗಾರು ಮಳೆ'ಗೆ 14 ವರ್ಷ ತುಂಬಿದ ಸಂತಸ

  ಹೌದು, ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಚಮಕ್ ಸಿನಿಮಾ ರಿಲೀಸ್ ಆಗಿದ್ದು ಇದೇ ಇದೆ. ಮೂರು ವರ್ಷಗಳ ಹಿಂದೆ ಇದೇ ದಿನ ಅಂದರೆ ಡಿಸೆಂಬರ್ 29 , 2017ರಲ್ಲಿ ಚಮಕ್ ಸಿನಿಮಾ ರಾಜ್ಯದಾದ್ಯಂತ ತೆರೆ ಕಂಡಿತ್ತು. ರಶ್ಮಿಕಾ ಮತ್ತು ಗಣೇಶ್ ಮೊದಲ ಬಾರಿಗೆ ಒಟ್ಟಿಗೆ ಅಭಿಮಾನಿಗಳ ಮುಂದೆ ಬಂದಿದ್ದರು.

  ಇಬ್ಬರ ಕಾಂಬಿನೇಷನ್ ಚಿತ್ರಪ್ರೇಕ್ಷಕರ ಹೃದಯ ಗೆದ್ದಿತ್ತು. ಪುಟ್ಟ ಟೀಸರ್ ಮೂಲಕ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದ್ದ ಚಮಕ್ ಸಿನಿಮಾ ಆದ ಬಳಿಕ ಪ್ರೇಕ್ಷಕರು ಅದ್ದೂರಿಯಾಗಿ ಸ್ವಾಗತ ಮಾಡಿ, ಯಶಸ್ಸು ತಂದುಕೊಟ್ಟಿದ್ದರು. ಚಿತ್ರದಲ್ಲಿ ಡಾಕ್ಟರ್ ಆಗಿ ಗಣೇಶ್ ಮಿಂಚಿದ್ರೆ, ರಶ್ಮಿಕಾ, ಗಣೇಶ್ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  ಅಂದಹಾಗೆ ಚಮಕ್ ಸಿನಿಮಾ ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬಂದಿತ್ತು. ಸಿನಿಮಾದ ಕಥೆ, ಗಣೇಶ್ ಮತ್ತು ರಶ್ಮಿಕಾ ಅಭಿನಯದ ಜೊತೆಗೆ ಚಿತ್ರದ ಹಾಡಿಗಳು ಸಹ ಗಾನಪ್ರಿಯರ ಹೃದಯ ಗೆದ್ದಿತ್ತು. ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ.

  Ganesh ಕನ್ನಡ ಚಿತ್ರರಂಗದ ಸ್ಟಾರ್ ಆಗಿ 14 ವರ್ಷ ಆಯ್ತು | Filmibeat Kannada

  ಇದೀಗ ಮತ್ತೆ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಒಂದಾಗುತ್ತಿದ್ದಾರೆ. ಚಮಕ್ ಬಳಿಕ ಸಖತ್ ಎನ್ನುವ ಸಿನಿಮಾ ಮೂಲಕ ಎರಡನೇ ಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಗಣೇಶ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Kannada Actor Ganesh and Rashmika Mandanna Starrer Chamak Movie Completes 3 Years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion