»   » ಕೆನಡಾ -ಯು.ಎಸ್ ಸುತ್ತಲು ಹೊರಟರು ರಶ್ಮಿಕಾ ಮತ್ತು ಗಣೇಶ್

ಕೆನಡಾ -ಯು.ಎಸ್ ಸುತ್ತಲು ಹೊರಟರು ರಶ್ಮಿಕಾ ಮತ್ತು ಗಣೇಶ್

Posted By:
Subscribe to Filmibeat Kannada

ಕರ್ನಾಟಕದ ಜನರಿಗೆ ಚಮಕ್ ಕೊಟ್ಟು ಸಿನಿಮಾ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಗಣೇಶ್ ಹಾಗೂ ರಶ್ಮಿಕಾ ಜೋಡಿ ಕೆನಡಾ ಮತ್ತು ಯುಎಸ್ ಗೆ ಹೊರಡಲು ರೆಡಿ ಆಗಿದ್ದಾರೆ. ಸಿನಿಮಾ ರಿಲೀಸ್ ಆದ್ಮೇಲೆ ಇವರಿಬ್ಬರು ಯಾಕೆ ಕೆನಡಾಗೆ ಹೋಗ್ತಿದ್ದಾರೆ ಅಂತ ಯೋಚನೆ ಮಾಡಬೇಡಿ.

ಕೆನಡಾ ಮತ್ತು ಯುಎಸ್ ಗೆ ಹೋಗುತ್ತಿರೋದು ಖುಷ್ ಮತ್ತು ಖುಷಿ. ಹೌದು ಚಮಕ್ ಚಿತ್ರ ವಿದೇಶದಲ್ಲಿ ಬಿಡುಗಡೆ ಆಗಲು ರೆಡಿಯಾಗಿದೆ. ಇದೇ ತಿಂಗಳ(ಜನವರಿ) 5 ರಿಂದ ಸಿನಿಮಾ ತೆರೆ ಕಾಣಲಿದ್ದು ಈ ಬಗ್ಗೆ ನಿರ್ದೇಶಕ ಸುನಿ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಪ್ರೇಕ್ಷಕರಿಗೆ 'ಚಮಕ್' ಕೊಟ್ಟು ಕೋಟಿ ಕೋಟಿ ಬಾಚಿದ ಗೋಲ್ಡನ್ ಸ್ಟಾರ್

Ganesh and Rashmika starrer Chamak movie releasing in the US and Canada.

ಯುಎಸ್ ನಲ್ಲಿ 31 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಮಕ್ ಚಿತ್ರ ರಿಲೀಸ್ ಆಗಲಿದೆ. ಈ ಹಿಂದೆ ರಶ್ಮಿಕಾ ಅಭಿನಯದ 'ಕಿರಿಕ್ ಪಾರ್ಟಿ' ಹಾಗೂ ಗಣೇಶ್ ಅಭಿನಯದ 'ಮುಂಗಾರುಮಳೆ2' ಚಿತ್ರಗಳು ವಿದೇಶದಲ್ಲಿ ತೆರೆಕಂಡು ಭರ್ಜರಿ ಯಶಸ್ಸುಗಳಿಸಿದ್ದವು.

Ganesh and Rashmika starrer Chamak movie releasing in the US and Canada.

ಸದ್ಯ ರಾಜ್ಯದ್ಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಚಮಕ್ ಚಿತ್ರಕ್ಕೆ ಸಖತ್ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಇಂದಿಗೂ ಎಲ್ಲೆಡೆ ತುಂಬು ಪ್ರದರ್ಶನ ಕಾಣುತ್ತಿದ್ದು ಚಿತ್ರವನ್ನ ಟಿ ಆರ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.

English summary
Golden star Ganesh and Rashmika starrer Chamak kannada movie is releasing in the US and Canada. The movie is directed by Simple Suni.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X